Mustafizur Rahman Replacement | ಕೆಕೆಆರ್ ಪಡೆಗೆ ಹೊಸ ಬೌಲರ್ 
ವಿದೇಶ

ಮುಸ್ತಾಫಿಜುರ್ ಔಟ್, ಕೆಕೆಆರ್ ಪಡೆಗೆ ಹೊಸ ಬೌಲರ್​..ಪಿಎಸ್‌ಎಲ್ ಒಪ್ಪಂದ ಕಿತ್ತೆಸೆದು ಕೋಲ್ಕತ್ತಾಗೆ ಬರ್ತಿರೋ ಆ ದೈತ್ಯ ವೇಗಿ ಯಾರು ಗೊತ್ತಾ? | Mustafizur Rahman Replacement

Mustafizur Rahman Replacement: ಐಪಿಎಲ್ 2026ರ ಹರಾಜಿನ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಮತ್ತೊಂದು ಸಂಚಲನ ಮೂಡಿಸಿದ್ದು, ಜಿಂಬಾಬ್ವೆ ಘಾತಕ ವೇಗಿ ಬ್ಲೆಸಿಂಗ್ ಮುಜರಬಾನಿಯನ್ನು ಕೆಕೆಆರ್ ಅಧಿಕೃತವಾಗಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಮುಜರಬಾನಿ ಅವರ ಸೇರ್ಪಡೆಯಿಂದ ಕೆಕೆಆರ್ ಬೌಲಿಂಗ್ ಪಡೆಗೆ ಆನೆ ಬಲ ಬಂದಂತಾಗಿದ್ದು, ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಜಿಂಬಾಬ್ವೆ ಆಟಗಾರನೊಬ್ಬ ದೊಡ್ಡ ಮೊತ್ತಕ್ಕೆ ಸೇರ್ಪಡೆಯಾದ ದಾಖಲೆ ನಿರ್ಮಾಣವಾದರು ಅಚ್ಚರಿ ಪಡಬೇಕಿಲ್ಲ.

ಮುಜರಬಾನಿಯನ್ನು ಆಯ್ಕೆ ಮಾಡಿದ್ದೇಕೆ ಕೆಕೆಆರ್..?

ಕೆಕೆಆರ್ ತಂಡವು ಮುಸ್ತಾಫಿಜುರ್ ರೆಹಮಾನ್​ರನ್ನು ಈ ಬಾರಿ ದೊಡ್ಡ ನಿರೀಕ್ಷೆಯೊಂದಿಗೆ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಕೆಲ ಕಾರಣಗಳಿಂದಾಗಿ ಮುಸ್ತಾಫಿಜುರ್ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯುವಂತಾಗಿದೆ. ಅವರ ಸ್ಥಾನವನ್ನು ತುಂಬಲು ಕೆಕೆಆರ್ ಮ್ಯಾನೇಜ್‌ಮೆಂಟ್ ಜಿಂಬಾಬ್ವೆಯ ಎತ್ತರದ ವೇಗಿ ಮುಜರಬಾನಿ ಅವರನ್ನು ಆಯ್ಕೆ ಮಾಡಿದೆ.
ಕೆಕೆಆರ್ ತಂಡದ ಬೌಲಿಂಗ್ ವಿಭಾಗದಲ್ಲಿ ಪ್ರಸ್ತುತ ಒಬ್ಬ ಎತ್ತರದ ಮತ್ತು ಅತಿ ವೇಗವಾಗಿ ಬೌಲಿಂಗ್ ಮಾಡುವ ವಿದೇಶಿ ವೇಗಿಯ ಅಗತ್ಯವಿತ್ತು. ಮುಜರಬಾನಿ ಸುಮಾರು 6.6 ಅಡಿ ಎತ್ತರವಿದ್ದು, ಯಾವುದೇ ಪಿಚ್‌ನಲ್ಲಿ ಹೆಚ್ಚುವರಿ ಬೌನ್ಸ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.
ಡೆತ್ ಓವರ್ ಸ್ಪೆಷಲಿಸ್ಟ್: ಜಿಂಬಾಬ್ವೆ ಪರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಡೆತ್ ಓವರ್‌ಗಳಲ್ಲಿ ತೋರಿರುವ ಶಿಸ್ತು ಕೆಕೆಆರ್ ಮೆಂಟರ್ ಮತ್ತು ಕೋಚ್‌ಗಳ ಗಮನ ಸೆಳೆದಿದ್ದು, ಇತ್ತೀಚಿನ ಸರಣಿಗಳಲ್ಲಿ ಅವರು ಭಾರತದಂತಹ ದಿಗ್ಗಜ ತಂಡದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು.

