- ಸುಮಾರು 8 ಸಾವಿರ ಉದ್ಯೋಗಿಗಳಿಗೆ ನಾಳೆ ಗೇಟ್ಪಾಸ್ ಕೊಡಲು ನಿರ್ಧಾರ
- ಈ ಮಧ್ಯೆ ಎಐ ರೋಲ್ಗೆ ಬಹುತೇಕ ಮಂದಿಯ ಶಿಫ್ಟ್ಗೆ ಪ್ಲ್ಯಾನ್
- ಮೆಟಾ ಸಂಸ್ಥೆಯ ವಜಾ ಪ್ರಕ್ರಿಯೆ ಕೂಡ ಎಐ ಮೇಲೆ ನಿರ್ಧರಿತ
Meta Layoffs: ನಾಳೆ (ಮೇ.20) ಶೇ.10ರಷ್ಟು ತನ್ನ ಜಾಗತಿಕ ಉದ್ಯೋಗಿಗಳನ್ನು ಕರ್ತವ್ಯದಿಂದ ವಜಾಗೊಳಿಸಲು ಟೆಕ್ ದಿಗ್ಗಜ ಮೆಟಾ ಸಂಸ್ಥೆ ನಿರ್ಧರಿಸಿದೆ. ಈ ಮಧ್ಯೆ, ಸುಮಾರು 8000 ಮಂದಿಯನ್ನು ಕಿತ್ತುಬಿಸಾಡುವ ಬದಲು ಹೊಸ ಮಾರ್ಗವನ್ನು ಕಂಪನಿಯ ಓನರ್ ಮಾರ್ಕ್ ಝುಕರ್ಬರ್ಗ್ ಪ್ಲ್ಯಾನ್ ಮಾಡಿರುವುದಾಗಿ ವರದಿಯಾಗಿದೆ.
ಈ ಮೊದಲೇ ಮೇ ಎರಡನೇ ವಾರದಲ್ಲಿ ಲೇಆಫ್ ಮಾಡುವುದಾಗಿ ಸಂಸ್ಥೆ ಮೆಮೋ ಹೊರಡಿಸಿತ್ತು. ಜಾಗತಿಕವಾಗಿ ಕೆಲಸ ಮಾಡುತ್ತಿರುವ ಶೇ.10ರಷ್ಟು ಉದ್ಯೋಗಿಗಳನ್ನು ಈಗಿರುವ ಹುದ್ದೆಯಿಂದ ವಜಾಗೊಳಿಸಲು ಝುಕರ್ಬರ್ಗ್ ನಿರ್ಧರಿಸಿದ್ದರು. ಆದ್ರೆ, ಈಗ 7000 ಮಂದಿಯನ್ನು ಕೆಲಸದಿಂದ ಹೊರ ನೂಕುವ ಬದಲಿಗೆ ಅವರನ್ನು ಎಐ ರೋಲ್ಗಳಿಗೆ ವರ್ಗಾಯಿಸುವುದು ಉತ್ತಮ ಎಂದು ಚಿಂತಿಸಿದೆ.
ಎಐ ಮೇಲೆ ಹೆಚ್ಚು ಅವಲಂಬಿತವಾಗಿರುವ ಮೆಟಾ, 8 ಸಾವಿರ ಉದ್ಯೋಗಿಗಳ ಪೈಕಿ 7000 ಮಂದಿಯನ್ನು ಹೊಸ ಎಐ ರೋಲ್ಗಳಿಗೆ ಹಾಕುವ ಮೂಲಕ ಆಧುನಿಕ ಟೆಕ್ನಾಲಜಿಯ ಕೆಲಸಗಳನ್ನು ಸರಿದೂಗಿಸಿಕೊಂಡು ಹೋಗಲಿ ಎಂದು ನಿರ್ಧರಿಸಿದೆ. ಅದರಲ್ಲೂ, ಮ್ಯಾನೇಜರ್ ರೋಲ್ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಮುಂದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಒಟ್ಟಾರೆಯಾಗಿ, ವಜಾಗೊಳಿಸುವಿಕೆ ಮತ್ತು ವರ್ಗಾವಣೆಗಳು ಸಂಸ್ಥೆಯ ಶೇ20ರಷ್ಟು ಉದ್ಯೋಗಿಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಕೆಲವು ವರ್ಗಾವಣೆಗಳು ಈಗಾಗಲೇ ಮುಗಿದಿದ್ದು, ಉತ್ತರ ಅಮೆರಿಕಾದಲ್ಲಿನ ಉದ್ಯೋಗಿಗಳಿಗೆ ಮೇ.20 ರವರೆಗೆ ವರ್ಕ್ಫ್ರಮ್ ಹೋಮ್ ಮಾಡುವಂತೆ ಸಂಸ್ಥೆ ಮೇಲ್ ಮುಖಾಂತರ ತಿಳಿಸಿದೆ,(ಏಜೆನ್ಸೀಸ್).