ಓಮನ್​ ಮೇಲೆ ಬಾಂಬ್​ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ 
ವಿದೇಶ

ಯುದ್ಧ ಮುಗಿಸುವ ಅವಸರವಿಲ್ಲ: ಹೊರ್ಮುಜ್​ ಜಲಸಂಧಿ ತೆರೆಯಲು ಮುಂದಾದ ಓಮನ್? ಮೂಗು ತೂರಿಸಿದರೆ ಬಾಂಬ್​ ಹಾಕುತ್ತೇವೆ ಎಂದ ಟ್ರಂಪ್​! Donald Trump threatens Oman

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಗಿಯದ ಸಂಘರ್ಷ
  • ಇರಾನ್​ ಜೊತೆ ಸೇರಿ ಹೊರ್ಮುಜ್​ ಜಲಸಂಧಿ ತೆರೆಯಲು ಮುಂದಾಗಿರುವ ಓಮನ್​
  • ಈ ವಿಷಯದಲ್ಲಿ ಮೂಗು ತೂರಿಸಿದರೆ, ಬಾಂಬ್​ ಹಾಕುತ್ತೇವೆ ಎಂದ ಡೊನಾಲ್ಡ್​ ಟ್ರಂಪ್​
ವಾಷಿಂಗ್ಟನ್: ಸುಮಾರು ಆರೇಳು ತಿಂಗಳುಗಳಿಂದ ನಡೆಯುತ್ತಿರುವ ಇರಾನ್​ ಹಾಗೂ ಅಮೆರಿಕ ನಡುವಿನ ಸಂಘರ್ಷ ಸಮಾಪ್ತಿಯಾಗುವಂತೆ ಕಾಣುತ್ತಿಲ್ಲ.
ಇರಾನ್​ ಜೊತೆಗೆ ಸೇರಿಕೊಂಡು ಹೊರ್ಮುಜ್​ ಜಲಸಂಧಿ ತೆರೆಯಲು ಓಮನ್​ ಪ್ರಯತ್ನಪಟ್ಟರೆ, ಬಾಂಬ್​ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ (Donald Trump threatens Oman)​ ಬೆದರಿಕೆ ಹಾಕಿದ್ದಾರೆ.

ನನಗೆ ಯಾವುದೇ ಅವಸರವಿಲ್ಲ!

ಇರಾನ್​ ಕುರಿತು ಮಾಧ್ಯಗಳಿಗೆ ಹೇಳಿಕೆ ನೀಡಿರುವ ಡೊನಾಲ್ಡ್​ ಟ್ರಂಪ್​​, ನನಗೆ ಈ ಯುದ್ಧವನ್ನು ಆದಷ್ಟು ಬೇಗ ಮುಗಿಸಬೇಕು ಎನ್ನುವ ಯಾವುದೇ ಅವಸರವಿಲ್ಲ. ನಾನು ನಿಧಾನವಾಗಿ ಎಲ್ಲವನ್ನು ಮುಗಿಸುತ್ತೆನೆ ಎಂದಿದ್ದಾರೆ.

ನನಗೆ ಬಂದಿರುವ ಮಾಹಿತಿ ಪ್ರಕಾರ, ಓಮನ್​, ಇರಾನಿನ ಇಸ್ಲಾಮಿಕ್​ ರೆವೆಲ್ಯೂಷನರಿ ಗಾರ್ಡ್​ಗಳ ಜತೆಗೆ ಸೇರಿಕೊಂಡು ಹೊರ್ಮುಜ್​ ಜಲಸಂಧಿಯನ್ನು ಮತ್ತೆ ತೆರೆಯಲು ಮುಂದಾಗಿದೆ. ಇದು ಅಮೆರಿಕ ಮತ್ತು ಇರಾನ್​ ಸಂಘರ್ಷವಾಗಿದೆ. ನಮ್ಮ ನಡುವೆ ಓಮನ್​ ಮೂಗು ತೂರಿಸಿದರೆ, ಆ ದೇಶದ ಮೇಲೆ ಬಾಂಬ್​ ದಾಳಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


ಅಮೆರಿಕ ಒಪ್ಪಂದ ಮಾಡಿಕೊಳ್ಳುತ್ತಿದೆ!

ಇತ್ತ ಇರಾನ್​ ಸಂಸದ ಹಸನ್ ಕಶ್ಘಾವಿ, ಅಮೆರಿಕ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದರು, ಆಂತರಿಕವಾಗಿ ನಮ್ಮ ಜೊತೆಗೆ ಒಪ್ಪಂದಕ್ಕೆ ಮುಂದಾಗಿದೆ ಎಂದಿದ್ದಾರೆ. ಹೊರಗಿನ ಜಗತ್ತಿಗೆ ತಾನು ಯಾರಿಗೂ ಅಂಜಲ್ಲ ಎಂದು ತೋರಿಸಿಕೊಳ್ಳುವ ಟ್ರಂಪ್​ ನಮ್ಮೊಂದಿಗೆ ಒಪ್ಪಂದಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ಹೊರ್ಮುಜ್​ ಜಲಸಂಧಿ ಮುಚ್ಚಿದೆ. ಒಂದು ವೇಳೆ ಅದು ತೆರೆದರೆ, ಅಲ್ಲಿ ಸಂಚರಿಸುವ ಹಡಗುಗಳ ಮೇಲೆ ನಾವು ತೆರಿಗೆ ವಿಧಿಸುತ್ತೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಇದಕ್ಕೆ ಒಪ್ಪಿಕೊಳ್ಳದೆ ಹೋದರೆ ಯಾವುದೇ ಒಪ್ಪಂದ ಸಾಧ್ಯವಿಲ್ಲ ಎಂದು ಹಸನ್ ಕಶ್ಘಾವಿ ಹೇಳಿದ್ದಾರೆ,

(ಏಜನ್ಸೀಸ್​).