ನಿನ್ನೆ ಕಾಫಿ ಚೆಲ್ಲಲಿಲ್ಲ ಇಂದು ಉಂಗುರವೇ ಇಲ್ಲ... ಇಸ್ರೇಲ್ ಪ್ರಧಾನಿ ಬದುಕಿಲ್ಲ ಅನ್ನೋದು ಮತ್ತೆ ಸಾಬೀತು! Benjamin Netanyahu
- ನಾನು ಸತ್ತಿಲ್ಲ, ನಾನಿನ್ನೂ ಬದುಕಿದ್ದೇನೆ ಎಂದು ಸಾಬೀತು ಮಾಡಲು ಮತ್ತೆ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್ ಪ್ರಧಾನಿ
- ಎಷ್ಟೇ ವಿಡಿಯೋ ಬಿಡುಗಡೆ ಮಾಡಿದರೂ ಆ ವಿಡಿಯೋದಲ್ಲಿ ಒಂದಲ್ಲ ಒಂದು ದೋಷ ಪತ್ತೆಹಚ್ಚುತ್ತಿರುವ ನೆಟ್ಟಿಗರು
- ಇದೀಗ ಮೂರನೇ ವಿಡಿಯೋ ಕೂಡ ಅನುಮಾನ ಸೃಷ್ಟಿಸಿದ್ದು, ನೆತನ್ಯಾಹು ಬದುಕಿಲ್ಲ ಎಂಬ ಅನುಮಾನ ಜೋರು
Benjamin Netanyahu : ಇರಾನ್ ನಡೆಸಿದ ದಾಳಿಯಲ್ಲಿ ನಾನು ಸತ್ತಿಲ್ಲ, ನಾನಿನ್ನೂ ಬದುಕಿದ್ದೇನೆ ಎಂದು ಸಾಬೀತು ಮಾಡಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಎಷ್ಟೇ ವಿಡಿಯೋ ಬಿಡುಗಡೆ ಮಾಡಿದರು ಕೂಡ ಆ ವಿಡಿಯೋದಲ್ಲಿ ಒಂದಲ್ಲ ಒಂದು ದೋಷವನ್ನು ನೆಟ್ಟಿಗರು ಕಂಡುಹಿಡಿಯುತ್ತಲೇ ಇದಾರೆ. ಇದೀಗ ಮೂರನೇ ವಿಡಿಯೋ ಕೂಡ ಅನುಮಾನ ಸೃಷ್ಟಿಸಿದ್ದು, ನೆತನ್ಯಾಹು ಬದುಕಿಲ್ಲ ಎಂಬ ಅನುಮಾನವನ್ನು ಮತ್ತೆ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ನೆತನ್ಯಾಹು ಅವರು ಇರಾನ್ ಸೇನೆ ನಡೆಸಿದ ದಾಳಿಗೆ ಹತ್ಯೆಗೀಡಾಗಿರಬಹುದು ಅಥವಾ ದೇಶ ಬಿಟ್ಟು ಪಲಾಯನ ಮಾಡಿರಬಹುದು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಲೇ ಇವೆ. ನಿನ್ನೆಯಷ್ಟೇ ನೆತನ್ಯಾಹು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಸಾಮಾನ್ಯ ಜನರೊಂದಿಗೆ ಮಾತನಾಡುತ್ತಿರುವ ಹಾಗೂ ಅವರೊಂದಿಗೆ ಫೋಟೋಗಳಿಗೆ ಪೋಸ್ ನೀಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಮೂಲಕ ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡಿದ್ದಾರೆ.
ಉಂಗುರ ಎಲ್ಲಿ ಎಂದು ನೆಟ್ಟಿಗರು?
ಆದರೆ, ನಿನ್ನೆ ಬಿಡುಗಡೆ ಮಾಡಿದ ವಿಡಿಯೋ ಕೂಡ ಒಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಅದೇನೆಂದರೆ, ವಿಡಿಯೋದ ಒಂದು ಹಂತದಲ್ಲಿ ನೆತನ್ಯಾಹು ಅವರ ಬೆರಳಿನಲ್ಲಿದ್ದ ಉಂಗುರವು ಹಠಾತ್ತನೆ ಕಣ್ಮರೆಯಾಯಿತು. ಹೀಗಾಗಿ, ನೆಟ್ಟಿಗರು ಮತ್ತೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ರಚಿಸಲಾದ ನಕಲಿ ವಿಡಿಯೋ ಎಂದು ಮತ್ತೆ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋದಲ್ಲಿ, ನೆತನ್ಯಾಹು ಅವರು ತಮ್ಮ ಬೆರಳನ್ನು ಚಲಿಸಿದಾಗ ಉಂಗುರವು ಕಣ್ಮರೆಯಾಗುವುದನ್ನು ನೀವು ಕಾಣಬಹುದು.
