ನವದೆಹಲಿ: ದುಬೈಯ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಇದೇ ಡಿಸೆಂಬರ್ 18ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (@faz3) ಬುರ್ಜ್ ಖಲೀಫಾಗೆ ಸಿಡಿಲು ಬಡಿದ ಅದ್ಭುತ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಕಪ್ಪು ಮೋಡಗಳು ಮತ್ತು ಧಾರಾಕಾರ ಮಳೆಯ ನಡುವೆ ಜಗತ್ತಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ (829.8 ಮೀಟರ್) ಕಾಣುತ್ತದೆ. ಆಕಸ್ಮಿಕವಾಗಿ ಬಲವಾದ ಸಿಡಿಲುವೊಂದು ಬಡಿದು ಕಟ್ಟಡದ ತುದಿಗೆ ತಗಲುತ್ತಿದೆ. ನಂತರ ಗುಡುಗು ಮತ್ತು ಮಳೆಯ ಧ್ವನಿ ಕೇಳುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಮಿಲಿಯನ್‌ಗಳಷ್ಟು ವೀಕ್ಷಣೆಗಳನ್ನು ಪಡೆದಿದೆ.
ಇನ್ನು ಬುರ್ಜ್ ಖಲೀಫಾ ತನ್ನ ಎತ್ತರದಿಂದಾಗಿ ಸಿಡಿಲು ಆಕರ್ಷಿಸುವುದು ಸಾಮಾನ್ಯ, ಮತ್ತು ಇದಕ್ಕೆ ವಿಶೇಷ ಲೈಟ್ನಿಂಗ್ ರಾಡ್‌ಗಳು ಅಳವಡಿಸಲಾಗಿದೆ. ಕಾರಣ ಬುರ್ಜ್ ಖಲೀಫಾ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಗುಡುಗು-ಸಿಡಿಲು ಮಳೆ!
UAEಯಲ್ಲಿ 'ಅಲ್ ಬಶಾಯೆರ್' ಲೋ-ಪ್ರೆಶರ್ ಸಿಸ್ಟಮ್‌ನಿಂದ ಡಿಸೆಂಬರ್ 18ರಂದು ಭಾರಿ ಮಳೆ, ಗುಡುಗು-ಸಿಡಿಲು ಮತ್ತು ಕೆಲವೆಡೆ ಆಲಿಕಲ್ಲು ಸುರಿದಿತ್ತು. ದುಬೈ, ಶಾರ್ಜಾ ಸೇರಿ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು.ಈ ಅದ್ಭುತ ಕ್ಷಣದ ಕೆಲವು ಸ್ಕ್ರೀನ್‌ಶಾಟ್‌ಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ,(ಏಜೆನ್ಸೀಸ್).