ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜೆಡಿ ವ್ಯಾನ್ಸ್ 
ವಿದೇಶ

ಪಾಕಿಸ್ತಾನದಲ್ಲಿ ಮಾತುಕತೆ ವಿಫಲಗೊಂಡಿದ್ದೇ ಈ ಕಾರಣಕ್ಕೆ! ​ಜೆಡಿ ವ್ಯಾನ್ಸ್​ ಹೇಳಿಕೆಗೆ ಸಿಟ್ಟಾದ ಇಸ್ರೇಲ್​ ಪ್ರಧಾನಿ ಹೇಳಿದ್ದಿಷ್ಟು

ಪ್ರಮುಖ ಮುಖ್ಯಾಂಶಗಳು

  • ಇಸ್ಲಾಮಾಬಾದ್​ನಲ್ಲಿ ವಿಫಲಗೊಂಡ ಇರಾನ್​-ಅಮೆರಿಕ ಮಾತುಕತೆ
  • ಮಾತುಕತೆ ಯಾವ ಕಾರಣಕ್ಕೆ ನಿಂತು ಹೋಯಿತೆಂದು ತಿಳಿಸಿದ ಇಸ್ರೇಲ್ ಪ್ರಧಾನಿ
US-Iran War: ಪ್ರಸ್ತುತ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಅಮೆರಿಕ-ಇಸ್ರೇಲ್​ ಮತ್ತು ಇರಾನ್​ ನಡುವಿನ ಭೀಕರ ಯುದ್ಧ ದಾಳಿಗಳು ತಾತ್ಕಾಲಿಕ ಕದನ ವಿರಾಮಕ್ಕೆ ಕರೆ ನೀಡಿದ ಬಳಿಕವೂ ಮುಂದುವರಿಯುತ್ತಿರುವುದು ಸದ್ಯ ಅಚ್ಚರಿಯ ಬೆಳವಣಿಗಗಳಿಗೆ ಸಾಕ್ಷಿಯಾಗಿದೆ.
ಇತ್ತೀಚೆಗಷ್ಟೇ, ಪಾಕಿಸ್ತಾನದ ಇಸ್ಲಾಮಾಬಾದ್​ಗೆ ಭೇಟಿ ನೀಡಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್​, ಇರಾನ್​ನ ಅಧಿಕಾರಿಗಳೊಂದಿಗೆ ಕುಳಿತು ಯುದ್ಧ ಅಂತ್ಯಗೊಳಿಸಲು ಒಂದಷ್ಟು ಷರತ್ತುಗಳನ್ನು ಮುಂದಿಟ್ಟರು. ಬಹುತೇಕರು, ಇಲ್ಲಿಗೆ ಸಮರ ಕೊನೆಗೊಳ್ಳುತ್ತದೆ. ಇನ್ನೆರೆಡು ದಿನಗಳಲ್ಲಿ ಎಲ್ಲವೂ ಯಥಾಸ್ಥಿತಿಗೆ ಮರಳಲಿದೆ ಎಂದೇ ಭಾವಿಸಿದ್ದರು. ಆದರೆ, ಅಂದುಕೊಂಡ ಹೋದ ಕೆಲಸ ಕಡೆಗೂ ನೆರವೇರಲಿಲ್ಲ. ಇದರಿಂದ ಅಮೆರಿಕದ ಬುಡಕ್ಕೆ ಬೆಂಕಿ ಬಿದ್ದಂತಾಗಿದೆ.
ಅಷ್ಟಕ್ಕೂ ಯಾವ ಕಾರಣಕ್ಕೆ ಮಾತುಕತೆಗಳು ವಿಫಲಗೊಂಡಿತು ಎಂಬುದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಬಹಿರಂಗಪಡಿಸಿದ್ದಾರೆ. ಅಮೆರಿಕಾ-ಇರಾನ್ ನಡುವಿನ ಇಸ್ಲಾಮಾಬಾದ್ ಮಾತುಕತೆಗಳು ಕೇವಲ ಕುಸಿಯಲಿಲ್ಲ. ಬದಲಿಗೆ ಸ್ಫೋಟಗೊಂಡಿವೆ. ಇರಾನ್ ಕದನ ವಿರಾಮ ಒಪ್ಪಂದದ ಪ್ರಮುಖ ಷರತ್ತನ್ನು ಪಾಲಿಸಲು ನಿರಾಕರಿಸಿದ ಮತ್ತು ಹೊರ್ಮುಜ್ ಜಲಸಂಧಿಯ ಮೂಲಕ ಸಾಗರ ಸಂಚಾರವನ್ನು ತೆರೆಯಲು ಒಪ್ಪದ ಕಾರಣ, ಅಮೆರಿಕ ಭಾರೀ ಆಕ್ರೋಶದಿಂದ ಮಾತುಕತೆಯನ್ನು ಇಲ್ಲಿಗೆ ನಿಲ್ಲಿಸಿದೆ ಎಂದರು.
ಜೆಡಿ ವ್ಯಾನ್ಸ್​ ನನ್ನೊಟ್ಟಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ದೂರವಾಣಿ ಕರೆಯಲ್ಲಿ ಕೆಲ ಸಮಯಗಳ ಕಾಲ ಮಾತನಾಡಿದರು. ಅಮೆರಿಕ ಏಕೆ ಕದನ ವಿರಾಮ ಒಪ್ಪಂದವನ್ನು ಕೈಬಿಟ್ಟಿತು. ಇಸ್ಲಾಮಾಬಾದ್​ನಲ್ಲಿ ಯಾವ ಕಾರಣಕ್ಕೆ ಮಾತುಕತೆಗಳು ವಿಫಲಗೊಂಡಿತು ಎಂಬುದನ್ನು ಸಂಪೂರ್ಣವಾಗಿ ತಿಳಿಸಿದರು. ಅಮೆರಿಕದ ಆಡಳಿತ ಮಂಡಳಿ ಪ್ರತಿದಿನ ನನಗೆ ಸೀಜ್​ ಫೈರ್​ ಕುರಿತಾಗಿ ಮಾಹಿತಿ ನೀಡುತ್ತಿದೆ ಎಂದು ಹೇಳಿದ್ದಾರೆ ನೆತನ್ಯಾಹು,(ಏಜೆನ್ಸೀಸ್).