ಆಕ್ಲ್ಯಾಂಡ್: ಪ್ರಪಂಚದಾದ್ಯಂತ ಹೊಸ ವರ್ಷದ ಆಚರಣೆಗಳು ಆರಂಭವಾಗುತ್ತಿದ್ದಂತೆ, ನ್ಯೂಜಿಲೆಂಡ್‌ನ ಆಕ್ಲ್ಯಾಂಡ್ ನಗರವು 2026ರ ಹೊಸ ವರ್ಷಕ್ಕೆ ಅದ್ಭುತ ಫೈರ್‌ವರ್ಕ್ಸ್(ಪಟಾಕಿ) ಪ್ರದರ್ಶನದೊಂದಿಗೆ ಸ್ವಾಗತ ಕೋರಿದೆ.
ನ್ಯೂಜಿಲೆಂಡ್‌ನ ಅತ್ಯಂತ ಎತ್ತರದ ಕಟ್ಟಡವಾದ ಸ್ಕೈ ಟವರ್‌ನಿಂದ ಉಡಾವಣೆಗೊಂಡ ಈ ಫೈರ್‌ವರ್ಕ್ಸ್ ಪ್ರದರ್ಶನವು ಪ್ರಪಂಚದ ಮೊದಲ ಪ್ರಮುಖ ನಗರವಾಗಿ 2026ಕ್ಕೆ ಸ್ವಾಗತ ಕೋರಿದೆ.ಮಧ್ಯರಾತ್ರಿ ಸಮಯದಲ್ಲಿ ಆರಂಭವಾದ ಈ ಐದು ನಿಮಿಷಗಳ ಪ್ರದರ್ಶನದಲ್ಲಿ ಸುಮಾರು 3,500 ಫೈರ್‌ವರ್ಕ್ಸ್‌ಗಳನ್ನು ಸ್ಕೈ ಟವರ್‌ನ ವಿವಿಧ ಮಹಡಿಗಳಿಂದ ಉಡಾವಣೆ ಮಾಡಲಾಯಿತು.
240 ಮೀಟರ್ ಎತ್ತರದ ಈ ಟವರ್‌ನಿಂದ ಹೊರಬಿದ್ದ ಬಣ್ಣಬಣ್ಣದ ಫೈರ್‌ವರ್ಕ್ಸ್ ಆಕಾಶವನ್ನು ಬೆಳಗಿಸಿ, ನಗರದ ಆಕಾಶದಲ್ಲಿ ಅದ್ಭುತ ದೃಶ್ಯವನ್ನು ಸೃಷ್ಟಿಸಿತು. ಸಾವಿರಾರು ಜನರು ಡೌನ್‌ಟೌನ್ ವಾಟರ್‌ಫ್ರಂಟ್‌ನಲ್ಲಿ ಸೇರಿ ಈ ಪ್ರದರ್ಶನವನ್ನು ವೀಕ್ಷಿಸಿದರು ಮತ್ತು ಹರ್ಷೋದ್ಗಾರಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದರು.
ಸ್ಕೈ ಟವರ್‌ನಲ್ಲಿ ರಾತ್ರಿ 9 ಗಂಟೆಯಿಂದಲೇ 2025ರ ವಿಶೇಷ ಕ್ಷಣಗಳ ಚಿತ್ರಗಳನ್ನು ಪ್ರೊಜೆಕ್ಟ್ ಮಾಡಲಾಗಿತ್ತು. ಇದಲ್ಲದೆ, ಆಕ್ಲ್ಯಾಂಡ್ ಹಾರ್ಬರ್ ಬ್ರಿಡ್ಜ್‌ನಲ್ಲಿ ಹೊಸ ಲೈಟ್ ಮತ್ತು ಸೌಂಡ್ ಶೋ ನಡೆಯಿತು, ಇದು ಮಿಡ್‌ನೈಟ್ ಕೌಂಟ್‌ಡೌನ್‌ಗೆ ಸಿಂಕ್ರೊನೈಸ್ ಆಗಿತ್ತು.ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಅವರು ಸಾಮಾಜಿಕ ಮಾಧ್ಯಮದಲ್ಲಿ "ಹ್ಯಾಪಿ ನ್ಯೂ ಇಯರ್, ನ್ಯೂಜಿಲೆಂಡ್!" ಎಂದು ಪೋಸ್ಟ್ ಮಾಡಿ ದೇಶವಾಸಿಗಳಿಗೆ ಶುಭಾಶಯ ಕೋರಿದರು. ಕಿರಿಬಾಟಿಯ ಕ್ರಿಸ್ಮಸ್ ಐಲ್ಯಾಂಡ್ ನಂತರ ಆಕ್ಲ್ಯಾಂಡ್ ಪ್ರಪಂಚದ ಮೊದಲ ಪ್ರಮುಖ ನಗರವಾಗಿ ಹೊಸ ವರ್ಷವನ್ನು ಸ್ವಾಗತಿಸಿತು,(ಏಜೆನ್ಸೀಸ್).