ಮಲೇಷಿಯನ್ ನಟಿ ಆಮಿ ನೂರ್ ಟಿನಿ 
ವಿದೇಶ

3ನೇ ಪತ್ನಿ, ತಿಂಗಳಿಗೆ 11 ಲಕ್ಷ ರೂ. ಕೊಡ್ತೀನಿ ಬಾ! ದೊಡ್ಡ ಮನುಷ್ಯನ ಆಫರ್​ಗೆ ಮಲೇಷಿಯನ್​ ಬ್ಯೂಟಿ ಕೊಟ್ಟ ಉತ್ತರ ವೈರಲ್​​

ಪ್ರಮುಖ ಮುಖ್ಯಾಂಶಗಳು

  • ವಿವಿಐಪಿ ವ್ಯಕ್ತಿಯಿಂದ 3ನೇ ಪತ್ನಿಗೆ ದೊಡ್ಡ ಆಫರ್​
  • ಐಷಾರಾಮಿ ಬಂಗಲೆ, ಲಕ್ಸುರಿ ಕಾರು, 10 ಎಕರೆ ಭೂಮಿ
  • ತಂದೆ ವಯಸ್ಸಿನ ವ್ಯಕ್ತಿ ನೀಡಿದ ಆಫರ್​ಗೆ ನಟಿ ಖಡಕ್​ ಉತ್ತರ
ಮಲೇಷಿಯಾ: ಗಣ್ಯ ವ್ಯಕ್ತಿಗಳ ಸಾಲಿನಲ್ಲಿರುವ ಒಬ್ಬ ವಿವಿಐಪಿ, ತನಗೆ ಮೂರನೇ ಪತ್ನಿಯಾಗಿರುವಂತೆ ನೀಡಿದ ಭರ್ಜರಿ ಆಫರ್​ ಕುರಿತು ಇದೀಗ ಮಲೇಷಿಯನ್​ ನಟಿಯೊಬ್ಬರು ಬಹಿರಂಗವಾಗಿ ಮಾತನಾಡಿದ್ದಾರೆ. ಹೆಂಡತಿ ಸ್ಥಾನದಲ್ಲಿರಲು ತಿಂಗಳಿಗೆ 11 ಲಕ್ಷ ರೂ. ಕೊಡುವುದಾಗಿ ಆತ ಹೇಳಿದ್ದನ್ನು ಯಾವುದೇ ಮುಲಾಜಿಲ್ಲದೇ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಸಫ್ವಾನ್ ನಜ್ರಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಈ ಕುರಿತಾಗಿ ಮಾತನಾಡಿರುವ ನಟಿ ಆಮಿ ನೂರ್ ಟಿನಿ, "ವಿವಿಐಪಿ ವ್ಯಕ್ತಿಯೊಬ್ಬರು ನನಗೆ ಈ ಆಫರ್​ ಕಳುಹಿಸಿಕೊಟ್ಟರು. ನೀನು ನನ್ನ ಮೂರನೇ ಹೆಂಡತಿಯಾಗಿರು. ಇದಕ್ಕೆ ಒಪ್ಪಿಕೊಂಡರೆ, ಒಂದು ಐಷಾರಾಮಿ ಬಂಗಲೆ, ದುಬಾರಿ ಮೌಲ್ಯದ ಕಾರು, 10 ಎಕರೆ ಭೂಮಿ ಮತ್ತು ತಿಂಗಳಿಗೆ 11 ಲಕ್ಷ ರೂ. ನೀಡುವುದಾಗಿ ಹೇಳಿದ" ಎಂದಿದ್ದಾರೆ.
"ಈ ಆಫರ್​ ಅನ್ನು ತಕ್ಷಣವೇ ನಾನು ಮುಖಕ್ಕೆ ಹೊಡೆದಂತೆ ತಿರಸ್ಕರಿಸಿದೆ. ಮೊದಲಿಗೆ, ಆ ವ್ಯಕ್ತಿಗೆ ನನ್ನ ತಂದೆಯಷ್ಟು ವಯಸ್ಸಾಗಿದೆ. ಇಂತಹ ಆಫರ್​ಗಳನ್ನು ನಾನು ಈ ಹಿಂದೆಯೂ ನೋಡಿದ್ದೇನೆ. ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಹೋದಾಗೆಲ್ಲ, ಪ್ರಭಾವಿ ವ್ಯಕ್ತಿಗಳನ್ನು ಆಗಾಗ್ಗೆ ಭೇಟಿಯಾಗುತ್ತೀನಿ. ಅವರಲ್ಲಿ ಹಲವರು ನನ್ನ ಫೋನ್​ ನಂಬರ್​ ಕೇಳುತ್ತಾರೆ. ಕೆಲವರು, ನನ್ನೊಂದಿಗೆ ದೂರವಾಣಿ ಸಂಪರ್ಕದಲ್ಲಿರಲು ಕೇಳಿದರೆ, ಇನ್ನೂ ಕೆಲವರು ಹೊರಗೆ ಸಿಗೋಣ ಎನ್ನುತ್ತಾರೆ" ಎಂದು ಆಮಿ ಹೇಳಿದ್ದಾರೆ.

ವಯಸ್ಸಾದ ಅಜ್ಜನಂತಲ್ಲ....

"ನನ್ನ ಹುಡುಗ ಸಿರಿವಂತನೇ ಆಗಿರಬೇಕು ಎಂಬ ಆಸೆ ನನಗೇನಿಲ್ಲ. ಆದರೆ, ಆರ್ಥಿಕವಾಗಿ ಆತ ಸದೃಢವಾಗಿರಬೇಕು ಮತ್ತು ಜವಾಬ್ದಾರಿ ವ್ಯಕ್ತಿಯಾಗಿರಬೇಕು. ಶ್ರೀಮಂತ ಹುಡುಗ ಸಿಕ್ಕರೆ ಅದು ಪ್ರಾಮುಖ್ಯತೆಕ್ಕಿಂತ ಬೋನಸ್​ ಆಗುತ್ತೆ ಅಷ್ಟೇ. ನನಗೆ ಆತನ ಮೈಕಟ್ಟು, ಅಂದ-ಚೆಂದ ಮುಖ್ಯ. ಬಾಳಸಂಗಾತಿ ಆಗುವವನು ಐರನ್​ ಮ್ಯಾನ್​ನಂತೆ ಇರಬೇಕು. ವಯಸ್ಸಾದ ಅಜ್ಜನಂತಲ್ಲ" ಎಂದಿದ್ದಾರೆ,(ಏಜೆನ್ಸೀಸ್).