ಪಿಎಸ್ಎಲ್ ಒಪ್ಪಂದಕ್ಕೆ ಎಳ್ಳುನೀರು!

ಮುಜರಬಾನಿ ಈ ನಿರ್ಧಾರ ಎಲ್ಲರನ್ನು ಅಚ್ಚರಿಗೊಳಿಸಿದ್ದು, ಪಾಕಿಸ್ತಾನ್ ಸೂಪರ್ ಲೀಗ್ (PSL) ನಲ್ಲಿ ಆಡಲು ಮುಜರಬಾನಿ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಕೆಕೆಆರ್ ತಂಡದಿಂದ ಬಂದ ಐಪಿಎಲ್‌ನಲ್ಲಿ ಆಡುವ ಸುವರ್ಣ ಅವಕಾಶವನ್ನು ಕಳೆದುಕೊಳ್ಳಲು ಬಯಸದ ಮುಜರಬಾನಿ, ಪಿಎಸ್ಎಲ್ ಒಪ್ಪಂದವನ್ನು ಅರ್ಧಕ್ಕೇ ಕೈಬಿಟ್ಟು ಐಪಿಎಲ್‌ಗೆ ಹಾರಲು ಸಜ್ಜಾಗಿದ್ದಾರೆ. ಜಿಂಬಾಬ್ವೆ ಕ್ರಿಕೆಟ್ ಮಂಡಳಿಯೂ ಕೂಡ ಮುಜರಬಾನಿ ಐಪಿಎಲ್ ಪಯಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿಗಳು ತಿಳಿಸಿವೆ.

ಐಪಿಎಲ್‌ನಲ್ಲಿ ಜಿಂಬಾಬ್ವೆ ಹವಾ

ಅನೇಕ ವರ್ಷಗಳ ಬಳಿಕ ಐಪಿಎಲ್ ಅಖಾಡದಲ್ಲಿ ಜಿಂಬಾಬ್ವೆ ಆಟಗಾರರು ಮಿಂಚುತ್ತಿದ್ದು, ಈ ಹಿಂದೆ ಸಿಕಂದರ್ ರಾಜಾ ಪಂಜಾಬ್ ಕಿಂಗ್ಸ್ ಪರ ಆಡಿ ಯಶಸ್ವಿಯಾಗಿದ್ದರು. ಈಗ ಮುಜರಬಾನಿ ಕೆಕೆಆರ್ ಪರ ಕಣಕ್ಕಿಳಿಯುತ್ತಿರುವುದು ಜಿಂಬಾಬ್ವೆ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಸಂಭ್ರಮ ತಂದಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನ ವೇಗದ ಪಿಚ್‌ಗೆ ಮುಜರಬಾನಿ ಬೌಲಿಂಗ್ ಶೈಲಿ ಸೂಕ್ತವಾಗಿ ಹೊಂದಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಜರಬಾನಿ ಸೇರ್ಪಡೆಯಿಂದ ಕೆಕೆಆರ್ ತಂಡದ ಬೌಲಿಂಗ್ ಘಟಕಕ್ಕೆ ಹೊಸ ಚೈತನ್ಯ ಸಿಕ್ಕಂತಾಗಿದ್ದು, ಬ್ಲೆಸಿಂಗ್ ತಂಡಕ್ಕೆ ಸೇರ್ಪಡೆಯಾಗಿರುವುದು ನಮ್ಮ ಬೌಲಿಂಗ್ ವಿಭಾಗಕ್ಕೆ ವೈವಿಧ್ಯತೆ ತಂದಿದೆ ಎಂದು ಕೆಕೆಆರ್ ಮ್ಯಾನೇಜ್‌ಮೆಂಟ್ ಮೂಲಗಳು ಹರ್ಷ ವ್ಯಕ್ತಪಡಿಸಿದೆ(ಏಜೆನ್ಸೀಸ್​).