ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸೈಬರ್ ಹಾಗೂ ನೌಕಾ ಸಂಘರ್ಷವನ್ನು ಬಿಂಬಿಸುವ ಸಾಂಕೇತಿಕ ಚಿತ್ರ.
ತೆಹ್ರಾನ್: ಕಳೆದ ಏಳು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ (Middle East War) ಕಾರ್ಮೋಡ ಕವಿದಿದ್ದು, ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷ ಕೊನೆಗಾಣುವ ಲಕ್ಷಣ ಕಾಣುತ್ತಿಲ್ಲ.
ಈದೀಗ ಇರಾನ್ ನೌಕಾಪಡೆ, ಹೊರ್ಮುಜ್ ಜಲಸಂಧಿ ಪ್ರವೇಶ ದ್ವಾರದ ಬಳಿ ಗಸ್ತಿಗೆ ನಿಂತಿದ್ದ ಅಮೆರಿಕದ ಜಲಾಂರ್ತಗಾಮಿಯನ್ನು ವಶಕ್ಕೆ ತೆಗೆದುಕೊಂಡಿದ್ದಾಗಿ ಹೇಳಲಾಗುತ್ತಿದ್ದು, ಸೋಷಿಯಲ್ ಮೀಡಿಯಾನಲ್ಲಿ ಫೋಟೊಗಳು ವೈರಲ್ ಆಗುತ್ತಿವೆ.
ಇರಾನ್ ಹೇಳುವ ಪ್ರಕಾರ, ಹೊರ್ಮುಜ್ ಜಲಸಂಧಿ ಮೇಲೆ ನಿಗಾ ವಹಿಸಲು ಅಮೆರಿಕ ಈ ಸಬ್ಮರೀನ್ಅನ್ನು ನೀರಿನಾಳಕ್ಕೆ ಇಳಿಸಿದೆ. ಆದರೆ ಈ ಬಗ್ಗೆ ಇರಾನ್ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಗೆ ಮಾಹಿತಿ ದೊರೆತಿದೆ. ನಂತರ ಮಿಲಿಟರಿ ಕಾರ್ಯಾಚರಣೆ ನಡೆಸಿ ಇರಾನ್ ಈ ಸಬ್ಮರೀನ್ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾಗಿ ತಿಳಿಸಿದೆ.
ಅದು ಕೆಟ್ಟು ನಿಂತಿರುವ ಡ್ರೋನ್!
ಇರಾನ್ ಈ ಹೇಳಿಕೆಗೆ ಕೌಂಟರ್ ಮಾಡಿರುವ ಅಮೆರಿಕ, ಇರಾನ್ ಏನನ್ನು ವಶಕ್ಕೆ ತೆಗೆದುಕೊಂಡಿದೆ ಎನ್ನುತ್ತಿದೆಯೋ, ಅದೊಂದು ಜಲಾಂರ್ತಗಾಮಿ ಡ್ರೋನ್ ಆಗಿದೆ. ಅದು ಕಳೆದ ಕೆಲ ದಿನಗಳಿಂದ ಅಲ್ಲಿ ಕೆಟ್ಟು ನಿಂತಿದೆ. ಈಗ ಅದರ ಮೂಲಕ ಯಾವುದೇ ಮಾಹಿತಿ ಸಂಗ್ರಹ ಹಾಗೂ ವಿತರಣೆ ಸಾಧ್ಯವಿರಲಿಲ್ಲ. ಅದರ ಸೋನಾರ್ ಕೂಡ ಕೆಟ್ಟು ಹೋಗಿದ್ದರಿಂದ ನಾವು ಅದನ್ನು ಅಲ್ಲೇ ಬಿಟ್ಟಿದ್ದೆವು.
ಈಗ ಈ ಇರಾನ್ ಸಮುದ್ರದ ಮೇಲೆ ಕೆಟ್ಟು ನಿಂತಿರುವ ಯಂತ್ರವನ್ನು ಹಿಡಿದುಕೊಂಡು, ತಾವು ಅಮೆರಿಕದ ಸಬ್ಮರೀನ್ಅನ್ನು ವಶಕ್ಕೆ ಪಡೆದಿದ್ದೇವೆಂದಯ ಫೋಸ್ ಕೊಡುತ್ತಿದೆ ಎಂದು ವಾಷಿಂಗ್ಟನ್ ವ್ಯಂಗ್ಯವಾಡಿದೆ, (ಏಜನ್ಸೀಸ್).