ಆಯತೊಲ್ಲಾ ಅಲಿ ಖಮೇನಿ (ಎಡ), ಮೋಜ್ತಬಾ ಖಮೇನಿ (ಬಲ)
- ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್ ಆದ ಮೋಜ್ತಬಾ ಖಮೇನಿ
- ವಾಕಿಂಗ್ ಎಂದು ಹೊರಹೋದ ಬೆನ್ನಲ್ಲೇ ಯುಎಸ್-ಇಸ್ರೇಲಿ ದಾಳಿ
- ಆಡಿಯೋ ಲೀಕ್ ಬಿಚ್ಚಿಡ್ತು ಅಸಲಿ ಕಾರಣ
ಟೆಹ್ರಾನ್: ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ಬಲಿಯಾದರು. ಅವರ ನಂತರ ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಅವರ ಪುತ್ರ ಮೋಜ್ತಬಾ ಖಮೇನಿ ಅಧಿಕಾರ ವಹಿಸಿಕೊಂಡರು. ಈಗ ಇವರನ್ನು ಟಾರ್ಗೆಟ್ ಮಾಡಿಕೊಂಡಿರುವ ಅಮೆರಿಕ, ಹೇಗಾದರೂ ನೂತನ ನಾಯಕನನ್ನು ಹೊಡೆದುರುಳಿಸಲು ಪಣತೊಟ್ಟಿದೆ.
ಫೆ.28ರಂದು ಅಮೆರಿಕ-ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಿಂದ ಮೋಜ್ತಬಾ ಪವಾಡದಂತೆ ಕೊದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ದಾಳಿಗೂ ಕೆಲವೇ ಸೆಕೆಂಡುಗಳ ಮೊದಲು ತಮ್ಮ ತೋಟದಲ್ಲಿ ವಾಕಿಂಗ್ ಮಾಡಲು ತೆರಳಿದ್ದೇ ಇಂದು ಅವರು ಜೀವಂತವಾಗಿರಲು ಕಾರಣ ಎಂದು ಲೀಕ್ ಆಗಿರುವ ಆಡಿಯೋ ಕ್ಲಿಪ್ ಒತ್ತಿ ಹೇಳಿದೆ.
ಖಮೇನಿ ಅವರ ಕಚೇರಿಯ ಮುಖ್ಯಸ್ಥ ಮಜಾಹೆರ್ ಹೊಸೇನಿ ಆಡಿಯೋದಲ್ಲಿ ಮಾತನಾಡಿ, ದಾಳಿ ಸಂಭವಿಸುವ ಕೆಲವೇ ಕೆಲವು ನಿಮಿಷಗಳ ಮೊದಲು ಮೊಜ್ತಬಾ ಖಮೇನಿ ಕಟ್ಟಡದೊಳಗಿದ್ದರು. ಆದರೆ, ಕ್ಷಿಪಣಿಗಳು ಕಟ್ಟಡಕ್ಕೆ ಅಪ್ಪಳಿಸುವ ಸೆಕೆಂಡ್ಗಳಲ್ಲಿ ಅವರು ಹೊರಗೆ ಹೋದರು. ಇದು ಅವರ ಪ್ರಾಣವನ್ನು ಉಳಿಸಿತು ಎಂದು ಹೇಳಿದ್ದಾರೆ,(ಏಜೆನ್ಸೀಸ್).