ವಿದೇಶ

ಪನಾಮದಲ್ಲಿ ಭಾರಿ ಭೂಕಂಪನ; ರಿಕ್ಟರ್ ಮಾಪಕದಲ್ಲಿ 7.6 ತೀವ್ರತೆ ದಾಖಲು: ಸುನಾಮಿ ಎಚ್ಚರಿಕೆ | Panama

ಉತ್ತರ ಮತ್ತು ದಕ್ಷಿಣ ಅಮೆರಿಕಾದ ನಡುವೆ ಇರುವ ಪನಾಮ ದೇಶದಲ್ಲಿ ಶುಕ್ರವಾರ(ಅ. 09) ರಾತ್ರಿ ಭಾರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.

ಪನಾಮ: ಉತ್ತರ ಮತ್ತು ದಕ್ಷಿಣ ಅಮೆರಿಕಾದ ನಡುವೆ ಇರುವ ಪನಾಮ ದೇಶದಲ್ಲಿ ಶುಕ್ರವಾರ(ಅ. 09) ರಾತ್ರಿ ಭಾರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ, ಭಾರತೀಯ ಕಾಲಮಾನ ರಾತ್ರಿ 11:26ಕ್ಕೆ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಪನಾಮ ನಗರದ ನೈಋತ್ಯಕ್ಕೆ 206 ಕಿಲೋಮೀಟರ್ ದೂರದಲ್ಲಿದೆ ಎಂದು ತಿಳಿಸಿದೆ.

ಇನ್ನೂ ಜನರು ಭಯಭೀತರಾಗಿ ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿ ಹೋಗಿದ್ದಾರೆ. ಪೆನೊನೊಮ್ ನಗರದಲ್ಲಿ ಕ್ಯಾಥೆಡ್ರಲ್ ಗೋಪುರ ಕುಸಿದು ಹಾನಿಯಾಗಿದೆ. ಹಲವು ಕಟ್ಟಡಗಳು ಉರುಳಿ ಬಿದ್ದಿವೆ. ಮತ್ತು ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎನ್ನಲಾಗಿದೆ.

ಏತನ್ಮಧ್ಯೆ, ಪನಾಮದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ಅಕ್ಟೋಬರ್ 9 ರಂದು ಸ್ಥಳೀಯ ಸಮಯ 12:56 ಕ್ಕೆ ಪನಾಮದ ಲಾ ಪಿಟಲೋಜಾದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಮತ್ತು ಸುನಾಮಿ ಎಚ್ಚರಿಕೆ ನೀಡಿದೆ (ಏಜೆನ್ಸೀಸ್).