ಕ್ಯಾಲಿಫೋರ್ನಿಯಾದಲ್ಲಿ ಭಾರಿ ಪ್ರವಾಹ 
ವಿದೇಶ

ಕ್ರಿಸ್​ಮಸ್​ ಹಬ್ಬದ ದಿನವೇ ಗೋಳಾಟ! ಕಾಲಿಫೋರ್ನಿಯಾದಲ್ಲಿ ಭಾರೀ ಪ್ರವಾಹ, ಕೊಚ್ಚಿಹೋದ ಕಾರುಗಳು

ಪ್ರಮುಖ ಮುಖ್ಯಾಂಶಗಳು

  • ಕ್ಯಾಲಿಫೋರ್ನಿಯಾದಲ್ಲಿ ಭಾರಿ ಪ್ರವಾಹ
  • ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಕಾರುಗಳು
  • ನೀರಿನಿಂದ ಮುಳುಗಡೆಯಾದ ವಸತಿ ಪ್ರದೇಶಗಳು
ಅಮೆರಿಕ: ಕ್ರಿಸ್‌ಮಸ್ ಹಬ್ಬದ ದಿನದಂದೇ ಕ್ಯಾಲಿಫೋರ್ನಿಯಾದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಚಂಡಮಾರುತದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಜನರು ಮನೆಯಿಂದ ಹೊರಬರಲಾರದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪ್ರವಾಹದ ರಭಸಕ್ಕೆ ಹಲವಾರು ಕಾರುಗಳು ಕೊಚ್ಚಿ ಹೋಗಿದ್ದು, ಬಿರುಸಿನ ಚಂಡಮಾರುತವು ಭಾರೀ ಮಳೆಗೆ ಕಾರಣವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹ ಬೆನ್ನಲ್ಲೇ ಹಲವೆಡೆ ಭೂಕುಸಿತ ಉಂಟಾಗಿ, ವಿದ್ಯುತ್ ಸಂಪರ್ಕಗಳು ಕಡಿತಗೊಂಡಿವೆ.
ಭಾರೀ ಗಾಳಿ, ಮಳೆಯಿಂದ ಸಂಭವಿಸಿರುವ ಅನಾಹುತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಪ್ರಕೃತಿಯ ಆರ್ಭಟಕ್ಕೆ ಜನರು ತತ್ತರಿಸಿದ್ದಾರೆ. ಹಲವು ನಗರ ಪ್ರದೇಶಗಳಲ್ಲಿ ಮರಗಳು ಧರೆಗೆ ಉರುಳಿದ್ದು, ಮುಖ್ಯ ಹಾಗೂ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳು ತಾತ್ಕಾಲಿಕವಾಗಿ ಬಂದ್ ಆಗಿವೆ,(ಏಜೆನ್ಸೀಸ್).