ಚೀನಾದ ಅಧ್ಯಕ್ಷ ಶೀ ಜಿನ್‌ಪಿಂಗ್ (Xi Jinping)
- ಮಧ್ಯಪ್ರಾಚ್ಯದಲ್ಲಿ ಸಾಧ್ಯವಾಗದ ಶಾಂತಿ ಸಭೆ
- ಇಸ್ಲಾಮಾಬಾದ್ನಲ್ಲಿ ಮುರಿದು ಬಿದ್ದ ಒಪ್ಪಂದ
- ಚೀನಾದಿಂದ ನಾಲ್ಕು ಅಂಶಗಳ ಶಾಂತಿ ಮಂತ್ರ
ಚೀನಾ: ಕಳೆದ 40 ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದ್ದು, ಇಸ್ಲಾಮಾಬಾದ್ನಲ್ಲಿ ನಡೆದ ಶಾಂತಿ ಒಪ್ಪಂದ ಸಹ ಮುರಿದು ಬಿದ್ದಿದೆ. ಈ ಹಿನ್ನಲೆಯಲ್ಲಿ ಶಾಶ್ವತ ಶಾಂತಿ (China on Peace Talks) ಸ್ಥಾಪನೆಗೆ ಡ್ರ್ಯಾಗನ್ ದೇಶ ಚೀನಾ ನಾಲ್ಕು ಅಂಶಗಳ ಮಾರ್ಗಸೂಚಿಯನ್ನು ಸೂಚಿಸಿದೆ.
ಚೀನಾದ ಅಧ್ಯಕ್ಷ ಶೀ ಜಿನ್‌ಪಿಂಗ್ (Xi Jinping), ಬೀಜಿಂಗ್‌ನಲ್ಲಿ ಯುಎಇ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗಿನ ಸಭೆಯಲ್ಲಿ ಈ ಮಾರ್ಗಸೂಚಿಯನ್ನು ಪ್ರಸ್ತಾಪಿಸಿದ್ದಾರೆ.
ಚೀನಾದ ಆ ನಾಲ್ಕು ಮಾರ್ಗಸೂಚಿಗಳೇನು?
1. ಅಮೆರಿಕ ಗಲ್ಫ್ ದೇಶಗಳ ರಾಷ್ಟ್ರೀಯತೆ, ಸಾರ್ವಭೌಮತೆ ಹಾಗೂ ಪ್ರಾದೇಶಿಕ ಸುರಕ್ಷತೆಯನ್ನು ಗೌರವಿಸಬೇಕು.
2. ಉಭಯ ದೇಶಗಳು ಶಾಂತಿಯುತ ಸಹಬಾಳ್ವೆಗೆ ಮಹತ್ವ ನೀಡಬೇಕು. ಮಧ್ಯಪ್ರಾಚ್ಯ ಪ್ರದೇಶದ ಸಮಗ್ರ ಬೆಳವಣಿಗೆಗೆ ಪಾಶ್ಚಿಮಾತ್ಯ ದೇಶಗಳು ಸಹಕರಿಸಬೇಕು.
3. ಪರಸ್ಪರ ಭದ್ರತೆ ಮತ್ತು ಅಭಿವೃದ್ಧಿಯನ್ನು ಸಾಧಿಸುವತ್ತ ಹೆಜ್ಜೆ ಹಾಕಬೇಕು. ದೇಶದ ಉನ್ನತಿ ಕಾಣುವ ಮಾರ್ಗವನ್ನು ಅನುಸರಿಸಬೇಕು.
4. ಕೊನೆಯಲ್ಲಿ ಅಂತರಾಷ್ಟ್ರೀಯ ಕಾನೂನನ್ನು ಗೌರವಿಸಬೇಕು. ನಾವೇ ಮಾಡಿಕೊಂಡಿರುವ ನಿಯಮಗಳನ್ನು ನಾವೇ ಮುರಿಯುವುದು ಸರಿಯಲ್ಲ, ಹೀಗಾಗಿ ಸಮನ್ವಯತೆಯಿಂದ ಬದುಕಬೇಕೆಂದು ಚೀನಾ ಅಧ್ಯಕ್ಷರು ತಿಳಿಸಿದ್ದಾರೆ.
ಮತ್ತೆ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ!
ಶನಿವಾರ (ಏ.11) ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ನಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಸಫಲವಾಗಿಲ್ಲ. ಇದರ ಹಿನ್ನಲೆ ಇನ್ನೆರಡು ದಿನಗಳಲ್ಲಿ ಮತ್ತೆ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ ನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಅಮೆರಿಕ ಏನನ್ನು ಬಯಸುತ್ತಿದೆ?
ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ದಾಳಿ ಮಾಡಲು ಮೂಲ ಕಾರಣ ಇರಾನ್ ಪರಮಾಣು ದೇಶವಾಗುವತ್ತ ಹೆಜ್ಜೆ ಇಟ್ಟಿದ್ದಾಗಿದೆ. ಆದ್ದರಿಂದ ಅಮೆರಿಕ, ಇರಾನ್ ಯಾವತ್ತೂ ಪರಮಾಣು ಶಸ್ತ್ರವುಳ್ಳ ದೇಶವಾಗುವುದನ್ನು ಸಹಿಸುವುದಿಲ್ಲ. ಜೊತೆಗೆ ಹೊರ್ಮುಜ್ ಜಲಸಂಧಿಯಲ್ಲಿ ವಿಶ್ವದ ಶೇ.20 ರಷ್ಟು ತೈಲ ಮತ್ತು ಶೇ.25 ರಷ್ಟು ಇಂಧನದ ವ್ಯಾಪಾರ ನಡೆಯುವ ಕಾರಣ ಈ ಮಾರ್ಗದಲ್ಲಿ ಇರಾನ್ ಯಾವುದೇ ರೀತಿಯ ಅಡೆತಡೆ ಮಾಡ ಬಾರದು ಎನ್ನುವುದು ಅಮೆರಿಕದ ಪ್ರಮುಖ ಷರತ್ತುಗಳಾಗಿದೆ.
ಇರಾನಿನ ಷರತ್ತುಗಳೇನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲೆ, ಇರಾನ್ ಶಾಂತಿ ಸ್ಥಾಪನೆಯಾಗ ಬೇಕಾದರೆ ತನ್ನ 10 ಷರತ್ತುಗಳನ್ನು ಮುಂದಿಟ್ಟಿತು. ಯುದ್ಧ ಪರಿಹಾರ ನೀಡಬೇಕು, ಪರಮಾಣು ಶಕ್ತಿ ಹೊಂದಲು ತಡೆಯಬಾರು, ಲೆಬನಾನ್ ಮೇಲೆ ದಾಳಿ ಮಾಡಬಾರದು, ಹೊರ್ಮುಜ್ ಮೇಲೆ ತನ್ನದೆ ಹಿಡಿತವಿರಬೇಕು ಹೀಗೆ ಹತ್ತು ಷರತ್ತುಗಳನ್ನು ಇರಾನ್ ವಿಧಿಸಿತ್ತು. ಆದರೆ ಈ ಷರತ್ತುಗಳೆಗೆ ಅಮೆರಿಕ ಕ್ಯಾರೆ ಅನ್ನದ ಕಾರಣ ಈಗ ಮಾತುಕತೆ ವಿಫಲವಾಗಿದೆ, (ಏಜನ್ಸೀಸ್).