ಟ್ಯಾಂಕ್ ಚಲಾಯಿಸುತ್ತಿರುವ ಕಿಮ್ ಪುತ್ರಿ ಜು ಏ
- ಯುದ್ಧ ಟ್ಯಾಂಕ್ ಏರಿ ಕುಳಿತ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
- ಟ್ಯಾಂಕ್ ಚಲಾಯಿಸುತ್ತಿರುವ ಕಿಮ್ ಪುತ್ರಿ ಜು ಏ
- ಮಗಳನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಿಸಲು ನಡೆಸುತ್ತಿರುವ ಪ್ಲಾನ್ ಎಂದ ರಾಜಕೀಯ ವಿಶ್ಲೇಷಕರು
ಉತ್ತರ ಕೊರಿಯಾ: ಉತ್ತರ ಕೊರಿಯಾದಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಜಯಶಾಲಿಯಾದ ನಂತರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un) ಮತ್ತು ಅವರ ಪುತ್ರಿ ಜು ಏ (Ju Ae) ಯುದ್ಧ ಟ್ಯಾಂಕ್ವೊಂದನ್ನು ಚಲಾಯಿಸುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈ ರೀತಿಯ ಮಿಲಿಟರಿ ಕವಾಯತನ್ನು ನಡೆಸುವ ಮೂಲಕ ಕಿಮ್, ಮಗಳ (Kim Jong Un Daughter Ju) ನ್ನು ತನ್ನ ನಂತರದ ಉತ್ತರಾಧಿಕಾರಿಯನ್ನಾಗಿ ಸಿದ್ಧ ಪಡಿಸಲು ನಡೆಸುತ್ತಿರುವ ತಯಾರಿ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೊವನ್ನು ಶುಕ್ರವಾರ (ಮಾರ್ಚ್ 20) ಉತ್ತರ ಕೊರಿಯಾದ ರಾಜ್ಯ ಮಾಧ್ಯಮ ಪ್ರಕಟಿಸಿದೆ.
ಗುರುವಾರ (ಮಾರ್ಚ್ 19) ನಡೆದ ಮಿಲಿಟರಿ ವ್ಯಾಯಾಮದ ಸಮಯದಲ್ಲಿ ಜು ಏ ಟ್ಯಾಂಕರ್ನಿಂದ ತನ್ನ ತಲೆಯನ್ನು ಹೊರಹಾಕಿದ್ದು, ತಂದೆ ಕಿಮ್ ಎಂದಿನಂತೆ ತನ್ನ ಕಪ್ಪು ಬಣ್ಣದ ಲೆದರ್ ಜಾಕೆಟ್ನ್ನು ಧರಿಸಿ ಟ್ಯಾಂಕರ್ನ ಮೇಲೆ ಕುಳಿತಿರುವುದನ್ನು ನೋಡ ಬಹುದಾಗಿದೆ. ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜಂಟಿಯಾಗಿ ಸಮರಾಭ್ಯಾಸ ನಡೆಸಿದ ನಂತರ ಇದಕ್ಕೆ ಪ್ರತಿಕ್ರಿಯೆ ಎಂಬತ್ತೆ ಈ ಮಿಲಿಟರಿ ವ್ಯಾಯಮವನ್ನು ಉತ್ತರ ಕೊರಿಯಾ ನಡೆಸಿದೆ ಎಂದು ಹೇಳಲಾಗುತ್ತಿದೆ.
ಕಿಮ್ ಪುತ್ರಿ ಜು ಏ ಕೇವಲ 13 ವರ್ಷದವಳಾಗಿದ್ದು ಈಕೆ ಕಡಿಮೆ ವೇಗದಲ್ಲಿ ಬೃಹತ್ ಗಾತ್ರದ ಟ್ಯಾಂಕ್ನ್ನು ಓಡಿಸುತ್ತಿರು ದೃಶ್ಯ ವೈರಲ್ ಆಗುತ್ತಿದೆ. ಆದರೆ ಈಗೀನ ಅತ್ಯಾಧುನಿಕ ಟ್ಯಾಂಕ್ಗಳನ್ನು ಓಡಿಸುವುದು ಸುಲಭವಾಗಿದ್ದು, ಇದು ಕೇವಲ ನನ್ನ ಮಗಳು ದೇಶದ ಮುಂದಿನ ಸರ್ವಾಧಿಕಾರಿ ಎನ್ನುವ ಸಂದೇಶ ರವಾನಿಸಲು ಕಿಮ್ ಮಾಡಿರುವ ಪ್ಲಾನ್ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿಗೆ ಕಿಮ್ ಮರು ಆಯ್ಕೆ!
ಉತ್ತರ ಕೊರಿಯಾದಲ್ಲಿ ನಡೆದ 15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿ (SPA) ಚುನಾವಣೆಯಲ್ಲಿ ಕಿಮ್ ಜಾಂಗ್ ಉನ್ ನೇತೃತ್ವದ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಮತ್ತು ಅದರ ಮಿತ್ರಪಕ್ಷಗಳು ಅಭೂತಪೂರ್ವ ಜಯ ಸಾಧಿಸಿವೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ, ನೋಂದಾಯಿತ ಮತದಾರರಲ್ಲಿ ಶೇ. 99.99 ರಷ್ಟು ಜನರು ಭಾಗವಹಿಸಿದ್ದರು. ಶೇ. 0.0037 ರಷ್ಟು ಜನರು ವಿದೇಶದಲ್ಲಿ ಮತ್ತು ಬೇರೆಡೆ ಕೆಲಸ ಮಾಡುತ್ತಿರುವುದರಿಂದ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಇನ್ನೂ 0.00003% ಜನರು ಮತದಾನದಿಂದ ದೂರ ಉಳಿದಿದ್ದಾರೆ. ಆದರೂ, ಮತ ಚಲಾಯಿಸಿದವರಲ್ಲಿ, ಶೇ. 99.93 ರಷ್ಟು ಜನರು ಅಭ್ಯರ್ಥಿಗಳನ್ನು ಬೆಂಬಲಿಸಿದರೆ, 0.07% ರಷ್ಟು ಜನರು ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದಾರೆ,(ಏಜನ್ಸೀಸ್).