- ಅದೃಷ್ಟ ಎಂಬುದು ಯಾವಾಗ, ಯಾರ ಮನೆ ಬಾಗಿಲು ತಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ
- ಅಚಲವಾದ ನಂಬಿಕೆ ಮತ್ತು ಸತತ ಪ್ರಯತ್ನವಿದ್ದರೆ ಅಸಾಧ್ಯವಾದುದ್ದನ್ನೂ ಸಾಧಿಸಬಹುದು
- ವರ್ಷಗಳಿಂದ ಒಂದೇ ಸಂಖ್ಯೆಯನ್ನು ಖರೀದಿಸುತ್ತಿದ್ದ ಮಹಿಳೆಗೆ ಬರೋಬ್ಬರಿ 11.4 ಕೋಟಿ ರೂ. ಜಾಕ್‌ಪಾಟ್
ವಾಷಿಂಗ್ಟನ್: ಅದೃಷ್ಟ ಎಂಬುದು ಯಾವಾಗ, ಯಾರ ಮನೆ ಬಾಗಿಲು ತಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಅಚಲವಾದ ನಂಬಿಕೆ ಮತ್ತು ಸತತ ಪ್ರಯತ್ನವಿದ್ದರೆ ಅಸಾಧ್ಯವಾದುದ್ದನ್ನೂ ಸಾಧಿಸುವುದು ಎಂಬುದಕ್ಕೆ ಅಮೆರಿಕದ ಮಿಚಿಗನ್‌ನ 69 ವರ್ಷದ ಮಹಿಳೆಯೊಬ್ಬರು ಸಾಕ್ಷಿಯಾಗಿದ್ದಾರೆ. ವರ್ಷಗಳಿಂದ ತಾವು ಬಳಸುತ್ತಿದ್ದ ಅದೇ ಸಂಖ್ಯೆಯನ್ನು ನಂಬಿ ಲಾಟರಿ ಖರೀದಿಸುತ್ತಿದ್ದ (Lottery Winner) ಈ ಮಹಿಳೆಗೆ ಇದೀಗ ಬರೋಬ್ಬರಿ 11.4 ಕೋಟಿ ರೂಪಾಯಿ ಜಾಕ್‌ಪಾಟ್ ಒಲಿದಿದೆ.
ಮಾರ್ಚ್ 11ರಂದು ನಡೆದ ಡ್ರಾದಲ್ಲಿ ಅವರು ಆಯ್ಕೆ ಮಾಡಿದ್ದ 02, 16, 18, 19, 26, 42 ಎಂಬ ಆರು ಸಂಖ್ಯೆಗಳು ಜಾಕ್‌ಪಾಟ್ ಸಂಖ್ಯೆಗಳಿಗೆ ನಿಖರವಾಗಿ ಹೊಂದಿಕೆಯಾಗಿವೆ. ಈ ಮೂಲಕ ಅವರು ಸುಮಾರು 1 ಕೋಟಿಗೂ ಅಧಿಕ ಜನರ ನಡುವೆ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಇಷ್ಟು ದೊಡ್ಡ ಮೊತ್ತದ ಹಣ ಗೆದ್ದಿದ್ದರೂ ಸಹ ಅನಾಮಧೇಯವಾಗಿ ಉಳಿಯಲು ಆಯ್ಕೆ ಮಾಡಿಕೊಂಡ ಮಹಿಳೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ನಾನು ವರ್ಷಗಳಿಂದ ಒಂದೇ ರೀತಿಯ ಲೊಟ್ಟೊ 47 ಸಂಖ್ಯೆಗಳನ್ನು ಆಡುತ್ತಿದ್ದೇನೆ. ಡ್ರಾ ಮಾಡಿದ ನಂತರ ನಾನು ವಿಜೇತ ಸಂಖ್ಯೆಗಳನ್ನು ಪರಿಶೀಲಿಸಿದಾಗ, ನಾನು ಅವುಗಳನ್ನು ತಕ್ಷಣವೇ ಗುರುತಿಸಿದೆ ಎಂದು ಹೇಳಿದರು.
ಆ ಕ್ಷಣ ನಾನು ನನ್ನ ಗಂಡನನ್ನು ಎಬ್ಬಿಸಿ, ನನಗೆ ಲಾಟರಿ ಗೆದ್ದಿದೆ ಅನಿಸುತ್ತದೆ ಎಂದು ಹೇಳಿದೆ. ನಾವು ನನ್ನ ಟಿಕೆಟ್ ತೆಗೆದು ಅದನ್ನು ಸರಿಯಾಗಿ ನೋಡಿದೆವು, ಆಗ ನನಗೆ ನಿಜವಾಗಿಯೂ ನಾನು ಗೆದ್ದಿದ್ದೇನೆಂದು ತಿಳಿಯಿತು.
ಈ ಲಾಟ್ರಿ ಗೆದ್ದರೆ, ನನ್ನ ಪತಿ ಕೆಲಸದಿಂದ ನಿವೃತ್ತಿ ಹೊಂದಿದ್ದಾರೆ. ನಾವು ವಿಶ್ರಾಂತಿ ಹೊಂದಬಹುದು ಜೊತೆಗೆ ಜೀವನವನ್ನು ಆನಂದಿಸಬಹುದು ಎಂದು ಲಾಟರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆ ಮಹಿಳೆಯ ಸ್ಥಿರ ಆಟ ಮತ್ತು ತಾನು ಆಯ್ಕೆ ಮಾಡಿದ ಸಂಖ್ಯೆಗಳ ಮೇಲಿನ ಸಮರ್ಪಣೆ ಫಲ ನೀಡಿತು. ಅವಳು ವರ್ಷಗಳಿಂದ ಒಂದೇ ರೀತಿಯ ಸಂಖ್ಯೆಗಳನ್ನು ಆಡುತ್ತಿದ್ದಳು. ಆದರೆ, ಅವರ ತಾಳ್ಮೆಗೆ ಪ್ರತಿಫಲ ಸಿಕ್ಕಿದೆ ಎಂದು ಹೇಳಿದರು.
ಶಾರ್ಜಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಚಾಲಕನಿಗೆ ಲಾಟರಿ ಗೆದ್ದಿದ್ದಾರೆ.
ಕಳೆದ 15 ವರ್ಷಗಳಿಂದ ಶಾರ್ಜಾ ಮೂಲದ ಪಿಕಪ್ ಚಾಲಕರೊಬ್ಬರು ಒಂದು ತಿಂಗಳನ್ನೂ ಬಿಡದೆ ಪ್ರತಿ ತಿಂಗಳು ನಿಯಮಿತವಾಗಿ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಹಲವು ಬಾರಿ ನಿರಾಸೆಯಾದರೂ, ಎಂದಾದರೂ ಒಂದು ದಿನ ನನ್ನ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆಯಿಂದ ಖರೀದಿಸುತ್ತಿದ್ದರು. 15 ವರ್ಷಗಳ ನಂತರ ಒಲಿದ ಜಾಕ್ಪಾಟ್ನಿಂದ ಸುಮಾರು 10 ಕೋಟಿ ಹಣವನ್ನು ಪಡೆದಿದ್ದಾರೆ (ಏಜೆನ್ಸೀಸ್).