ವಿದೇಶ

ವೀಸಾ, ಫ್ರಾಂಚೈಸಿ ಸಮಸ್ಯೆ; ಮಿಸ್ ಯೂನಿವರ್ಸ್ ರೇಸ್​ನಿಂದ ಹಿಂದೆ ಸರಿದ 15 ದೇಶ, ಯಾವ್ಯಾವು..Miss Universe 2026

  • 75ನೇ ಮಿಸ್​ ಯೂನಿವರ್ಸ್ 2026 ಅಂತಿಮ​ ಸ್ಪರ್ಧೆಯಿಂದ 15 ದೇಶ ಔಟ್.

  • ನೇಪಾಳ, ಅಂಗೋಲಾ, ಜಾಂಬಿಯಾ, ಜಿಂಬಾಬ್ವೆ ಸೇರಿದಂತೆ ಹಲವು ರಾಷ್ಟ್ರಗಳು ಎಕ್ಸಿಟ್.

  • ವೀಸಾ, ವೈಯಕ್ತಿಕ ಕಾರಣ ಹಾಗೂ ಫ್ರಾಂಚೈಸಿಗಳ ಸಮಸ್ಯೆಯಿಂದ ಹಿಂದೆ ಸರಿದ ರಾಷ್ಟ್ರಗಳು.

Miss Universe 2026 15 Countries Exit: 75ನೇ ಮಿಸ್​ ಯೂನಿವರ್ಸ್ ಅಂತಿಮ​ ಸ್ಪರ್ಧೆಗೂ ಮುನ್ನ ಬರೋಬ್ಬರಿ 15 ದೇಶ ಹಿಂದೆ ಸರಿದಿವೆ. ಏಷ್ಯಾದ ಆರು ರಾಷ್ಟ್ರಗಳು ಫ್ರಾಂಚೈಸಿ ವಿವಾದವನ್ನು ಮುನ್ನೆಲೆಗೆ ತಂದಿದ್ದರೆ, ನೇಪಾಳ, ಅಂಗೋಲಾ, ಜಾಂಬಿಯಾ, ಜಿಂಬಾಬ್ವೆ ಮತ್ತು ಕಾಂಗೋ ಗಣರಾಜ್ಯಗಳು ವೀಸಾ ಸಮಸ್ಯೆಗಳನ್ನು ಉಲ್ಲೇಖಿಸಿದ್ದರೆ, ಇನ್ನೂ ಕೆಲವು ರಾಷ್ಟ್ರದ ಸ್ಪರ್ಧಿಗಳು ವೈಯಕ್ತಿಕ ಕಾರಣ ಕೊಟ್ಟು Miss Universe 2026 ಸ್ಪರ್ಧೆಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.

ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿರುವ ಜೋಸ್ ಮಿಗುಯೆಲ್ ಅಗ್ರೆಲೊಟ್ ಕೊಪಿಸಿಯಮ್‌ನಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಸ್ಪರ್ಧಿಗಳು ಈಗಾಗಲೇ ಅಲ್ಲಿಗೆ ಆಗಮಿಸಿ ವಿವಿಧ ಸುತ್ತುಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ, 15 ದೇಶಗಳು ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿದಿವೆ. 2025 ರಲ್ಲಿ ಥಾಯ್ ಆಯೋಜಕರು ಮಿಸ್ ಮೆಕ್ಸಿಕೊವನ್ನು ಅವಮಾನಿಸಿದ ಘಟನೆಯೂ ಸ್ಪರ್ಧಿಗಳು ಹೊರನಡೆಯಲು ಕಾರಣ ಎನ್ನಲಾಗುತ್ತಿದೆ.

ಯಾವ ಕಾರಣಕ್ಕೆ ರೇಸ್​ನಿಂದ ಹೊರ ನಡೆಯಲಾಗಿದೆ?

ಆರು ರಾಷ್ಟ್ರಗಳು ಫ್ರಾಂಚೈಸಿ ಸಮಸ್ಯೆ ಬಗ್ಗೆ ಉಲ್ಲೇಖಿಸಿದ್ದರೆ, 5 ದೇಶ ವೀಸಾ ಸಮಸ್ಯೆ ಬಿಚ್ಚಿಟ್ಟಿದ್ದಾರೆ. 4 ದೇಶಗಳು ವೈಯಕ್ತಿಕ ಕಾರಣ ಕೊಟ್ಟು ಮಿಸ್ ಯೂನಿವರ್ಸ್​ ರೇಸ್​ನಿಂದ ದೂರ ಸರಿದಿದ್ದಾರೆ ಎನ್ನಲಾಗಿದೆ. ಥೈಲ್ಯಾಂಡ್, ನೇಪಾಳ, ಇಂಡೋನೇಷ್ಯಾ, ಅಂಗೋಲಾ, ಆಸ್ಟ್ರಿಯಾ, ವಿಯೆಟ್ನಾಂ, ಜಾಂಬಿಯಾ, ಬಲ್ಗೇರಿಯಾ, ಲಾವೋಸ್, ಜಿಂಬಾಬ್ವೆ, ಮಾಲ್ಡೀವ್ಸ್, ಸಿಂಗಾಪುರ, ಕಾಂಗೋ ಗಣರಾಜ್ಯ, ಮೊರಾಕೊ, ಮಲೇಷ್ಯಾ ರಾಷ್ಟ್ರಗಳು ಈ ಪಟ್ಟಿಯಲ್ಲಿ ಇವೆ.

