ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ 
ವಿದೇಶ

ತೈಲ ಮಾರುಕಟ್ಟೆಯಲ್ಲಿ ಹೊಸ ಸಂಚಲನ: ಇರಾನ್ ಬಿಟ್ಟು ವೆನೆಜುವೆಲಾ ಕಡೆ ಮುಖ ಮಾಡಿದ ಭಾರತ? ಟ್ರಂಪ್ ಹೇಳಿಕೆಯ ಹಿಂದಿನ ರಹಸ್ಯವೇನು? Donald Trump

ಪ್ರಮುಖ ಮುಖ್ಯಾಂಶಗಳು

  • ಭಾರತ ಇನ್ಮುಂದೆ ಇರಾನಿನಿಂದ ಕಚ್ಚಾ ತೈಲ ಖರೀದಿಸುವುದಿಲ್ಲ
  • ವೆನೆಜುವೆಲಾದ ತೈಲವನ್ನು ಭಾರತ ಪಡೆಯಲಿದೆ
  • ಭಾರತ ಮತ್ತು ಅಮೆರಿಕ ನಡುವೆ ಈ ಕುರಿತು ಒಪ್ಪಂದ ನಡೆದಿದೆ : ಅಮೆರಿಕ ಅಧ್ಯಕ್ಷ
ಅಮೆರಿಕ: ಭಾರತ ಇನ್ನು ಮುಂದೆ ಕಚ್ಚಾ ತೈಲವನ್ನು ಇರಾನಿನ ಬದಲಿಗೆ ವೆನೆಜುವೆಲಾದಿಂದ ಖರೀದಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ನಮ್ಮ ನಡುವೆ ಈಗಾಗಲೇ ಒಪ್ಪಂದವಾಗಿರುವ ಹಿನ್ನೆಲೆಯಲ್ಲಿ ಭಾರತವು ಇರಾನಿನಿಂದ ಕಚ್ಚಾ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿ, ವೆನೆಜುವೆಲಾದ ಕಚ್ಚಾ ತೈಲವನ್ನು ಖರೀದಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಾಷಿಂಗ್ಟನ್ ಡಿಸಿಯಿಂದ ಫ್ಲೋರಿಡಾಕ್ಕೆ ಹೋಗುತ್ತಿರುವಾಗ ಮಾರ್ಗಮಧ್ಯೆ ಟ್ರಂಪ್​ ಸುದ್ದಿಗಾರರೊಂದಿಗೆ, ತಮ್ಮ ಹಾಗೂ ಭಾರತ್ ನಡುವಿನ ಒಪ್ಪಂದದ ಬಗ್ಗೆ ಮಾತನಾಡಿದ್ದಾರೆ.
ರಷ್ಯಾದ ಕಚ್ಚಾ ತೈಲ ಇಳಿಕೆಯಾಗುತ್ತಿರುವ ಹಿನ್ನಲೆ ಆಮದನ್ನು ಬದಲಾಯಿಸಲು ವೆನೆಜುವೆಲಾದ ತೈಲವನ್ನು ಖರೀದಿಸುವಂತೆ ಭಾರತಕ್ಕೆ ತಿಳಿಸಿದ ನಂತರ ಈ ಹೇಳಿಕೆಗಳು ಕೇಳಿಬಂದಿವೆ.
ಕಳೆದ ವರ್ಷ ಅಮೆರಿಕ ವೆನೆಜುವೆಲಾದಿಂದ ಭಾರತ ತೈಲವನ್ನು ಖರೀದಿಸಲು ಮುಂದಾದಾಗ ಹೆಚ್ಚಿನ ಸುಂಕವನ್ನು ಹೇರಿತ್ತು. ಇದರಿಂದಾಗಿ ಭಾರತವು ಕಚ್ಚಾ ತೈಲವನ್ನು ರಷ್ಯಾದಿಂದ ಪಡೆಯಲು ಮುಂದಾಗಿತ್ತು. ಕೆಲ ತಿಂಗಳುಗಳ ಹಿಂದೆ ಜಾಗತಿಕ ರಾಜಕಾರಣದಲ್ಲಿ ನಡೆದ ಭಾರಿ ಬದಲಾವಣೆಯ ಕಾರಣ ಈಗ ಮತ್ತೆ ಅಮೆರಿಕ, ಭಾತರವು ವೆನೆಜುವೆಲಾದ ತೈಲವನ್ನು ಖರೀದಿಸುವ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಹೇಳುತ್ತಿದೆ.
ಟ್ರಂಪ್ ಆಡಳಿತವು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮೇಲೆ ಒತ್ತಡವನ್ನು ಹೆಚ್ಚಿಸಿದ್ದರಿಂದ ಭಾರತ ಸೇರಿದಂತೆ ವೆನೆಜುವೆಲಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ಮಾರ್ಚ್ 2025 ರಲ್ಲಿ 25 ಪ್ರತಿಶತ ಹೆಚ್ಚಿನ ಸುಂಕಗಳನ್ನು ವಿಧಿಸಲಾಗಿತ್ತು.

ವೆನೆಜುವೆಲಾದಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪನೆ

ಶನಿವಾರ (ಜ.31) ರಂದು ವೆನೆಜುವೆಲಾಗೆ ಯುನೈಟೆಡ್ ಸ್ಟೇಟ್ಸ್‌ನ ಹೊಸ ಉನ್ನತ ರಾಯಭಾರಿ ಲಾರಾ ಎಫ್ ಡೋಗು ತೆರಳಿದ್ದು, ಏಳು ವರ್ಷಗಳ ನಂತರ ವೆನೆಜುವೆಲಾದಲ್ಲಿ ಅಮೆರಿಕ ರಾಯಭಾರ ಕಚೇರಿಯನ್ನು ಮತ್ತೆ ತೆರೆಯುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ವೆನೆಜುವೆಲಾಗೆ ಲಾರಾ ಎಫ್ ಡೋಗು ಆಗಮನವು ಯುಎಸ್-ವೆನೆಜುವೆಲಾ ಸಂಬಂಧಗಳ ಪುನಃಸ್ಥಾಪನೆಯತ್ತ ಮಹತ್ವದ ಸಾರ್ವಜನಿಕ ಹೆಜ್ಜೆಯನ್ನು ಸೂಚಿಸುತ್ತದೆ. 2019 ರಲ್ಲಿ ಯುಎಸ್ ತನ್ನ ರಾಜತಾಂತ್ರಿಕರನ್ನು ಹಿಂತೆಗೆದುಕೊಂಡ ನಂತರ ಕ್ಯಾರಕಾಸ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು,(ಏಜನ್ಸೀಸ್​).