ಇಸ್ರೇಲ್​-ಇರಾನ್​ ನಡುವೆ ಸಂಘರ್ಷ 
ವಿದೇಶ

ಇರಾನ್​, ಇರಾಕ್​, ಸಿರಿಯಾ.... ದುಬೈ ಏರ್​ಪೋರ್ಟ್ ಸಂಪೂರ್ಣ ಸ್ತಬ್ಧ! ಈ ಪ್ರದೇಶಗಳಲ್ಲಿಲ್ಲ ಒಂದೇ ಒಂದು ವಿಮಾನ

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಮೇಲೆ ಇಸ್ರೇಲ್​-ಯುಎಸ್​ ಜಂಟಿ ಕ್ಷಿಪಣಿ ದಾಳಿ
  • ಇಸ್ರೇಲ್​-ಇರಾನ್​ ಸಂಘರ್ಷ ಬೆನ್ನಲ್ಲೇ ದುಬೈ ಏರ್​ಪೋರ್ಟ್​ ಸಂಪೂರ್ಣ ಕ್ಲೋಸ್​
  • ಮೂರು ರಾಷ್ಟ್ರಗಳ ಮೇಲೆ ಹಾರಾಟ ನಿಲ್ಲಿಸಿದ ಅಂತಾರಾಷ್ಟ್ರೀಯ ವಿಮಾನಗಳು
ನವದೆಹಲಿ: ಇರಾನ್​ ಮೇಲೆ ಇಸ್ರೇಲ್​-ಅಮೆರಿಕ ನಡೆಸಿದ ಜಂಟಿ ಕ್ಷಿಪಣಿ ದಾಳಿ ಇದೀಗ ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನತೆ ಸೃಷ್ಟಿಸಿದೆ. ಕೇವಲ ದುಬೈ, ಇರಾನ್​ ಮತ್ತು ಇಸ್ಲಾಮಿಕ್​ ರಾಷ್ಟ್ರಗಳ ಮೇಲೆ ಮಾತ್ರವಲ್ಲ, ಭಾರತಕ್ಕೂ ಈ ಬಿಸಿ ತಟ್ಟಲಾರಂಭಿಸಿದೆ. ಮತ್ತೊಂದೆಡೆ, ಇಡೀ ಜಗತ್ತಿನಲ್ಲಿ ಅತ್ಯಂತ ಬಿಜಿ ಎನ್ನಲಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಸಂಪೂರ್ಣವಾಗಿ ಸ್ತಬ್ಧವಾಗಿರುವುದು ಅಚ್ಚರಿ ತಂದಿದೆ.
ಇರಾನಿನ ರಾಜಧಾನಿ ಟೆಹ್ರಾನ್ ಸೇರಿ ಹಲವಾರು ಪ್ರದೇಶಗಳ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ, ಅದರ ನೆರೆಯ ರಾಷ್ಟ್ರಗಳು ತಮ್ಮ ವಾಯು ಮಾರ್ಗಗಳನ್ನು ಮುಚ್ಚುತ್ತಿವೆ. ಕೆಲವೆಡೆ ಮಾತ್ರ ಮಾರ್ಗಗಳನ್ನು ಬದಲಿಸುವಂತೆ ಸೂಚನೆ ನೀಡಿವೆ. ಈ ಮೊದಲಿಗೆ, ಕೇವಲ ಹಾರಾಟದ ದಿಕ್ಕನ್ನು ಬದಲಾಯಿಸಲು ಹೇಳಿದ್ದ ದುಬೈ ಸರ್ಕಾರ, ಇದೀಗ ಸಂಪೂರ್ಣವಾಗಿ ಏರ್​ಪೋರ್ಟ್​ ಅನ್ನೇ ಮುಚ್ಚಿರುವುದು ಸದ್ಯ ಹಲವರ ಹುಬ್ಬೇರಿಸಿದೆ.
ಫ್ಲೈಟ್‌ರಾಡಾರ್ 24 ದೃಶ್ಯಗಳ ವಿವರಣೆ ಪ್ರಕಾರ, ಪ್ರಸ್ತುತ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳು ಇರಾನ್, ಇರಾಕ್ ಮತ್ತು ಸಿರಿಯಾದ ಮೇಲೆ ಹಾರಾಡುತ್ತಿಲ್ಲ. ಬಹುತೇಕ ವಿಮಾನಗಳು ಈ ಮೂರು ಪ್ರದೇಶ ಹೊರತುಪಡಿಸಿ, ಉಳಿದ ರಾಷ್ಟ್ರಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ತಿರುಗಾಡುತ್ತಿವೆ. ವಿಮಾನಗಳು ಅರೇಬಿಯನ್ ಸಮುದ್ರ, ಟರ್ಕಿ ಮತ್ತು ಮಧ್ಯ ಏಷ್ಯಾದ ಮೂಲಕ ಮಾರ್ಗ ಬದಲಿಸಿಕೊಂಡಿರುವುದು ಕಂಡುಬಂದಿದೆ,(ಏಜೆನ್ಸೀಸ್).