ಇರಾನ್​ ಸೇನೆ ಬರೆದ ಸಾಲುