ಪಾಕಿಸ್ತಾನದ ಬ್ರಾಡ್ ಪೀಕ್‌ನಲ್ಲಿ ಹಿಮಪಾತmountaineers
- ಪಾಕಿಸ್ತಾನದ ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತ
- ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿ ಒಟ್ಟು 10 ಜನರಿದ್ದ ತಂಡ ಕಣ್ಮರೆ
Nirmal Purja: ವಿಶ್ವದ 12ನೇ ಅತ್ಯಂತ ಎತ್ತರದ ಪರ್ವತ ಪಾಕಿಸ್ತಾನದ ಬ್ರಾಡ್ ಪೀಕ್‌ನಲ್ಲಿ ಸಂಭವಿಸಿದ ಭೀಕರ ಹಿಮಪಾತಕ್ಕೆ ಸಿಲುಕಿ, ಹೆಸರಾಂತ ನೆಪಾಳಿ ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿ ಒಟ್ಟು 10 ಜನರಿದ್ದ ತಂಡ ಕಣ್ಮರೆಯಾಗಿದ್ದು, ಕನಿಷ್ಠ ಇಬ್ಬರು ಪರ್ವತಾರೋಹಿಗಳು ದಾರುಣವಾಗಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಓಮನ್ ದೇಶದ ನಧಿರಾ ಅಲ್ ಮತ್ತು ನೇಪಾಳದ ಪೂರ್ ಬಹದ್ದೂರ್ ಗುರುಂಗ್ ಅಲಿಯಾಸ್ ಯುಕ್ತಾ ಎಂದು ಗುರುತಿಸಲಾಗಿದೆ. ಬ್ರಿಟಿಷ್ ಸೇನೆಯ ಸ್ಪೆಷಲ್ ಫೋರ್ಸ್‌ನ ಮಾಜಿ ಯೋಧ ಹಾಗೂ 'ನಿಮ್ಸ್ ದಾಯ್' ಎಂದೇ ಪ್ರಸಿದ್ಧರಾಗಿರುವ ನಿರ್ಮಲ್ ಪುರ್ಜಾ ಮುಂದಾಳತ್ವದ ತಂಡವು ಕರಾಕೋರಂ ಪರ್ವತ ಶ್ರೇಣಿಯ 8,047 ಮೀಟರ್ ಎತ್ತರದ ಬ್ರಾಡ್ ಪೀಕ್ ಏರುವಾಗ ಗುರುವಾರ (ಜು.30) ಈ ದುರಂತ ಸಂಭವಿಸಿದೆ ಎಂದು ವಿವರಿಸಲಾಗಿದೆ.
ಅಲ್ಪೈನ್ ಕ್ಲಬ್ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಮೃತ ನಧಿರಾ ಅವರ ಶರೀರವನ್ನು ಹಿಮಪಾತದ ಸ್ಥಳದಿಂದ ಹೊರತೆಗೆಯಲಾಗಿದ್ದು, ಹೆಲಿಕಾಪ್ಟರ್ ಮೂಲಕ ಸ್ಕಾರ್ಡು ನಗರಕ್ಕೆ ಸಾಗಿಸಲಾಗಿದೆ. ನಿರ್ಮಲ್ ಪುರ್ಜಾ ಸೇರಿದಂತೆ ನಾಪತ್ತೆಯಾಗಿರುವ ಉಳಿದ ಪರ್ವತಾರೋಹಿಗಳಿಗಾಗಿ ರಕ್ಷಣಾ ಪಡೆಗಳಿಂದ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ನಿರ್ಮಲ್ 'ನಿಮ್ಸ್ ದಾಯ್' ಪುರ್ಜಾ, ಮಿಂಗ್ಮಾ ಡೇವಿಡ್ ಶೇರ್ಪಾ ಮತ್ತು ತೇಜನ್ ಗುರುಂಗ್ ಎಂಬ ಮೂವರು ವಿಶ್ವದಾಖಲೆಯ ಪರ್ವತಾರೋಹಿಗಳು ಒಟ್ಟುಗೂಡಿ ಈ ಸಾಹಸ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ. ನೇಪಾಳ ಮೂಲದ ನಿಮ್ಸ್ ದಾಯ್, ಯುಕೆ ಸ್ಪೆಷಲ್ ಫೋರ್ಸಸ್ ಮತ್ತು ಗೂರ್ಖಾ ರೆಜಿಮೆಂಟ್‌ನಲ್ಲಿ ಬರೋಬ್ಬರಿ 16 ವರ್ಷಗಳ ಕಾಲ ಯೋಧನಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಪರ್ವತಾರೋಹಣ ಕ್ಷೇತ್ರದಲ್ಲಿ ಹತ್ತಾರು ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ.
ನೇಪಾಳ ಮೂಲದ ನಿಮ್ಸ್ ದಾಯ್, ಯುಕೆ ಸ್ಪೆಷಲ್ ಫೋರ್ಸಸ್ (SBS) ಮತ್ತು ಗೂರ್ಖಾ ರೆಜಿಮೆಂಟ್‌ನಲ್ಲಿ ಬರೋಬ್ಬರಿ 16 ವರ್ಷಗಳ ಕಾಲ ಯೋಧನಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು, ಪರ್ವತಾರೋಹಣ ಕ್ಷೇತ್ರದಲ್ಲಿ ಹತ್ತಾರು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಸದ್ಯ ಇಡೀ ವಿಶ್ವದ ಪರ್ವತಾರೋಹಣ ಕೂಟ, ಕುಟುಂಬಸ್ಥರು ಮತ್ತು ಭಾರತೀಯರು ನಾಪತ್ತೆಯಾಗಿರುವ ಉಳಿದ ಸಾಹಸಿಗಳು ಜೀವಂತವಾಗಿ ತವರಿಗೆ ಮರಳಲಿ ಎಂದು ಪ್ರಾರ್ಥಿಸಿದ್ದಾರೆ,(ಏಜೆನ್ಸೀಸ್).