ಶಾಂತಿ ಒಪ್ಪಂದ ಮಾಡಿಸುವ ಅಮೆರಿಕಕ್ಕೆ ಭಾರಿ ಮುಖಭಂಗ 
ವಿದೇಶ

'ಗಾಜಾ ಶಾಂತಿ ಯೋಜನೆ'ಗೆ ಮುಂದಾದ ಅಮೆರಿಕಕ್ಕೆ ಭಾರಿ ಮುಖಭಂಗ! ಟ್ರಂಪ್​ ಪ್ಲ್ಯಾನ್​ಗೆ ಕಲ್ಲು ಹಾಕಿದ ಇಸ್ರೇಲ್ ಪ್ರಧಾನಿ​ | Gaza Peace Plan

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಮುಂದಾಗಿದ್ದ ಗಾಜಾ ಶಾಂತಿ ಒಪ್ಪಂದವನ್ನು ತಿರಸ್ಕರಿಸಿದ ಇಸ್ರೇಲ್
  • ನಾನು ಇರುವರೆಗೂ ಪ್ಯಾಲೆಸ್ತೀನಿಯನ್ ರಾಷ್ಟ್ರ ಇರುವುದಿಲ್ಲ ಎಂದ ಇಸ್ರೇಲ್ ಪ್ರಧಾನಿ ಬೆಂಜಮಿನ್​ ನೆತನ್ಯಾಹು
Gaza Peace Deal: ಗಾಜಾ ಶಾಂತಿ ಒಪ್ಪಂದಕ್ಕೆ ಮುಂದಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಪ್ಲ್ಯಾನ್​ಗೆ ಕಲ್ಲು ಹಾಕಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇದಕ್ಕೆ ನಮ್ಮ ಒಪ್ಪಿಗೆ ಇಲ್ಲವೆಂದು ತಿರಸ್ಕರಿಸಿದ್ದಾರೆ.
ಸಂಪುಟ ಸಭೆಯಲ್ಲಿ ಮಾತನಾಡಿದ ನೆತನ್ಯಾಹು, ಈ 15 ಅಂಶಗಳ ಶಾಂತಿ ಯೋಜನೆಯನ್ನು ನಾವು ಪುರಸ್ಕರಿಸುವುದಿಲ್ಲ. ನಾನು ಪ್ರಧಾನಿ ಆಗಿರುವವರೆಗೆ, ಪ್ಯಾಲೆಸ್ತೀನ್​ ರಾಷ್ಟ್ರ ಅನ್ನೋದು ಇರುವುದಿಲ್ಲ. ಹಮಾಸ್ ಕೇವಲ ಹೆಸರಿಗಷ್ಟೇ ಆಯುಧ ಮರೆಮಾಚುವುದಲ್ಲ, ಸಂಪೂರ್ಣವಾಗಿ ನಿರಾಯುಧವಾಗಬೇಕು. ಅಲ್ಲಿಯವರೆಗೆ, ಇಸ್ರೇಲ್ ಸೇನಾ ಪಡೆ ಗಾಜಾದಿಂದ ಹೊರಗೆ ಕಾಲಿಡುವುದಿಲ್ಲ ಎಂದು ಅಮೆರಿಕ ನಡೆ ವಿರುದ್ಧ ಗುಡುಗಿದ್ದಾರೆ. ಇದು ಟ್ರಂಪ್‌ಗೆ ಭಾರಿ ಮುಖಭಂಗ ಉಂಟು ಮಾಡಿದೆ. 
ಹಮಾಸ್ ಅನ್ನು ಸಂಪೂರ್ಣವಾಗಿ ನಿಶ್ಯಸ್ತ್ರಗೊಳಿಸುವವರೆಗೆ ಇಸ್ರೇಲ್ ಗಾಜಾವನ್ನು ಮಾತ್ರ ಬಿಡುವುದಿಲ್ಲ. ಆದಾಗ್ಯೂ, ಈ ಯೋಜನೆಯನ್ನು ಒಪ್ಪಿಕೊಂಡಿರುವ ಹಮಾಸ್​, ಶಾಂತಿ ಯೋಜನೆಯನ್ನು ಕಾರ್ಯಗತಗೊಳಿಸಲು ನಮ್ಮ ಒಪ್ಪಿಗೆ ಇದೆ ಎಂದು ಹೇಳಿದೆ. ಇದರ ಜತೆ, ಅತ್ತ ಇಸ್ರೇಲ್ ಮೇಲೆ ಒತ್ತಡ ಹೇರುವಂತೆ ಅಮೆರಿಕವನ್ನು ಕೇಳಿಕೊಂಡಿದೆ. ಆದರೀಗ, ಇಸ್ರೇಲ್​ನ ವಿರೋಧ ಅದಕ್ಕೆ ಕಲ್ಲು ಹಾಕಿರುವುದು ಗಮನಾರ್ಹ. 
ಮತ್ತೊಂದೆಡೆ, ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ನಡವಳಿಕೆಯನ್ನು ಟೀಕಿಸುತ್ತಿವೆ. ಒಂದು ವಾರದ ಹಿಂದೆ, ಯುಎಇ ಸೇರಿದಂತೆ ಏಳು ರಾಷ್ಟ್ರಗಳು ಜಂಟಿ ಹೇಳಿಕೆಯನ್ನು ನೀಡಿವೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಮಿಲಿಟರಿ ಕ್ರಮವನ್ನು ತೀವ್ರವಾಗಿ ಖಂಡಿಸಿವೆ. ಇಸ್ರೇಲಿಯ ಈ ಕ್ರಮಗಳು ಗಾಜಾ ಯುದ್ಧವನ್ನು ಕೊನೆಗೊಳಿಸುವ ಟ್ರಂಪ್​ರ ಶಾಂತಿ ಒಪ್ಪಂದಕ್ಕೆ ಹಿನ್ನೆಡೆ ಉಂಟು ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿವೆ,(ಏಜೆನ್ಸೀಸ್).