ಯಾರ್ಯಾರು ಹೊರ ಬಂದರು

ಮಿಸ್ ಯೂನಿವರ್ಸ್ ಆಸ್ಟ್ರಿಯಾ ವಿಕ್ಟೋರಿಯಾ ಅಮರ್ಸನ್ ಅವರು ತಾನು ಮಿಸ್ ಯೂನಿವರ್ಸ್ 2026 ಸ್ಪರ್ಧೆಯಿಂದ ಅಧಿಕೃತವಾಗಿ ಹಿಂದೆ ಸರಿದಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಇದಕ್ಕೆ ಹಲವು ಕಾರಣಗಳಿದ್ದರೂ, ಮುಖ್ಯವಾಗಿ ನಾನು ನನ್ನ ಸ್ವಂತ ಮೌಲ್ಯಗಳಿಗೆ ಬದ್ಧಳಾಗಿರಲು ಹಾಗೂ ನನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದೇನೆ. ಕಿರೀಟವಿಲ್ಲದಿದ್ದರೂ ತಾನು ಗಳಿಸಿರುವ ಶಕ್ತಿಯೇ ತನ್ನನ್ನು ರಾಣಿಯನ್ನಾಗಿ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.

ಇನ್​ಸ್ಟಾದಲ್ಲಿ ಪೋಸ್ಟ್

ಇನ್ನೂ ಬಲ್ಗೇರಿಯಾದಿಂದ ಸ್ಪರ್ಧೆಗಿಳಿದಿದ್ದ ಅನಾ-ಮರಿಯಾ, ಕಾರು ಅಪಘಾತಕ್ಕೀಡಾದ ಕಾರಣ ಮಿಸ್ ಯೂನಿವರ್ಸ್ ಬಲ್ಗೇರಿಯಾ ಅನಾ-ಮರಿಯಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅನಾ-ಮರಿಯಾ ಅವರು ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದು ಹೀಗೆ, ಸದ್ಯ ಫಿನಾಲೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಅಪಘಾತದಿಂದಾಗಿ ದೈಹಿಕ ಸ್ಥಿತಿ ಸರಿಯಿಲ್ಲ ಯಾವುದೇ ಕಿರೀಟ ಅಥವಾ ಸ್ಪರ್ಧೆಗಿಂತ ಸ್ಪರ್ಧಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದಾಗಿ ಎಂದು ಹೇಳಿದ್ದಾರೆ.

ಸೆಂಟ್ ಮಾರ್ಟಿನ್ ಮಿಸ್ ಯೂನಿವರ್ಸ್ ರೇಸ್​ನಲ್ಲಿದ್ದ ಮಡ್ಲಿ ಮೇರಿಯನ್ ಕೂಡ ವೈಯಕ್ತಿಕ ಕಾರಣಗಳಿಂದ ಅಂತಾರಾಷ್ಟ್ರೀಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿತ್ತು ಎಂದಿದ್ದಾರೆ. ಮಾಲ್ಡೀವ್ಸ್ ಮತ್ತು ಮೊರಾಕೊದ ಅಮೀನಾತ್ ಯುಯಿನ್ ಮೊಹಮದ್ ಮತ್ತು ಮೊರಾಕೊದ ಸಾರಾ ಅಲ್ಲಾಲಿ ಯಾವುದೇ ನಿರ್ದಿಷ್ಟ ಕಾರಣಗಳನ್ನು ಬಹಿರಂಗಪಡಿಸದೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

6 ಏಷ್ಯಾದ ದೇಶಕ್ಕೆ ವೀಸಾ ಸಮಸ್ಯೆ

ಫ್ರಾಂಚೈಸಿ ಮತ್ತು ಕಾರ್ಪೊರೇಟ್ ವಿವಾದಗಳಿಂದಾಗಿ ಥೈಲ್ಯಾಂಡ್, ಇಂಡೋನೇಷ್ಯಾ, ವಿಯೆಟ್ನಾಂ, ಲಾವೋಸ್, ಸಿಂಗಾಪುರ್ ಮತ್ತು ಮಲೇಷ್ಯಾ ಸೇರಿದಂತೆ 6 ಏಷ್ಯಾದೇಶಗಳು ಮಿಸ್ ಯೂನಿವರ್ಸ್ 2026ರಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಈ ಬಾರಿ ಸ್ಪರ್ಧೆಯಲ್ಲಿ ಭಾಗವಹಿಸದ ವಿಯೆಟ್ನಾಂ ಮುಂದಿನ ವರ್ಷದ 76ನೇ ಮಿಸ್ ಯೂನಿವರ್ಸ್ ಆತಿಥ್ಯ ವಹಿಸಲಿದೆ.ನೇಪಾಳ, ಅಂಗೋಲಾ, ಜಾಂಬಿಯಾ, ಜಿಂಬಾಬ್ವೆ ಮತ್ತು ರಿಪಬ್ಲಿಕ್ ಆಫ್ ದಿ ಕಾಂಗೋ ದೇಶಗಳು ವೀಸಾ ಸಮಸ್ಯೆಗಳು ಅಥವಾ ಯುಎಸ್ ವೀಸಾ ನಿರ್ಬಂಧಗಳಿಂದಾಗಿ ಈ ವರ್ಷ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಮಾಹಿತಿ ಇದೆ, (ಏಜೆನ್ಸೀಸ್).