Cafe Blast In Syria's Damascus 
ವಿದೇಶ

ಸಿರಿಯಾ ಡಮಾಸ್ಕಸ್‌ನಲ್ಲಿನ ಕೆಫೆಯಲ್ಲಿ ಬಾಂಬ್​ ಸ್ಫೋಟ: 9 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ..Cafe Blast Damascus

ಪ್ರಮುಖ ಮುಖ್ಯಾಂಶಗಳು

  • ಡಮಾಸ್ಕಸ್‌ನಲ್ಲಿರುವ ಕೆಫೆಯೊಂದರಲ್ಲಿ ಗುರುವಾರ ಬಾಂಬ್​ ಸ್ಫೋಟ
  • 9 ಮಂದಿ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
  • ಟೇಬಲ್​ನಡಿ ಯಾರಿಗೂ ತಿಳಿಯದಂತೆ ಬಾಂಬ್​ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿ
ಸಿರಿಯಾ: ಡಮಾಸ್ಕಸ್‌ನಲ್ಲಿರುವ ಕೆಫೆಯೊಂದರಲ್ಲಿ  ಗುರುವಾರ ಬಾಂಬ್​ ಸ್ಫೋಟಗೊಂಡಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಇನ್ನು ಗಂಭೀರ ಗಾಯಗೊಂಡ 16ಕ್ಕೂ ಮಂದಿಯನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೆಫೆ ಬ್ಲಾಸ್ಟ್

ವರದಿಗಳ ಪ್ರಕಾರ, ವ್ಯಕ್ತಿಯೊಬ್ಬ ಕೆಫೆಯೊಳಗೆ ಹೋಗಿ, ಟೇಬಲ್ ಅಡಿಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು  ಇಟ್ಟು ನಂತರ ಅಲ್ಲಿಂದ ಹೊರಟುಹೋಗಿದ್ದಾನೆ. ಆತ ಬಹುಶಃ ಹೆಚ್ಚಿನ ದಾಳಿಗಳನ್ನು ನಡೆಸಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಬಾಂಬ್​ ಸ್ಫೋಟಗೊಂಡ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

ಆತಂಕದಲ್ಲಿರುವ ಜನ

ಬಾಂಬ್​ ಶಬ್ಧ ಕೇಳುತ್ತಿದ್ದಂತೆ ಜಲಾಲ್ ಅಲ್ಜನನಿ ರೆಸ್ಟೋರೆಂಟ್​​​ನಿಂದ ಜನರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿ ಬಗ್ಗೆ ಪೊಲೀಸರಿಗೆ ಮಾಹಿತಿ ಕಂಡಿದ್ದಾರೆ. ಅನಾಥವಾಗಿ ಬಿದ್ದಿದ್ದ ಮೃತದೇಹವನ್ನು ಕಂಡು ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. 
ಸಂಚಾರ ಪೊಲೀಸರು, ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬರುವವರೆಗೂ ನಮ್ಮ ಕೈಲಾದಷ್ಟು  ಗಾಯಾಳುಗಳನ್ನು ಆಸ್ಪತ್ರೆಗೆ ಸಾಗೊಸುವ ಕೆಲಸ ಮಾಡುತ್ತಿದ್ದೆವು. ಹಲವರು ತೀವ್ರ ರಕ್ತಸ್ರಾವ ಹಾಗೂ ಗಾಯದಿಂದ ಬಳಲುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ. 

ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ

ಡಿಸೆಂಬರ್ 2024ರಲ್ಲಿ ಮಿಂಚಿನ ದಂಗೆಯ ಮೂಲಕ ಅಸ್ಸಾದ್ ರಾಜವಂಶವನ್ನು ಉರುಳಿಸಿ, ಸಿರಿಯಾದ ಹೊಸ ಆಡಳಿತಗಾರರು ಅಧಿಕಾರಕ್ಕೆ ಬಂದಾಗಿನಿಂದ, ಇಸ್ಲಾಮಿಕ್ ಸ್ಟೇಟ್ ಗುಂಪಿನ ಉಗ್ರಗಾಮಿಗಳ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ. ರಾಜಧಾನಿ  ಸುತ್ತಮುತ್ತಲಿನ ದಾಳಿಗಳನ್ನು ತಡೆಯುವ ಪ್ರಯತ್ನದಲ್ಲಿ ಕ್ರಮ ಕೈಗೊಂಡಿದ್ದಾರೆ
2011ರಲ್ಲಿ ಸಿರಿಯಾದಲ್ಲಿ ದಂಗೆ ಪ್ರಾರಂಭವಾಗಿ ಯುದ್ಧವಾಗಿ ಮಾರ್ಪಟ್ಟಿತ್ತು. ಸಿರಿಯಾದ ಅಧ್ಯಕ್ಷ ಅಹ್ಮದ್ ಅಲ್-ಶಾರಾ ಅವರು ಈ ಹಿಂದೆ ಅಲ್-ಖೈದಾ ಜೊತೆ ಗುರುತಿಸಿಕೊಂಡಿದ್ದ 'ಹಯಾತ್ ತಹ್ರೀರ್ ಅಲ್ ಶಾಮ್' ಗುಂಪಿನ ನೇತೃತ್ವ ವಹಿಸಿದ್ದರು. ಆದರೆ ಅಧಿಕಾರಕ್ಕೆ ಬಂದಾಗಿನಿಂದ ಅವರು ಎಲ್ಲಾ ಹಿನ್ನೆಲೆಯ ಸಿರಿಯನ್ ಪ್ರಜೆಗಳನ್ನು, ವಿಶೇಷವಾಗಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಅಲ್-ಶಾರಾ ಅವರು ದೇಶದ ಬಹುಪಾಲು ಪ್ರದೇಶಗಳ ಮೇಲೆ ಸರ್ಕಾರದ ಸಂಪೂರ್ಣ ಅಧಿಕಾರವನ್ನು ಮರುಸ್ಥಾಪಿಸಿದ್ದು, ಉಗ್ರಗಾಮಿ ಗುಂಪುಗಳು ಅಥವಾ ಕುರ್ದಿಶ್ ನೇತೃತ್ವದ ಪಡೆಗಳಿಂದ ನಿಯಂತ್ರಣವನ್ನು ಹಿಂಪಡೆದಿದ್ದಾರೆ. ಆದಾಗ್ಯೂ, ಅವರು ದೇಶವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವಾಗ ಇನ್ನೂ ಭದ್ರತಾ ಕಾಳಜಿಗಳನ್ನು ಎದುರಿಸುತ್ತಿದ್ದಾರೆ, (ಏಜೆನ್ಸೀಸ್).