ಮೊನ್ನೆಯಷ್ಟೇ (ಮಾರ್ಚ್ 15) ನೆತನ್ಯಾಹು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಎರಡನೇ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅವರು ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನ ಕೆಫೆಯೊಂದರಲ್ಲಿ ಕಾಫಿ ಕುಡಿಯುತ್ತಿರುವ ದೃಶ್ಯವಿತ್ತು. ಅಲ್ಲದೆ, ಸತ್ತರೆ ನಾನು ಕಾಫಿಗಾಗಿ ಸಾಯುತ್ತೇನೆ ಎನ್ನುವ ಮೂಲಕ ವಿಡಿಯೋದಲ್ಲಿ ತಮಾಷೆ ಮಾಡಿದ್ದರು. ಆದರೆ, ಆ ವಿಡಿಯೋ ಕೂಡ ಅನುಮಾನ ಹುಟ್ಟುಹಾಕಿತ್ತು. ಏಕೆಂದರೆ, ವಿಡಿಯೋದಲ್ಲಿ ನೆತನ್ಯಾಹು ಅವರು ಕಾಫಿ ತುಂಬಿದ ಕಪ್ ಅನ್ನು ಮೇಲಕ್ಕೆ ಎತ್ತಿಕೊಳ್ಳುತ್ತಾರೆ. ಈ ವೇಳೆ ಕಾಫಿ ಸ್ವಲ್ಪವೂ ಕೆಳಗೆ ಚೆಲ್ಲುವುದಿಲ್ಲ. ಇದೇ ಅಂಶವನ್ನು ವಿಡಿಯೋ ನೋಡಿದ ಅನೇಕ ಮಂದಿ ಪ್ರಶ್ನೆ ಮಾಡಿದರು. ಸಂಪೂರ್ಣ ತುಂಬಿದ ಕಾಫಿ ಕಪ್ ಅನ್ನು ಮೇಲಕ್ಕೆ ಎತ್ತಿಕೊಂಡಾಗ ಇನ್ನೇನು ಚೆಲ್ಲುತ್ತದೆ ಎಂದು ಭಾಸವಾಗುತ್ತದೆ. ಆದರೆ, ಒಂದು ಹನಿ ಕಾಫಿಯೂ ಚೆಲ್ಲುವುದಿಲ್ಲ. ಇದು ಹೇಗೆ ಸಾಧ್ಯ? ಎಂದು ಅನೇಕರು ಪ್ರಶ್ನೆ ಮಾಡುವ ಮೂಲಕ ಮತ್ತೆ ಅನುಮಾನುಗಳನ್ನು ವ್ಯಕ್ತಪಡಿಸಿದರು.
ಮೊದಲ ವಿಡಿಯೋದಲ್ಲಿ ಆರು ಬೆರಳು ಅನುಮಾನ
ನೆತನ್ಯಾಹು ಅವರು ಶುಕ್ರವಾರ (ಮಾರ್ಚ್ 13) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ವಿಡಿಯೋವನ್ನು ಹಂಚಿಕೊಂಡರು. ವಿಡಿಯೋದಲ್ಲಿ ಮಾತನಾಡುವಾಗ ಅವರ ಬಲಗೈಯಲ್ಲಿ ಆರು ಬೆರಳುಗಳಿರುವುದನ್ನು ಅನೇಕ ಮಂದಿ ಗಮನಿಸಿದರು. ಇದಾದ ಬಳಿಕ ವಿಡಿಯೋದಲ್ಲಿರುವ ವ್ಯಕ್ತಿ ನೆತನ್ಯಾಹು ಅಲ್ಲ ಎಂಬ ವದಂತಿಗಳು ಹರಡಿತು. ಇದರ ನಡುವೆ ಅಮೆರಿಕದ ರಾಜಕೀಯ ವಿಶ್ಲೇಷಕಿ ಕ್ಯಾಂಡೇಸ್ ಓವೆನ್ಸ್ ಕೂಡ ನೆತನ್ಯಾಹು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೆ, ಅವರ ಕಚೇರಿ ಕೇವಲ ನಕಲಿ ವಿಡಿಯೋಗಳನ್ನು ಏಕೆ ಹಂಚಿಕೊಳ್ಳುತ್ತಿದೆ ಅಂತಾನೂ ಪ್ರಶ್ನೆ ಮಾಡಿದರು. ಈ ವದಂತಿಗಳ ಬಗ್ಗೆ ಎಕ್ಸ್‌ನ AI ಚಾಟ್‌ಬಾಟ್ Grok ಸ್ಪಷ್ಟನೆ ನೀಡಿತು. ನೆತನ್ಯಾಹು ಅವರಿಗೆ ಎಲ್ಲರಂತೆ ಪ್ರತಿ ಕೈಯಲ್ಲಿ ಐದು ಬೆರಳುಗಳೇ ಇವೆ. ವಿಡಿಯೋದಲ್ಲಿ ಅವರು ಪೋಡಿಯಂ ಬಳಿ ಕೈ ಸನ್ನೆಯ ಮೂಲಕ ಮಾತನಾಡುತ್ತಿರುವಾಗ ಕ್ಯಾಮರಾ ಆಂಗಲ್ ಮತ್ತು ಕೆಂಪು ವೃತ್ತದ ಎಫೆಕ್ಟ್‌ನಿಂದಾಗಿ ಅದು ಆರು ಬೆರಳುಗಳಂತೆ ಕಾಣುವ ಆಪ್ಟಿಕಲ್ ಇಲ್ಯೂಷನ್ ಸೃಷ್ಟಿಸಿದೆ ಎಂದು ಅದು ಹೇಳಿದೆ. ಅಷ್ಟೇ ಅಲ್ಲದೆ, ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂಬ ಇರಾನ್ ಮಾಧ್ಯಮಗಳ ವರದಿಯನ್ನು ಕೂಡ ಗ್ರೋಕ್ ತಳ್ಳಿಹಾಕಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿತು.
ಪ್ರಧಾನಿ ಕಚೇರಿ ಹೇಳಿದ್ದೇನು?
ಇದರ ನಡುವೆ ನೆತನ್ಯಾಹು ಅವರ ಕಚೇರಿ ಕೂಡ ವದಂತಿಗಳಿಗೆ ಸ್ಪಷ್ಟನೆ ನೀಡಿದೆ. ಪ್ರಧಾನಿ ನೆತನ್ಯಾಹು ಇನ್ನೂ ಸತ್ತಿಲ್ಲ ಮತ್ತು ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು ಎಂದು ಘೋಷಿಸಿದೆ. ನೆತನ್ಯಾಹು ಚೆನ್ನಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿಗೆ, ನೆತನ್ಯಾಹು ವಿಚಾರದಲ್ಲಿ ಹರಿದಾಡಿದ್ದ ವದಂತಿಗೆ ಸ್ಪಷ್ಟನೆ ಸಿಕ್ಕಿದಂತಾಗಿದೆ. ಆದರೂ, ಸಾರ್ವಜನಿಕವಾಗಿ ನೆತನ್ಯಾಹು ಕಾಣಿಸಿಕೊಳ್ಳುವವರೆಗೂ ಈ ವದಂತಿ ಜೀವಂತವಾಗಿಯೇ ಇರುತ್ತದೆ.
ಯುದ್ಧದ ಹಿನ್ನೆಲೆ ಏನು?
2026, ಫೆಬ್ರವರಿ 28ರಂದು ಆರಂಭವಾದ ಈ ಯುದ್ಧವು ಇರಾನ್ ಮತ್ತು ಇಸ್ರೇಲ್ ನಡುವಿನ ದಶಕಗಳ ಕಾಲದ 'ನೆರಳು ಯುದ್ಧ' (Shadow War) ನೇರ ಸಂಘರ್ಷವಾಗಿ ಬದಲಾದ ಮಹತ್ವದ ತಿರುವು. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ 'ಆಪರೇಷನ್ ಎಪಿಕ್ ಫ್ಯೂರಿ' ಮತ್ತು 'ರೋರಿಂಗ್ ಲಯನ್' ಎಂಬ ಹೆಸರಿನಡಿ ಇರಾನ್ ಮೇಲೆ ಬೃಹತ್ ವೈಮಾನಿಕ ದಾಳಿಗಳನ್ನು ನಡೆಸಿದವು. ಫೆಬ್ರವರಿ 28ರ ಮುಂಜಾನೆ ನಡೆದ ಈ ದಾಳಿಯಲ್ಲಿ ಇರಾನ್‌ನ ಪರಮಾಣು ಕೇಂದ್ರಗಳು, ಕ್ಷಿಪಣಿ ನೆಲೆಗಳು ಮತ್ತು ರಾಜಧಾನಿ ಟೆಹ್ರಾನ್‌ನಲ್ಲಿದ್ದ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಪಡಿಸಲಾಯಿತು. ಈ ವೇಳೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್ ಮತ್ತು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ನೂರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಸದ್ಯ ಯುದ್ಧ ಮುಂದುವರಿದಿದೆ, (ಏಜೆನ್ಸೀಸ್).