ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ 8 ಮಂದಿ ಸಾವು, ನೂರಾರು ಜನ ನಾಪತ್ತೆ
- ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ 8 ಮಂದಿ ಸಾವು, ನೂರಾರು ಜನ ನಾಪತ್ತೆ.
- ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೇಪಾಳ ಸೇನೆಯಿಂದ ಮುಂದುವರಿದ ರಕ್ಷಣಾ ಕಾರ್ಯಾಚರಣೆ
- ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ
ಕಠ್ಮಂಡು: ಬುಧವಾರ (ಆ.26) ನೇಪಾಳದ ಉತ್ತರ ಪ್ರಾಂತ್ಯದಲ್ಲಿ ದಿಢೀರ್ ಪ್ರವಾಹ
(Nepal Flash Flood) ಅಪ್ಪಳಿಸಿದ ಪರಿಣಾಮ 8 ಜನ ಸಾವನ್ನಪ್ಪಿದ್ದು, ಹಲವು ಜನ ಕಣ್ಮರೆಯಾಗಿದ್ದಾರೆಂದು ವರದಿಯಾಗಿದೆ.
ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳ ಸುತ್ತಮುತ್ತಲಿನ ಪ್ರದೇಶ ಈ ಪ್ರವಾಹಕ್ಕೆ ತುತ್ತಾಗಿದ್ದು, ಇಲ್ಲಿದ್ದ ಮನೆ-ಮಠ ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯಗಳು ಪ್ರವಾಹದಲ್ಲಿ ಕೊಚ್ಚಿಹೋಗಿದೆ ಎಂದು ತಿಳಿದು ಬಂದಿದೆ.
ಒಮ್ಮೆ
ಲೇ ಅಪ್ಪಳಿಸಿದ ಪ್ರವಾಹ!
ನೇಪಾಳದ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಬೆಳಿಗ್ಗೆ 9 ಗಂಟೆ ಸುಮಾರಿಗೆ ಚೀನಾ ಗಡಿಯಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಭೋಟೆ ಕೋಶಿ ನದಿ ನೀರಿನ ಮಟ್ಟ ಒಮ್ಮೆಲೇ ಏರಿಕೆ ಕಂಡಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಂತರ ತ್ರಿಶೂಲಿ ನದಿ ಹಾಗೂ ನುವಾಕೋಟ್ ಪ್ರದೇಶಕ್ಕೆ ನುಗ್ಗಿದ ಈ ನೀರು ಸುತ್ತಮುತ್ತಲಿನ ಪ್ರದೇಶಗಳನ್ನು ನಾಶಪಡಿಸುತ್ತ ಮುನ್ನುಗಿದೆ. ನೀರಿನ ರಭಸಕ್ಕೆ ತುತ್ತಾಗಿ ನೂರರು ಜನ ಕಣ್ಮರೆಯಾಗಿದ್ದು, ಸದ್ಯ ಎಂಟು ಜನರ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದು, ಈ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ!
ಸದ್ಯ ಪ್ರವಾಹದ ಪ್ರಮಾಣ ತಗ್ಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ರಸ್ತೆ ಕೊಚ್ಚಿ ಹೋಗಿರುವ ಕಾರಣ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ.
ಮತ್ತೊಂದು ವರದಿ ಪ್ರಕಾರ, ರಕ್ಷಣಗೆ ಧಾವಿಸಿದ್ದ ಕೆಲವು ನೇಪಾಳ್ ಪೊಲೀಸ್ ಹಾಗೂ ರಕ್ಷಣಾ ಸಿಬ್ಬಂದಿ ಕೂಡ ಪರವಾಹದಲ್ಲಿ ಕೊಚ್ಚಿ ಹೋಗಿದ್ದಾರೆಂದು ಹೇಳಲಾಗುತ್ತಿದೆ.
ಸದ್ಯಕ್ಕೆ ನೇಪಾಳಿ ಸೈನಿಕರು 12 ಸೇನಾ ಹೆಲಿಕಾಪ್ಟರ್ ಮೂಲಕ ಸ್ಥಳ ವೀಕ್ಷಣೆ ಮಾಡುತ್ತಾ, ಜನರನ್ನು ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿರುವುದಾಗಿ ತಿಳಿದು ಬಂದಿದೆ, (ಏಜನ್ಸೀಸ್).