ನ್ಯೂಯಾರ್ಕ್ ಜೊಹ್ರಾನ್ ಮಮ್ದಾನಿ ಮತ್ತು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ 
ವಿದೇಶ

ಮಡುರೊ ಬಂಧನ, ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ: ಟ್ರಂಪ್​ ವಿರುದ್ಧ ಗುಡುಗಿದ ಜೊಹ್ರಾನ್ ಮಮ್ದಾನಿ | Zohran Mamdani

ಪ್ರಮುಖ ಮುಖ್ಯಾಂಶಗಳು

  • ಇದು ಯುದ್ಧದ ಹಾದಿ": ಮಡುರೊ ಬಂಧನವನ್ನು ಬಲವಾಗಿ ಖಂಡಿಸಿದ ಯುಎಸ್ಎ ಮೆಯರ್ ಮಮ್ದಾನಿ
  • ಅಂತರಾಷ್ಟ್ರೀಯ ಕಾನೂನು ಉಲ್ಲಂಘನೆ: ಅಮೆರಿಕದ ನಡೆಯನ್ನು 'ಬುಲ್ಲಿಯಿಸಂ' ಎಂದು ಕರೆದ ಮೇಯರ್
  • ನಗರದಲ್ಲಿ ಬಂಧಿತ ಮಡುರೊ ವಿಚಾರಣೆ; ನಗರದ ಶಾಂತಿಗೆ ಧಕ್ಕೆ ಎಂದ ಮಮ್ದಾನಿ
ನ್ಯೂಯಾರ್ಕ್: ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊರನ್ನು ಅಮೆರಿಕದ ಸೇನೆ ಬಂಧಿಸಿರುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಡೊನಾಲ್ಡ್​ ಟ್ರಂಪ್​ ವಿರುದ್ಧ ನ್ಯೂಯಾರ್ಕ್ ನಗರದ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಮೇಯರ್ ಜೊಹ್ರಾನ್ ಮಮ್ದಾನಿ(Zohran Mamdani) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜನವರಿ 3 ರಂದು ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್​ರನ್ನು ಫೆಡರಲ್ ಮಾದಕವಸ್ತು-ಭಯೋತ್ಪಾದನಾ ಆರೋಪಗಳನ್ನು ಎದುರಿಸಲು ನ್ಯೂಯಾರ್ಕ್ ನಗರಕ್ಕೆ ಸಾಗಿಸಲಾಗುತ್ತಿದೆ ಎಂದು ತಿಳಿಸಿದ ನಂತರ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಮಮ್ದಾನಿ, ಸಾರ್ವಭೌಮ ರಾಷ್ಟ್ರದ ಮೇಲೆ ಏಕಪಕ್ಷೀಯ ಮಿಲಿಟರಿ ದಾಳಿಯನ್ನು ಮಮ್ದಾನಿ ಸ್ಪಷ್ಟವಾಗಿ ಯುದ್ಧದ ಕೃತ್ಯ ಎಂದು ಕರೆದಿದ್ದಾರೆ. ಅಲ್ಲದೆ, ಈ ನೆಡೆಯು ಅಂತರಾಷ್ಟ್ರೀಯ ಕಾನೂನನ್ನು ದುರ್ಬಲಗೊಳಿಸುತ್ತದೆ ಎಂದು ಕಿಡಿಕಾರಿದ್ದಾರೆ. 
ಈ ಬಗ್ಗೆ ಸ್ಥಳೀಯ ಅಧಿಕಾರಿಯೊಬ್ಬರಿಗೆ ಅಸಾಮಾನ್ಯ ನಡೆಯಲ್ಲಿ, ಮಮ್ದಾನಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರವಾಗಿ ದೂರವಾಣಿ ಕರೆ ಮಾಡಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾನು ಸ್ಪಷ್ಟಪಡಿಸಿದೆ, ಮತ್ತು ನಾವು ಅದನ್ನು ಅಲ್ಲಿಗೆ ಬಿಟ್ಟಿದ್ದೇವೆ ಎಂದು ಜೊಹ್ರಾನ್ ತಿಳಿಸಿದ್ದಾರೆ. 
ನ್ಯೂಯಾರ್ಕ್ ನಗರವು ಹತ್ತಾರು ಸಾವಿರ ವೆನೆಜುವೆಲಾದವರಿಗೆ ನೆಲೆಯಾಗಿದೆ ಎಂದು ಮೇಯರ್ ಹೇಳಿದ್ದು, ಈ ಮಿಲಿಟರಿ ದಾಳಿಯು ಅವರ ಸುರಕ್ಷತೆ ಮತ್ತು ನಗರದ ಸಾಮಾಜಿಕ ರಚನೆಯ ಮೇಲೆ ನೇರವಾಗಿ ಪರಿಣಾಮ ಬೀರಬಹುದು ಎಂದು ಜೊಹ್ರಾನ್ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಫೆಡರಲ್ ವಿದೇಶಾಂಗ ನೀತಿಯ ಪರಿಣಾಮಗಳಿಂದ ಎಲ್ಲಾ ನ್ಯೂಯಾರ್ಕ್ ನಿವಾಸಿಗಳನ್ನು ರಕ್ಷಿಸುವತ್ತ ತಮ್ಮ ಆಡಳಿತವು ಗಮನಹರಿಸುತ್ತದೆ ಎಂದು ಜೊಹ್ರಾನ್ ಪ್ರತಿಜ್ಞೆ ಮಾಡಿದ್ದಾರೆ.

