North Korea Election 2026 (ಚಿತ್ರ X)
North Korea Election 2026: ಉತ್ತರ ಕೊರಿಯಾದಲ್ಲಿ ನಡೆದ 15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿ (SPA) ಚುನಾವಣೆಯಲ್ಲಿ ಕಿಮ್ ಜಾಂಗ್ ಉನ್ ನೇತೃತ್ವದ 'ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ' ಮತ್ತು ಅದರ ಮಿತ್ರಪಕ್ಷಗಳು ಅಭೂತಪೂರ್ವ ಜಯ ಸಾಧಿಸಿವೆ ಎಂದು ಅಲ್ಲಿನ ಅಧಿಕೃತ ಸುದ್ದಿ ಸಂಸ್ಥೆ KCNA ವರದಿ ಮಾಡಿದೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ, ನೋಂದಾಯಿತ ಮತದಾರರಲ್ಲಿ ಶೇ. 99.99 ರಷ್ಟು ಜನರು ಭಾಗವಹಿಸಿದ್ದರು. ಶೇ. 0.0037 ರಷ್ಟು ಜನರು ವಿದೇಶದಲ್ಲಿ ಮತ್ತು ಬೇರೆಡೆ ಕೆಲಸ ಮಾಡುತ್ತಿರುವುದರಿಂದ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಇನ್ನೂ 0.00003% ಜನರು ಮತದಾನದಿಂದ ದೂರ ಉಳಿದಿದ್ದಾರೆ.
ಆದಾಗ್ಯೂ, ಮತ ಚಲಾಯಿಸಿದವರಲ್ಲಿ, ಶೇ. 99.93 ರಷ್ಟು ಜನರು ಅಭ್ಯರ್ಥಿಗಳನ್ನು ಬೆಂಬಲಿಸಿದರೆ, 0.07% ರಷ್ಟು ಜನರು ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದಾರೆ.
ಡಿಪಿಆರ್‌ಕೆ ಚುನಾವಣಾ ಕಾನೂನುಗಳ ಅಡಿಯಲ್ಲಿ, ಕಾರ್ಮಿಕರು, ರೈತರು, ಬುದ್ಧಿಜೀವಿಗಳು, ಸೇವಾ ಸಿಬ್ಬಂದಿ ಮತ್ತು ಅಧಿಕಾರಿಗಳು ಸೇರಿದಂತೆ 687 ಪ್ರತಿನಿಧಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಲಾಗಿದ್ದು, ಪ್ರತಿಯೊಂದು ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿಯನ್ನು ಆಯ್ದುಕೊಂಡಿರುವುದರಿಂದ ಅಂತರರಾಷ್ಟ್ರೀಯ ರಾಜಕೀಯ ವೀಕ್ಷಕರು ಇದನ್ನು ಕೇವಲ ಒಂದು ಪ್ರದರ್ಶನ ಚುನಾವಣೆ ಎಂದು ಬಣ್ಣಿಸಿದ್ದಾರೆ.
ಗಮನಾರ್ಹವಾಗಿ, 1957 ರ ನಂತರ ಎಸ್ಪಿಎ ಚುನಾವಣೆಯಲ್ಲಿ ಮೊದಲ ಬಾರಿಗೆ ವಿರೋಧ ಮತಗಳನ್ನು ಪಡೆದಿದೆ ಎಂದು ಕೇಂದ್ರ ಚುನಾವಣಾ ಸಮಿತಿ ತಿಳಿಸಿದೆ.
ಉತ್ತರ ಕೊರಿಯಾದ ಚುನಾವಣಾ ಫಲಿತಾಂಶಗಳು ದಾಖಲಾದ ಆ 0.07% ವಿರೋಧ ಮತಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಹಾಸ್ಯ ಮತ್ತು ಚರ್ಚೆಗೆ ಕಾರಣವಾಗಿವೆ. ಒಬ್ಬ ಸಾಮಾಜಿಕ ಬಳಕೆದಾರರು 0.07% ಜನರಿಗೆ ಮೌನದ ಕ್ಷಣ ಎಂದು ಬರೆದರೆ, ಮತ್ತೊಬ್ಬ ಬಳಕೆದಾದರರು ಕಿಮ್ ಅವರ ಚಿತ್ರದ ಜೊತೆಗೆ ಆ 0.07% ಜನರ ಹೆಸರುಗಳನ್ನು ನನಗೆ ನೀಡಿ ಎಂದು ಲೇವಡಿ ಮಾಡಿದ್ದಾರೆ (ಏಜೆನ್ಸೀಸ್).