ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ 
ವಿದೇಶ

ಕಿಮ್​ ನೋಡಲು ಬೇಕಂತೆ 1 ತಿಂಗಳ ಕಠಿಣ ಟ್ರೇನಿಂಗ್​! ಏನಿದು ಉತ್ತರ ಕೊರಿಯಾ ನಾಯಕನ ಟಫ್​ ರೂಲ್ಸ್? | Kim Jong Un

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರನ್ನು ಭೇಟಿಯಾಗುವುದು ಅಷ್ಟು ಸುಲಭ ಅಲ್ಲವಂತೆ
  • ಕಿಮ್​ ಭೇಟಿಗೂ ಒಂದು ತಿಂಗಳ ಮೊದಲೇ ವಿಶೇಷ ಟ್ರೇನಿಂಗ್ ಪಡೆಯಬೇಕಂತೆ
  • ಉತ್ತರ ಕೊರಿಯಾದ ಮಾಜಿ ರಾಜತಾಂತ್ರಿಕ ಲೀ ಇಲ್-ಗ್ಯು ಓಪನ್​ ಟಾಕ್​
Kim Jong Un: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಎಲ್ಲ ಲೀಡರ್​ಗಳಿಗಿಂತ ತಾನು ಭಿನ್ನ ಎಂಬುದನ್ನು ತನ್ನ ಸರ್ವಾಧಿಕಾರದಿಂದಲೇ ತೋರಿಸಿರುವ ಕಿಮ್​ರನ್ನು ಜನರು ಮುಖಾಮುಖಿಯಾಗಿ ಭೇಟಿಯಾಗುವುದು ಸಿಂಹದ ಗುಹೆಯೊಳಗೆ ಪ್ರವೇಶಿಸಿದಂತೆ. ಅಕಸ್ಮಾತ್ ಒಂದು ಸಣ್ಣ ತಪ್ಪು ಮಾಡಿದರೆ ಸಾಕು ಅವರ ಜೀವ ಹೋದಂತೆ ಎಂಬ ಭಯಾನಕ ಸಂಗತಿಗಳನ್ನು ದೇಶದ ಮಾಜಿ ರಾಜತಾಂತ್ರಿಕ ಲೀ ಇಲ್-ಗ್ಯು ಓಪನ್ ಆಗಿ ಹೇಳಿದ್ದಾರೆ.
ಕಿಮ್ ಅವರನ್ನು ಭೇಟಿಯಾಗುವುದು ಸಾಮಾನ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿಯಾದಂತಲ್ಲ. ನೇರ ಭೇಟಿಗೂ ಮೊದಲು ಆಯಾ ವ್ಯಕ್ತಿಗಳು ಸುಮಾರು ಒಂದು ತಿಂಗಳ ಕಾಲ ಕಠಿಣ ಟ್ರೇನಿಂಗ್​ಗೆ ಒಳಗಾಗುತ್ತಾರೆ. ಕಿಮ್​ ಎದುರಿಗೆ ನಿಲ್ಲುವ ಮುನ್ನ ಹೇಗಿರಬೇಕು, ಹೇಗೆ ಮಾತನಾಡಬೇಕು, ನಮ್ಮ ಭಾವನೆಗಳು ಹೇಗಿರಬೇಕು? ಅವರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು, ಎಲ್ಲವೂ ಎಷ್ಟು ಪರಿಪೂರ್ಣವಾಗಿರಬೇಕು ಎಂಬುದನ್ನು ಈ ತರಬೇತಿಯಲ್ಲಿ ಹೇಳಿಕೊಡಲಿದ್ದಾರೆ. ನಾನು ಇಲ್ಲಿಯವರೆಗೆ ಅವರನ್ನು 7 ಬಾರಿ ಮುಖಾಮುಖಿಯಾಗಿ ಭೇಟಿಯಾಗಿದ್ದಾನೆ ಮತ್ತು ಟ್ರೇನಿಂಗ್​ ಪಡೆದವರಲ್ಲಿ ನಾನೂ ಒಬ್ಬ ಎಂದು ಸ್ಫೋಟಕ ವಿಷಯ ಬಹಿರಂಗಪಡಿಸಿದ್ದಾರೆ.

ಕೇಳಿದಾಗ ಮಾತ್ರ ಮಾತನಾಡಿ...

