ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು
ವಾಷಿಂಗ್ಟನ್: ಪ್ರಸ್ತುತ, ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಯುದ್ಧ ದಾಳಿಗಳು ಅದ್ಯಾಕೋ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಆರಂಭದಲ್ಲಿ ದೊಡ್ಡ ಮಟ್ಟದ ಕ್ಷಿಪಣಿ ದಾಳಿಗಳನ್ನು ಜಂಟಿಯಾಗಿ ಯುಎಸ್-ಇಸ್ರೇಲ್ ಪಡೆಗಳು ನಡೆಸಿತು. ಆದರೀಗ, ಖಮೇನಿ ಹತ್ಯೆ ಬೆನ್ನಲ್ಲೇ ಸೇಡಿಗೆ ಪಣತೊಟ್ಟು ನಿಂತಿರುವ ಇರಾನ್, ಖತಾರ್, ದುಬೈನಂತಹ ರಾಷ್ಟ್ರಗಳ ಮೇಲೆ ಸರಣಿ ಅಟ್ಯಾಕ್ಗಳನ್ನು ಕೈಗೊಂಡಿದೆ. ಈ ಮಧ್ಯೆ, ಇಸ್ರೇಲಿನ ಪ್ರಧಾನಿ ಎಲ್ಲಿ? ಅವರ ಕಣ್ಮರೆ ಬಗ್ಗೆ ಟ್ರಂಪ್ ಸರ್ಕಾರ ಹೇಳುವುದೇನು? ಎಂಬ ಪ್ರಶ್ನೆಗಳು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಾಷಿಂಗ್ಟನ್‌ನಲ್ಲಿರುವ ಅಧಿಕಾರಿಗಳು ಇರಾನ್‌ನ ಪರಿಸ್ಥಿತಿಯ ಬಗ್ಗೆ ಅಮೆರಿಕನ್ನರ ದಿಕ್ಕು ತಪ್ಪಿಸುತ್ತಿದ್ದಾರೆ. ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಲ್ಲಿ ಹೋದರು? ಅವರ ದಿಢೀರ್ ಕಣ್ಮರೆ ಹೇಗೆ? ಎಂದು ಸಂಪ್ರದಾಯವಾದಿ ಕಮೆಂಟೇಟರ್ ಕ್ಯಾಂಡೇಸ್ ಓವೆನ್ಸ್ ತಮ್ಮ ಎಕ್ಸ್ ಪೋಸ್ಟ್ ಮೂಲಕ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ತಮ್ಮ 'ಎಕ್ಸ್'ನಲ್ಲಿ ಪೋಸ್ಟ್ನಲ್ಲಿ ಓವೆನ್ಸ್, ಇರಾನ್‌ಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಅಮೆರಿಕದ ಅಧಿಕಾರಿಗಳು ಪಾರದರ್ಶಕವಾಗಿಲ್ಲ. ಇಲ್ಲಿ ಬೇರೆಯೇ ಏನೋ ಮಸಲತ್ತು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. "ಇರಾನ್‌ನಲ್ಲಿ ಈಗ ಏನು ನಡೆಯುತ್ತಿದೆ ಎಂಬುದರ ಕುರಿತು ವಾಷಿಂಗ್ಟನ್ ಡಿ.ಸಿ. ಅಮೇರಿಕದ ಜನತೆಗೆ ಸುಳ್ಳು ವಿಷಯಗಳನ್ನು ರವಾನಿಸುತ್ತಿದೆ. ಇದು ಸರಿಯಾದ ನಡೆಯಲ್ಲ ಎಂದು ಬರೆದುಕೊಂಡಿದ್ದಾರೆ.
ಎಐ ರಚಿತವಾದ ವಿಡಿಯೊಗಳನ್ನು ಅವರ ಕಚೇರಿ ಪೋಸ್ಟ್ ಮಾಡುವುದು ಮತ್ತು ಡಿಲೀಟ್ ಮಾಡ್ತಿರುವುದು ಏಕೆ? ಅಷ್ಟಕ್ಕೂ 'ಬೀಬಿ' (ಇಸ್ರೇಲಿ ಪ್ರಧಾನಿ ಅಡ್ಡಹೆಸರು) ಎಲ್ಲಿದ್ದಾರೆ? ಶ್ವೇತಭವನದಲ್ಲಿ ಸಾಮೂಹಿಕ ಭೀತಿ ಏಕೆ ಮೂಡಿದೆ ಎಂದೆಲ್ಲ ಓವೆನ್ಸ್ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಸಾಕಷ್ಟು ಟೀಕೆ, ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಇದೀಗ ನೆತನ್ಯಾಹು ಕಚೇರಿ ಇದಕ್ಕೆ ಪ್ರತಿಕ್ರಿಯಿಸಿ, ಇವುಗಳು ನಕಲಿ ನಕಲಿ ಸುದ್ದಿಗಳು. ನಮ್ಮ ಪ್ರಧಾನಿಗಳು ಚೆನ್ನಾಗಿದ್ದಾರೆ ಎಂದು ತಿಳಿಸಿರುವುದಾಗಿ 'ದಿ ಹಿಂದೂಸ್ಥಾನ್ ಟೈಮ್ಸ್' ತನ್ನ ವರದಿಯಲ್ಲಿ ತಿಳಿಸಿದೆ,(ಏಜೆನ್ಸೀಸ್).