Mexico Batman 
ವಿದೇಶ

ಮೆಕ್ಸಿಕೋದಲ್ಲಿ ರಿಯಲ್​ ಬ್ಯಾಟ್​ಮ್ಯಾನ್​ ಅಬ್ಬರ; ಬೈಕ್​ ಕಳ್ಳರ ಹುಡುಕಿ ಕಂಬಕ್ಕೆ ಕಟ್ಟಿ ಹಾಕಿ ನಾಪತ್ತೆ, ಪೊಲೀಸರಿಂದ ತೀವ್ರ ಹುಡುಕಾಟ..Mexico

ಪ್ರಮುಖ ಮುಖ್ಯಾಂಶಗಳು

  • ಮೆಕ್ಸಿಕೋದಲ್ಲಿ ರಿಯಲ್​ ಬ್ಯಾಟ್​​ಮ್ಯಾನ್​ ಪತ್ತೆ, ರಾತ್ರೋರಾತ್ರಿ ಕಳ್ಳರನ್ನು ಹಿಡಿಯುವ ಧೀರ
  • ಮೋಟರ್ ಬೈಕ್ ಕದಿಯುವವರನ್ನು ಪತ್ತೆ ಹಚ್ಚಿ, ಬೀದಿ ದೀಪದ ಕಂಬಕ್ಕೆ ಕಟ್ಟಿ ಹಾಕುವ ಮುಖವಾಡದ ವ್ಯಕ್ತಿ
  • ಮುಖವಾಡದ ವ್ಯಕ್ತಿಗಾಗಿ ಪೊಲೀರಿಂದ ಹುಡುಕಾಟ ಹೆಚ್ಚಳ
ಸಿನಿಮಾಗಳಲ್ಲಿ ಇಂತಹ ಮ್ಯಾಜಿಕ್​ಗಳನ್ನು ನಾವು ನೋಡಿಯೇ ಇರುತ್ತೇವೆ. ಹೀರೋಯಿನ್​ ಅಥವಾ ಬಡ ಜನರಿಗೆ ಸಮಸ್ಯೆಯನ್ನುಂಟು ಮಾಡುವ ಕ್ರಿಮಿನಲ್ಸ್​ಗಳನ್ನು ಮಟ್ಟ ಹಾಕಿ, ರಾತ್ರೋರಾತ್ರಿ ಅವರನ್ನು ಕೊಂದು ಹಾಕುವುದು. ಶನಿ ಮಹಾತ್ಮನ ಕತೆಯಲ್ಲಿ ಕಳ್ಳ ದೇವಸ್ಥಾನವನ್ನೇ ಸುತ್ತುವುದು ಸೇರಿದಂತೆ ಹಲವು ಅಚ್ಚರಿ ಸೀನ್​ಗಳನ್ನು ನೋಡಿ...ರಿಯಲ್​ ಲೈಫ್​ನಲ್ಲಿಯೂ ಇಂತಹ ಒಬ್ಬ ವಂಡರ್​ ಮನುಷ್ಯ ಇರಬಾರದಿತ್ತೇ. ಆತ ನಮ್ಮೆಲ್ಲರ ಸಂಕಷ್ಟ ಹೋಗಲಾಡಿಸಬಹುದಿತ್ತೇ ಅನ್ನೋದನ್ನ ಪ್ರತಿಯೊಬ್ಬರು ಯೋಚಿಸಿರುತ್ತಾರೆ. ಆದರೆ, ಈ ಕನಸ್ಸು ಎಂದಾದರೂ ನಿಜವಾಗುತ್ತೆ ಅನ್ನೋದನ್ನು ನೀವು ನಂಬುತ್ತೀರಾ..ನಂಬಲೇ ಬೇಕು. ಇಂತಹ ಒಂದು ರೋಚಕ ಕಾರ್ಯವು  ಮೆಕ್ಸಿಕೊದಲ್ಲಿ ನಡೆದಿದೆ.

