ಸಾಂದರ್ಭಿಕ ಚಿತ್ರ 
ವಿದೇಶ

ಮೆಸ್ಸಿ ಪವಾಡ: ಈಜಿಪ್ಟ್ ವಿರುದ್ಧ 3-2 ಗೋಲುಗಳ ಅಂತರದಿಂದ ಗೆದ್ದು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ ಅರ್ಜೆಂಟೀನಾ | FIFA WorldCup

ಅಟ್ಲಾಂಟಾ: ಫಿಫಾ ವಿಶ್ವಕಪ್ ಟೂರ್ನಿಯಿಂದ(FIFA WorldCup) ಹೊರಬೀಳುವ ಭೀತಿಯಲ್ಲಿದ್ದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ, ಮಂಗಳವಾರ(ಜು. 07) ನಡೆದ ಈಜಿಪ್ಟ್ ವಿರುದ್ಧದ ಪಂದ್ಯದಲ್ಲಿ 3-2 ಗೋಲುಗಳ ಅಂತರದಿಂದ ಗೆದ್ದು, ಕ್ವಾರ್ಟರ್​ಫೈನಲ್​ಗೆ ಲಗ್ಗೆಯಿಟ್ಟಿದೆ. ಲಿಯೋನೆಲ್ ಮೆಸ್ಸಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 
ಪಂದ್ಯದಲ್ಲಿ ಯಾಸರ್ ಇಬ್ರಾಹಿಂ ಮತ್ತು ಮೊಸ್ತಫಾ ಜಿಕೊ ಗಳಿಸಿದ ಗೋಲುಗಳಿಂದ ಮತ್ತು ಮೆಸ್ಸಿ ಅವರ ಪೆನಾಲ್ಟಿ ಕಿಕ್ ಕೈತಪ್ಪಿದ ಕಾರಣ, ಈಜಿಪ್ಟ್ ಐತಿಹಾಸಿಕ ಗೆಲುವಿನ ಸಮೀಪ ತಲುಪಿತ್ತು. ಆದರೆ, ಕ್ರಿಸ್ಟಿಯನ್ ರೊಮೇರೊ ಅವರ ಹೆಡರ್ ಗೋಲು ಅರ್ಜೆಂಟೀನಾ ತಂಡದಲ್ಲಿ ಹೊಸ ಭರವಸೆ ಮೂಡಿಸಿತು.
ಪಂದ್ಯದ ಕೊನೆಯ 11 ನಿಮಿಷ ಹಾಗೂ ಸ್ಟಾಪೇಜ್ ಸಮಯದಲ್ಲಿ ಅರ್ಜೆಂಟೀನಾ ಸತತ ಮೂರು ಗೋಲುಗಳನ್ನು ಬಾರಿಸಿತು. ಮೆಸ್ಸಿ ಅವರ ಅದ್ಭುತ ಗೋಲಿನ ನೆರವಿನಿಂದ ಪಂದ್ಯ ಸಮಬಲಗೊಂಡಿತು. ಜೊತೆಗೆ ಈ ಮೂಲಕ ಮೆಸ್ಸಿ ಸತತ ಒಂಬತ್ತನೇ ವಿಶ್ವಕಪ್ ಪಂದ್ಯದಲ್ಲಿ ಗೋಲು ಗಳಿಸಿದ ದಾಖಲೆ ಬರೆದರಲ್ಲದೆ, ಈ ಟೂರ್ನಿಯಲ್ಲಿ ಒಟ್ಟು 8 ಗೋಲುಗಳೊಂದಿಗೆ 'ಗೋಲ್ಡನ್ ಬೂಟ್' ರೇಸ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದರು.
ನಂತರ, ಸ್ಟಾಪೇಜ್ ಸಮಯದ ಎರಡನೇ ನಿಮಿಷದಲ್ಲಿ ಎಂಜೊ ಫೆರ್ನಾಂಡಿಸ್ ಭರ್ಜರಿ ಹೆಡರ್ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾದ ಗೆಲುವ ಸಾಧಿಸಿತು. ಪಂದ್ಯ ಮುಗಿದ ನಂತರ ಮೆಸ್ಸಿ ಆನಂದಬಾಷ್ಪ ಸುರಿಸುತ್ತಾ ತಮ್ಮ ಸಹ ಆಟಗಾರರನ್ನು ಅಪ್ಪಿಕೊಂಡರು (ಏಜೆನ್ಸೀಸ್).