ಉತ್ತರ ಕೊರಿಯಾದ ವಿದೇಶಾಂಗ ಸಚಿವಾಲಯದ ಮಾಜಿ ಉಪನಿರ್ದೇಶಕ ಲೀ ಇಲ್-ಗ್ಯು, ಕಿಮ್ ಉಪಸ್ಥಿತಿಯಲ್ಲಿ ಒಂದು ಸಣ್ಣ ತಪ್ಪು ಕೂಡ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಸ್ವತಃ ಕಿಮ್​ ಅವರೇ ಪ್ರಶ್ನೆ ಕೇಳಿದರೆ, ಇನ್ನೊಬ್ಬ ವ್ಯಕ್ತಿ ಮಾತನಾಡಬಾರದು. ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರಿಸಬೇಕು. ನಿಮಗೆ ಉತ್ತರ ಗೊತ್ತಿಲ್ಲದಿದ್ದರೂ, ಅದು ತಿಳಿದಿರುವಂತೆ ವರ್ತಿಸಿ ಅಥವಾ ನಿಮಗೆ ತಿಳಿದಿರುವಂತೆ ವರ್ತಿಸಬೇಕು. ಇಲ್ಲವಾದರೆ, ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಕಿಮ್ ಭೇಟಿಗೆ 1 ತಿಂಗಳ ಮುನ್ನ ಟ್ರೇನಿಂಗ್​

ಕಿಮ್ ಅವರ ಮುಂದೆ ಅನಗತ್ಯವಾಗಿ ಓಡಾಡುವುದು ಅಥವಾ ಸನ್ನೆಗಳನ್ನು ತೋರಿಸುವುದು ಸಹ ತಪ್ಪು. ತರಬೇತಿಯಲ್ಲಿ, ಕಿಮ್ ನಿಮ್ಮ ಹತ್ತಿರ ಬಂದರೆ ಭಯದಿಂದ ಗಾಬರಿಗೊಳ್ಳುವುದು ಅಥವಾ ಹೆದರಿ ಹೋಗುವ ಬದಲಿಗೆ ಶಾಂತವಾಗಿ ಪಕ್ಕಕ್ಕೆ ಸರಿಯಿರಿ ಎಂದು ಹೇಳಿಕೊಡಲಾಗುತ್ತದೆ. ಕಿಮ್​ರನ್ನು ಮೆಚ್ಚಿಸಲು ಹೊಗಳುವುದು ಅಥವಾ ಅವರ ಗಮನ ಸೆಳೆಯಲು ಪ್ರಯತ್ನಿಸುವುದರ ವಿರುದ್ಧ ದೊಡ್ಡ ಅಪಾಯಕ್ಕೆ ಸಿಲುಕಿದಂತೆ. ಏಕೆಂದರೆ, ಅವರಿಗೆ ಇದ್ಯಾವುದು ಇಷ್ಟವಾಗುವುದಿಲ್ಲ. ಇದೇ ನಾನು ಅವರನ್ನು ಮೊದಲು ವಿಮಾನ ನಿಲ್ದಾಣದ ವಿಐಪಿ ಕೋಣೆಯಲ್ಲಿ ಭೇಟಿಯಾಗಿದ್ದೆ. ಆಗ ಕಿಮ್​ರನ್ನು ನೇರವಾಗಿ ನೋಡಿ ತುಂಬಾ ಒತ್ತಡಕ್ಕೊಳಗಾಗಿದ್ದೆ ಮತ್ತು ಧ್ವನಿ ನಡುಗಿ ಹೋಗಿತ್ತು ಎಂದರು.

ಒಂದು ಸಣ್ಣ ತಪ್ಪಿನಿಂದಾಗಿ ಹೋಗ್ತಿತ್ತು ಪ್ರಾಣ!

ಕಿಮ್ ಸಭೆಯಲ್ಲಿ ಅನುವಾದಕ ಮಾಡಿದ ತಪ್ಪಿನಿಂದಾಗಿ ಆತ ತನ್ನ ಜೀವವನ್ನೇ ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಾಗಿತ್ತು. 60 ವರ್ಷದ ಅನುವಾದಕರು, ಕಿಮ್ ಮಾತನಾಡುವಾಗ ಅಡಚಣೆ ಉಂಟು ಮಾಡಿದರು. ಇದರಿಂದಾಗಿ ನಾಯಕರು ಕುಪಿತಗೊಂಡು, ಅನುವಾದಕನನ್ನು ಅಗೌರವ ಎಂದು ಹೇಳಿ, ಮುಂದಿನ ಎಲ್ಲ ಕಾರ್ಯಕ್ರಮಗಳಿಂದ ಅವರನ್ನು ಹೊರಗಿಟ್ಟರು. ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸದಿರಲು ಒಂದೇ ಒಂದು ಬಲವಾದ ಕಾರಣ, ಅವರ ಕುಟುಂಬವು ಉತ್ತರ ಕೊರಿಯಾ ಸರ್ಕಾರಿ ಇಲಾಖೆಯೊಂದಿಗೆ ಹೊಂದಿದ್ದ ದೀರ್ಘ ಸಂಪರ್ಕ ಎಂದು ವಿವರಿಸಿದ್ದಾರೆ,(ಏಜೆನ್ಸೀಸ್).