ಇದು ತೈಲಕ್ಕಾಗಿ ಟ್ರಂಪ್ ನಡೆಸಿದ ಸಂಚು: ಕಮಲಾ ಹ್ಯಾರಿಸ್ ಕಿಡಿ

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊರನ್ನು ಅಮೆರಿಕದ ಸೇನೆ ಬಂಧಿಸಿರುವುದು ಬಗ್ಗೆ ಮಾತನಾಡಿದ ಹ್ಯಾರಿಸ್​, ಆಪರೇಷನ್ ಅಬ್ಸೊಲ್ಯೂಟ್ ರೆಸಲ್ವ್ ಎಂಬ ಶೀರ್ಷಿಕೆಯ ಮಿಲಿಟರಿ ಕ್ರಮವನ್ನು ಖಂಡಿಸಿದ್ದಾರೆ. ಇದು ಅಮೆರಿಕದ ಪಡೆಗಳು ಮತ್ತು ಆರ್ಥಿಕ ಸ್ಥಿರತೆಯನ್ನು ಅಪಾಯಕ್ಕೆ ಸಿಲುಕಿಸುವ ಅಪಾಯಕಾರಿ ಕ್ರಮವಾಗಿದೆ ಎಂದು ಹೇಳಿದ್ದಾರೆ.

ನಾವು ಈ ಸಿನಿಮಾವನ್ನು ಈಗಾಗಲೇ ನೋಡಿದ್ದೇವೆ

ಅಧಿಕಾರ ತೊರೆದ ನಂತರ ವಿರೋಧ ಪಕ್ಷದ ಪ್ರಮುಖ ಧ್ವನಿಯಾಗಿರುವ ಹ್ಯಾರಿಸ್, ಈ ಕ್ರಮವು ನೈಸರ್ಗಿಕ ಸಂಪನ್ಮೂಲಗಳಿಗಾಗಿ ಅಮೆರಿಕದ ಹಸ್ತಕ್ಷೇಪದ ಇತಿಹಾಸದ ಮಾದರಿಯನ್ನು ಅನುಸರಿಸುತ್ತದೆ ಎಂದು ತಿಳಿಸಿದ್ದಾರೆ. 
ಮುಂದುವರೆದು ಮಾತನಾಡಿದ ಕಮಲಾ, ವೆನೆಜುವೆಲಾದಲ್ಲಿ ಡೊನಾಲ್ಡ್ ಟ್ರಂಪ್ ಅವರ ಕ್ರಮಗಳು ಅಮೆರಿಕವನ್ನು ಸುರಕ್ಷಿತ, ಬಲಶಾಲಿ ಅಥವಾ ಹೆಚ್ಚು ಕೈಗೆಟುಕುವಂತೆ ಮಾಡುವುದಿಲ್ಲ. ನಾವು ಈ ಚಿತ್ರವನ್ನು ಮೊದಲು ನೋಡಿದ್ದೇವೆ. ಆಡಳಿತ ಬದಲಾವಣೆ ಅಥವಾ ತೈಲಕ್ಕಾಗಿ ಯುದ್ಧಗಳು ಶಕ್ತಿಯಾಗಿ ಮಾರಾಟವಾಗುತ್ತವೆ. ಆದರೆ ಅವ್ಯವಸ್ಥೆಯಾಗಿ ಬದಲಾಗುತ್ತವೆ ಮತ್ತು ಅಮೇರಿಕನ್ ಕುಟುಂಬಗಳು ಬೆಲೆ ತೆರುತ್ತವೆ ಎಂದು ಟ್ರಂಪ್​ ವಿರುದ್ದ ಟೀಕಾಪ್ರಹಾರ ನೆಡೆಸಿದ್ದಾರೆ. 
ಮಡುರೊ ಒಬ್ಬ ಕ್ರೂರ ಮತ್ತು ನ್ಯಾಯಸಮ್ಮತವಲ್ಲದ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಹ್ಯಾರಿಸ್, ಏಕಪಕ್ಷೀಯ ಮಿಲಿಟರಿ  ಬಂಧನವು ಕಾನೂನುಬಾಹಿರ ಮತ್ತು ಅವಿವೇಕದ ಎಂದು ಸಮರ್ಥಿಸಿಕೊಂಡರು. ವಿಶ್ವದ ಅತಿದೊಡ್ಡ ಭಾರೀ ಕಚ್ಚಾ ತೈಲ ಸಂಗ್ರಹಣಾ ಕೇಂದ್ರವಾದ ಒರಿನೊಕೊ ಆಯಿಲ್ ಬೆಲ್ಟ್ ಅನ್ನು ಅನ್ವೇಷಿಸುವುದು ಈ ಕಾರ್ಯಾಚರಣೆಯ ಹಿಂದಿನ ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಕ್ಕಟ್ಟಿನ ಸಂದರ್ಭ

ಅಮೆರಿಕ ಸರ್ಕಾರವು ಮಡುರೊರನ್ನು ವಿಚಾರಣೆಗೆ ಒಳಪಡಿಸಲು ಯೋಜಿಸಿರುವ ಸ್ಥಳವೆಂದರೆ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆ (SDNY) ಆಗಿರುವುದರಿಂದ ಈ ಘರ್ಷಣೆ ಉದ್ಭವಿಸುತ್ತದೆ. ಸ್ಥಳೀಯ ನಾಯಕನಾಗಿ, ಮಮ್ದಾನಿ ಫೆಡರಲ್ ಕಾರ್ಯಾಚರಣೆಯನ್ನು ಬೆಂಬಲಿಸಲು ನಿರಾಕರಿಸುವುದರಿಂದ, ವಿಚಾರಣೆ ನಡೆಯಲಿರುವ ನಗರದ ಹೃದಯಭಾಗದಲ್ಲಿ ಒಂದು ವಿಶಿಷ್ಟ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗುತ್ತದೆ,(ಏಜೆನ್ಸೀಸ್).