ವಿಡಿಯೋ ದೃಶ್ಯ  
ವಿದೇಶ

ಹೊರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಬರ್ತಿದ್ದ ಎರಡು ಹಡಗು ವಶಪಡಿಸಿಕೊಂಡ ಇರಾನ್ ಸೇನೆ: ವಿಡಿಯೋ ಬಿಡುಗಡೆ | Strait of Hormuz

ಟೆಹ್ರಾನ್: ಹೊರ್ಮುಜ್ ಜಲಸಂಧಿ(Strait of Hormuz) ಮೂಲಕ ಭಾರತಕ್ಕೆ ಬರುತ್ತಿದ್ದ ಎಪಾಮಿನೊಂಡಾಸ್ ಮತ್ತು ಎಂಎಸ್‌ಸಿ ಫ್ರಾನ್ಸೆಸ್ಕಾ ಎಂಬ ಎರಡು ಹಡಗುಗಳನ್ನು ಇರಾನ್​ನ ನೌಕಪಡೆ ತಡೆದು ವಶಪಡಿಕೊಂಡಿದ್ದು, ಅದರ ದೃಶ್ಯಗಳನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಬಿಡುಗಡೆ ಮಾಡಿದೆ.
ವಿಡಿಯೋದಲ್ಲಿ ಇರಾನ್​ನ ಧ್ವಜಗಳನ್ನು ಹೊಂದಿರುವ ಸ್ಪೀಡ್​ಬೋಟ್​ ಮೂಲಕ ಇರಾನ್ ನೌಕಪಡೆಯ ಯೋಧರು ಎರಡು ಹಡಗುಗಳ ಬಳಿ ಬರುವುದನ್ನು, ಅವರು ಮುಖವಾಡ ಧರಿಸಿ, ಬಂದೂಕುಗಳನ್ನು ಹಿಡಿದು ಹಡಗುಗಳ ಮೇಲೆ ಹತ್ತುವುದು ವಿಡಿಯೋದಲ್ಲಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇರಾನ್ ಸೇನೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾ ಪಡೆ ಇಂದು ಬೆಳಿಗ್ಗೆ ಹಾರ್ಮುಜ್ ಜಲಸಂಧಿಯಲ್ಲಿ ನಿಯಮ ಉಲ್ಲಂಘಿಸಿದ ಎರಡು ಹಡಗುಗಳನ್ನು ತಡೆದು ನಿಲ್ಲಿಸಿದೆ. ಜಿಯೋನಿಸ್ಟ್ ಆಡಳಿತಕ್ಕೆ ಸೇರಿ ಎಂಎಸ್‌ಸಿ ಫ್ರಾನ್ಸೆಸ್ಕಾ ಮತ್ತು ಎಪಾಮಿನೊಂಡಾಸ್ ಹಡಗುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಅಡ್ಡಿಪಡಿಸುವುದನ್ನು ಇರಾನ್​​ನ ಕೆಂಪು ಗೆರೆಯನ್ನು ದಾಟಿದಂತೆ. ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಕ್ರಮವನ್ನು ಸುರಕ್ಷಿತ ಜಲಮಾರ್ಗಕ್ಕೆ ವಿರುದ್ಧವಾದ ಚಟುವಟಿಕೆಗಳ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕದನ ವಿರಾಮ ವಿಸ್ತರಣೆ

ಅಮೆರಿಕ ಮತ್ತು ಇರಾನ್​ ನಡುವಿನ ಎರಡು ವಾರಗಳ ಕದನ ವಿರಾಮವನ್ನು ಶಾಂತಿ ಮಾತುಕತೆಗೆ ಇರಾನ್​ಗೆ ಹೆಚ್ಚಿನ ಸಮಯ ನೀಡುವ ಸಲುವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರ್ಧಿಷ್ಠಾವಧಿಗೆ ಮುಂದೂಡಿದ್ದಾರೆ. ಜೊತೆಗೆ ಹೊರ್ಮುಜ್ ಜಲಸಂಧಿಯಲ್ಲಿನ ನೌಕಾಪಡೆಯ ನಿರ್ಬಂಧವನ್ನು ಮುಂದುವರೆಸಿದ್ದಾರೆ (ಏಜೆನ್ಸೀಸ್).