ರಿಯಾದ್‌ನ ಕಿಂಗ್ ಖಾಲೀದ್ ಏರ್ಪೋರ್ಟ್ ಮೇಲೆ ಹೊಸ ಕ್ಷಿಪಣಿ ದಾಳಿ
ಹಿಂದಿನ ದಿನ ನಡೆದ ಭೀಕರ ದಾಳಿಯಲ್ಲಿ ಭಾರತೀಯ ಪ್ರಜೆ ಸೇರಿ 13 ಜನರು ಸಾವು.
ರಿಯಾದ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಅಧಿಕಾರಿಗಳು
ರಿಯಾದ್: ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯೆಮೆನ್‌ನ ಹೂತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ ಮಾರನೇ ದಿನವೇ ಮತ್ತೊಂದು ಹೊಸ ದಾಳಿ ನಡೆಸಿದೆ. ಖಾಲೀದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ಯಾಸೆಂಜರ್ ಟರ್ಮಿನಲ್ ಮೇಲೆ ಮತ್ತೊಮ್ಮೆ ಭೀಕರ ದಾಳಿ ನಡೆಸಿದ್ದಾರೆ.
ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಹಿತಿಯ ಪ್ರಕಾರ, ವಿಮಾನ ನಿಲ್ದಾಣದ ಟರ್ಮಿನಲ್ 4ಕ್ಕೆ ಕ್ಷಿಪಣಿ ಅಪ್ಪಳಿಸಿದ್ದು, ತೀವ್ರ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, 11 ಜನರು ತೀವ್ರ ಗಾಯಗೊಂಡಿದ್ದಾರೆ ಎಂದು ವಿದೇಶಿ ಮಾದ್ಯಮಗಳು ವರದಿ ಮಾಡಿವೆ.
ವಿಮಾನ ನಿಲ್ದಾಣದ ಸಮೀಪದಲ್ಲೇ ಸೌದಿ ವಾಯು ರಕ್ಷಣಾ ಪಡೆಗಳು ಕ್ರೂಸ್ ಕ್ಷಿಪಣಿಯೊಂದನ್ನು ಯಶಸ್ವಿಯಾಗಿ ತಡೆದು ನಾಶಪಡಿಸಿದೆ. ಒಂದರ ನಂತರ ಒಂದರಂತೆ ವಿಮಾನ ನಿಲ್ದಾಣದ ಮೇಲಾಗುತ್ತಿರುವ ದಾಳಿಯಾಗುತ್ತಿರುವ ನಿಟ್ಟಿನಲ್ಲಿ ರಿಯಾದ್ ಅಧಿಕಾರಿಗಳು ಕಿಂಗ್ ಖಾಲೀದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟ ಹಾಗೂ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಇರಾನ್ ಯುದ್ಧ ಆರಂಭವಾದಾಗಿನಿಂದ ಹಾಗೂ ಕಳೆದ ಒಂದು ದಶಕದಲ್ಲೇ ಸೌದಿ ನೆಲದಲ್ಲಿ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ. ಶನಿವಾರ ನಡೆದ ಈ ಭೀಕರ ದಾಳಿಯಲ್ಲಿ 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಭೀಕರ ದಾಳಿ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚೆಕ್ಕಿಂಗ್ನಲ್ಲಿ ಪ್ರಯಾಣಿಕರು ಸಾಲಾಗಿ ಸಾಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ದಾಳಿ ನಡೆದಿದೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಿರುವ ದೃಶ್ಯಗಳು, ಸ್ಫೋಟದ ತೀವ್ರತೆಗೆ ಮೇಲ್ಚಾವಣಿಯ ಭಾಗಗಳು ಕುಸಿದುಬಿದ್ದಿರುವುದು ವಿಡಿಯೋದಲ್ಲಿ ಇದೆ.
ಕಳೆದ 24 ಗಂಟೆಗಳಲ್ಲಿ ಪೂರ್ವ ಭಾಗದಲ್ಲಿರುವ ದಮ್ಮಾಮ್ ವಿಮಾನ ನಿಲ್ದಾಣದ ಮೇಲಿನ ದಾಳಿ ಸೇರಿದಂತೆ ಅನೇಕ ದಾಳಿಗಳ ಜವಾಬ್ದಾರಿಯನ್ನು ಇರಾನ್ ಬೆಂಬಲಿತ ಗುಂಪು ಹೊತ್ತುಕೊಂಡಿದೆ. ಸೌದಿ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡಿರುವುದಾಗಿ ಬೆದರಿಕೆ ಹಾಕಿದೆ.
ಕ್ಷಿಪಣಿಗಳು ವಿಮಾನ ನಿಲ್ದಾಣದ ಟರ್ಮಿನಲ್ 3 ಮತ್ತು 4ಕ್ಕೆ ಅಪ್ಪಳಿಸಿವೆ. ದಾಳಿಯಲ್ಲಿ ಸೌದಿ ಅರೇಬಿಯಾದ ನಾಲ್ವರು, ಇಬ್ಬರು ಬಾಂಗ್ಲಾದೇಶಿಯರು, ಭಾರತ, ಅಮೆರಿಕ, ಈಜಿಪ್ಟ್, ಜೋರ್ಡಾನ್, ಸಿರಿಯಾ, ಸುಡಾನ್ ಮತ್ತು ಪ್ಯಾಲೆಸ್ತೇನ್‌ನ ತಲಾ ಒಬ್ಬ ಪ್ರಜೆ ಮೃತಪಟ್ಟಿದ್ದಾರೆ. ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟ ತಿಳಿಸಿದೆ, (ಏಜೆನ್ಸೀಸ್)