Tariff 
ವಿದೇಶ

ಅಮೆರಿಕ ಬೆನ್ನಲ್ಲೇ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ ಮೆಕ್ಸಿಕೊ! ಕಾರಣವೇನು? | Tariff

ನವದೆಹಲಿ: ಭಾರತದ ಮೇಲೆ ಅಮೆರಿಕ ಶೇ.50 ರಷ್ಟು ಸುಂಕ ವಿಧಿಸಿದ ನಾಲ್ಕು ತಿಂಗಳ ನಂತರ, ಮೆಕ್ಸಿಕೊ ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ದೇಶಗಳಿಂದ ಆಯ್ದ ಉತ್ಪನ್ನಗಳ ಆಮದಿನ ಮೇಲೆ ಶೇ.50 ರಷ್ಟು ಸುಂಕ ವಿಧಿಸಲು ಅನುಮೋದನೆ ನೀಡಿದೆ ಎಂದು ಗುರುವಾರ ವರದಿಯಾಗಿದೆ.
ರಾಷ್ಟ್ರೀಯ ಉದ್ಯಮ ಮತ್ತು ಉತ್ಪಾದಕರನ್ನು ರಕ್ಷಿಸಲು ವಿಧಿಸಲಾಗುವ ಸುಂಕಗಳು ಜನವರಿ 1, 2026 ರಿಂದ ಜಾರಿಗೆ ಬರಲಿವೆ. ಈ ಸುಂಕ ಜಾರಿಗೆ ಬಂದರೆ ಭಾರತ, ದಕ್ಷಿಣ ಕೊರಿಯಾ, ಚೀನಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ಮೆಕ್ಸಿಕೋ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಉಲ್ಲೇಖಿಸಿದೆ.
ಮೆಕ್ಸಿಕೋದ ಬಿಡಿಭಾಗಗಳು, ಲಘು ಕಾರುಗಳು, ಬಟ್ಟೆ, ಪ್ಲಾಸ್ಟಿಕ್‌ಗಳು, ಉಕ್ಕು, ಗೃಹೋಪಯೋಗಿ ವಸ್ತುಗಳು, ಆಟಿಕೆಗಳು, ಜವಳಿ, ಪೀಠೋಪಕರಣಗಳು, ಪಾದರಕ್ಷೆಗಳು, ಚರ್ಮದ ವಸ್ತುಗಳು, ಕಾಗದ, ಕಾರ್ಡ್‌ಬೋರ್ಡ್, ಮೋಟಾರ್‌ಸೈಕಲ್‌ಗಳು, ಅಲ್ಯೂಮಿನಿಯಂ, ಗಾಜು, ಸೋಪುಗಳು, ಸುಗಂಧ ದ್ರವ್ಯಗಳು ಮತ್ತು ಸೌಂದರ್ಯವರ್ಧಕಗಳಂತಹ ಸರಕುಗಳ ಮೇಲೆ ಮೆಕ್ಸಿಕೋ ಸುಂಕ ವಿಧಿಸಿದೆ ಎಂದು ಮೆಕ್ಸಿಕನ್ ದಿನಪತ್ರಿಕೆ ಎಲ್ ಯೂನಿವರ್ಸಲ್ ತಿಳಿಸಿದೆ.

ಮೆಕ್ಸಿಕೋ ಸುಂಕ ಏಕೆ ವಿಧಿಸುತ್ತಿದೆ?

ಮೆಕ್ಸಿಕೋ ತನ್ನ ಸ್ಥಳೀಯ ಉದ್ಯಮಗಳನ್ನು ರಕ್ಷಿಸಲು ಮತ್ತು ವಾಣಿಜ್ಯ ಅಸಮತೋಳಿಕತೆಯನ್ನು ತಡೆಯಲು, ಚೀನಾ, ಭಾರತ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ ಸೇರಿದಂತೆ ವಾಣಿಜ್ಯ ಒಪ್ಪಂದಗಳಿಲ್ಲದ ಏಷ್ಯಾನ್ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ 2026ರ ಜನವರಿ 1ರಿಂದ 5% ರಿಂದ 50% ವರಗೆ ಸುಂಕಗಳನ್ನು ವಿಧಿಸಲು ಸಂಸತ್ತು ಅನುಮೋದಿಸಿದೆ. ಈ ನಿರ್ಧಾರವು ಮೆಕ್ಸಿಕೋದ ದೇಶೀಯ ಉತ್ಪಾದಕರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದ್ದು, ಯುಎಸ್‌ನ ವಾಣಿಜ್ಯ ನೀತಿಗಳೊಂದಿಗೆ ಸಮನ್ವಯಗೊಳಿಸುವಂತೆಯೂ ಇದೆ,(ಏಜೆನ್ಸೀಸ್​).