ರಿಯಲ್​ ಬ್ಯಾಟ್​ಮ್ಯಾನ್ ಅಬ್ಬರ

ಮೆಕ್ಸಿಕನ್ ಬ್ಯಾಟ್‌ಮ್ಯಾನ್ ಅಥವಾ ಬ್ಯಾಟ್‌ಮ್ಯಾನ್ ಆಫ್ ಲಾಗೋಸ್ ಡಿ ಮೊರೆನೊ ಎಂದು ಆನ್​​ಲೈನ್​ನಲ್ಲಿ ಹೆಸರುವಾಸಿಯಾದ ಮುಖವಾಡ ಧರಿಸಿದ ರಿಯಲ್ ಬ್ಯಾಟ್​ಮ್ಯಾನ್​ ಎಂದು ಕರೆಸಿಕೊಳ್ಳುವ ವ್ಯಕ್ತಿಯೊಬ್ಬ, ಮೋಟಾರ್‌ ಬೈಕ್​ ಕದಿಯುವ ಕಳ್ಳರನ್ನು ಬೇಟೆಯಾಡಿ, ಬೀದಿ ದೀಪಗಳಿಗೆ ದೊಡ್ಡ ಟೇಪ್​​ಗಳ ಮುಖೇಣ ಕಟ್ಟಿಹಾಕುವ ಕೆಲಸ ಮಾಡುತ್ತಿದ್ದಾನೆ. ಸದ್ಯ ಪೊಲೀಸರು ಈ ವ್ಯಕ್ತಿಯ ಹುಡುಕಾಟಕ್ಕೆ ಮುಂದಾಗಿರುವುದರಿಂದ ಘಟನೆಯು ವಿಶ್ವದಾದ್ಯಂತ ಬೆಳಕಿಗೆ ಬಂದಿದೆ. 
ಎಕ್ಸ್​​ನಲ್ಲಿ ಪೋಸ್ಟ್
ಜೂನ್ 13 ರಂದು ಲಾಗೋಸ್ ಡಿ ಮೊರೆನೊ ಪುರಸಭೆ ವ್ಯಾಪ್ತಿ ಈ ಘಟನೆ ನಡೆದಿದ್ದು,  ಆಗುಂತಕನನ್ನು 10 ದಿನಗಳೊಳಗೆ ಪತ್ತೆ  ಹಚ್ಚಲು ವಿಶೇಷ ತನಿಖಾ ತಂಡವನ್ನು ನೇಮಕ ಮಾಡಲಾಗಿದೆ.  ಪ್ರತಿ ಬಾರಿಯು ಆ ಮುಖವಾಡದ ವ್ಯಕ್ತಿ  ಕಳ್ಳರನ್ನು ಹೆವಿ-ಡ್ಯೂಟಿ ಡಕ್ಟ್ ಟೇಪ್‌ನಿಂದ ಬೀದಿ ದೀಪಗಳಿಗೆ ಕಟ್ಟಿ ಅವರ ಮುಂದೆ ಅವರು ಕದಿಯಲು ಯತ್ನಿಸಿದ ಗಾಡಿಗಳನ್ನು ನಿಲ್ಲಿಸುತ್ತಿದ್ದಾನೆ ಎನ್ನಲಾಗಿದೆ.

ಫೋಟೋದಲ್ಲಿ ಏನಿದೆ?

