ಅವಾಮಿ ಮುಸ್ಲಿಂ ಲೀಗ್ ನಾಯಕ ಶೇಖ್ ರಶೀದ್ ಅಹ್ಮದ್
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸಚಿವ ಮತ್ತು ಅವಾಮಿ ಮುಸ್ಲಿಂ ಲೀಗ್ ನಾಯಕ ಶೇಖ್ ರಶೀದ್ ಅಹ್ಮದ್, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಪೀಜ್ ಸಯೀದ್ನನ್ನು(Hafiz Saeed) ಹೊಗಳಿ, ಭಾರತದ ವಿರುದ್ಧ ವಿಷ ಕಕ್ಕಿದ್ದಾನೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಲಷ್ಕರ್-ಎ-ತೈಬಾ ಹಿರಿಯ ಕಮಾಂಡರ್ ಮತ್ತು ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ ಅಧ್ಯಕ್ಷ ಖಾಲಿದ್ ಮಸೂದ್ ಸಂಧು ಮತ್ತು ಸಂಘಟನೆಯ ಕೇಂದ್ರ ಸಲಹಾ ಸಮಿತಿ ಸದಸ್ಯ ಖಾರಿ ಮೊಹಮ್ಮದ್ ಯಾಕೂಬ್ ಶೇಖ್ ಅವರ ಸಮ್ಮುಖದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಶೇಖ್ ರಶೀದ್ ಅಹ್ಮದ್ ಮಾತನಾಡಿದ್ದಾನೆ.
ತನ್ನನ್ನು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನ ಸೇವಕ ಎಂದು ಘೋಷಿಸಿಕೊಂಡ ಶೇಖ್ ರಶೀದ್ ಅಹ್ಮದ್, ಹಫೀಜ್ ಸಯೀದ್ ಜೊತೆಗೆ ಇಡೀ ಪಾಕಿಸ್ತಾನವಿದೆ. ಭಾರತದ ಪಾಕಿಸ್ತಾನದತ್ತ ನೋಡಿದ್ರೆ, ಅಲ್ಲಾಹನು ಭಾರತವನ್ನು ನಾಶಮಾಡುತ್ತಾನೆ ಎಂದು ಉದ್ಘರಿಸಿದ್ದಾನೆ.
ಭಾರತದಲ್ಲಿ ಪಕ್ಷಿಗಳ ಚಿಲಿಪಿಲಿ ಕೇಳಿಸುವುದಿಲ್ಲ. ದೇವಾಲಯಗಳಲ್ಲಿ ಗಂಟೆಗಳು ಸಹ ಮೊಳಗುವುದಿಲ್ಲ ಎಂದಿದ್ದು, ಭಾರತದಿಂದ ಪಾಕಿಸ್ತಾನವನ್ನು ಏನು ಮಾಡಲಾಗುವುದಿಲ್ಲ ಎಂದಿದ್ದಾನೆ. ತಾನೂ ಅಮೆರಿಕ ಪ್ರವಾಸದಲ್ಲಿದ್ದಾಗ ಹಫೀಜ್ ಸಯೀದ್ ಪೋನ್ ನಂಬರ್ ಮೊಬೈಲ್ನಲ್ಲಿದ್ದನ್ನು ಕಂಡುಕೊಂಡ ಅಧಿಕಾರಿಗಳು, ನನ್ನನ್ನು ಅಲ್ಲಿಂದ ಹೊರಹಾಕಿದರು ಎಂದು ಹೇಳಿಕೊಂಡಿದ್ದಾನೆ.
ಶೇಖ್ ರಶೀದ್ ಅಹ್ಮದ್ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತ ಸಹಾಯಕರಾಗಿದ್ದು, 2020ರಿಂದ 2022ರವರೆಗೆ ಇಮ್ರಾನ್ ಅವರ ಸಂಪುಟದಲ್ಲಿ ದೇಶದ ಆಂತರಿಕ ಸಚಿವನಾಗಿದ್ದನು (ಏಜೆನ್ಸೀಸ್).