ಜಾಲಿಸ್ಕೊದ ಲಾಗೋಸ್ ಡಿ ಮೊರೆನೊದಲ್ಲಿ ಮುಖವಾಡದ ವ್ಯಕ್ತಿಯೊಬ್ಬರು ಪೊಲೀಸರಿಗೆ ಕಾದರೆ ಆಗೋದಿಲ್ಲ ಎನ್ನುವುದನ್ನು ಕಂಡುಕೊಂಡು ತಾವೇ ಕಳ್ಳರನ್ನು ಹಿಡಿಯುವ ಕೆಲಸಕ್ಕೆ ಕೈ ಹಾಕಿದ್ದಾರೆ. 
ರಾತ್ರಿ ಹೊತ್ತು ಮೋಟಾರ್‌ಸೈಕಲ್ ಕಳ್ಳರನ್ನು ಬೇಟೆಯಾಡಿ, ವಿದ್ಯುತ್ ಕಂಬಕ್ಕೆ ಟೇಪ್‌ನಿಂದ ಕಟ್ಟಿ, ಕಳ್ಳತನ ಮಾಡಿದ ಬೈಕ್‌ನ ರಸೀದಿ ತರಹ ಅಲ್ಲೇ ಬಿಟ್ಟು ಹೋಗ್ತಾನೆ.ಇಲ್ಲಿಯವರೆಗೆ ಐದು ಜನ ಕಂಬಕ್ಕೆ ಕಟ್ಟಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ.  
ಕೆಲವರ ಬಾಯಿಗೆ ಟೇಪ್ ಹಾಕಿರ್ತಾರೆ, ಕೆಲವರು ಟೇಪ್ ಬರೋ ಮುಂಚೆಯೇ ಜಗಳದಲ್ಲಿ ಸೋತಿರೋ ತರಹ ಕಾಣ್ತಾರೆ.ಸ್ಥಳೀಯರು ಇದನ್ನು ನೋಡಿ ಅವನಿಗೆ "ಮೆಕ್ಸಿಕನ್ ಬ್ಯಾಟ್‌ಮ್ಯಾನ್" ಅಂತ ಪಟ್ಟ ಕಟ್ಟಿದ್ದಾರೆ, ಅದು ಕೇವಲ ಒಂದು ರೋಲ್ ಡಕ್ಟ್ ಟೇಪ್ ಮತ್ತೆ ದ್ವೇಷ ಇಟ್ಕೊಂಡಿರೋ ಒಬ್ಬನಿಗೆ ತುಂಬಾನೇ ದೊಡ್ಡ ಹೆಸರು.
ಎಕ್ಸ್​​ನಲ್ಲಿ ಹಂಚಿಕೊಳ್ಳಲಾದ ಫೋಟೋಗಳಲ್ಲಿ ಕೆಲವು ಪುರುಷರ ಮುಖದಲ್ಲಿ ಮೀಸೆ ಮತ್ತು ಬೆಕ್ಕಿನ ಮೀಸೆಗಳನ್ನು ಚಿತ್ರಿಸಿರುವುದು.  ಹಣೆ ಮೇಲೆ ಸ್ಪ್ಯಾನಿಷ್‌ನಲ್ಲಿ ಕಳ್ಳ ಎಂಬ ಪದವನ್ನು ಬರೆಯಲಾಗಿದೆ. ಒಂದು ಘಟನೆಯಲ್ಲಿ, ಇಬ್ಬರು ಪುರುಷರನ್ನು ಪ್ರಕಾಶಮಾನವಾದ ಗುಲಾಬಿ ಎಚ್ಚರಿಕೆ ಚಿಹ್ನೆಯ ಕೆಳಗೆ ದೀಪಸ್ತಂಭಕ್ಕೆ ಒಂದರ ನಂತರ ಒಂದರಂತೆ ಟೇಪ್ ಮಾಡಲಾಗಿದೆ.

ಆರೋಪಿಗಳಿಗೆ ಚಿಕಿತ್ಸೆ

ಕಂಬಕ್ಕೆ ಕಟ್ಟಿ ಹಾಕಲಾದ ಆರೋಪಿಗಳಿಗೆ ಪೊಲೀಸರು ಸದ್ಯ ಸೂಕ್ತ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎನ್ನಲಾಗಿದೆ.  ಕಂಬಕ್ಕೆ ಕಟ್ಟಿ ಹಾಕಿದವರು ನಿಜಕ್ಕೂ ಕಳ್ಳತನ ಮಾಡಿದ್ದಾರೆಯೇ? ಅಥವಾ ಸುಳ್ಳು ಆರೋಪ ಹೊರಿಸಲಾಗುತ್ತಿದೆಯೇ ಎನ್ನುವುದನ್ನು ಇನ್ನಷ್ಟೇ ತನಿಖೆ ನಡೆಸಿ, ಖಚಿತಪಡಿಸಿಕೊಳ್ಳಬೇಕಾಗಿದೆ ಎನ್ನಲಾಗಿದೆ. 

ಜನರಿಂದ ಪ್ರಶಂಸೆ

ಲಾಗೋಸ್ ಡಿ ಮೊರೆನೊದಲ್ಲಿ ಹೆಚ್ಚಾದ ಬೈಕ್​ ಕಳ್ಳತನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಸ್ಥಳೀಯರು ಸೋಶಿಯಲ್​ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಆದರೆ ಮುಖವಾಡದ ವ್ಯಕ್ತಿ ನಡೆಸಿರುವ ಈ ಕಾರ್ಯಾಚರಣೆಯನ್ನು ಜನರು ಪ್ರಶಂಸಿಸಿ ಎಕ್ಸ್​​, ಇನ್​ಸ್ಟಾಗ್ರಾಮ್​ ಸೇರಿದಂತೆ ನಾನಾ ವೇದಿಕೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).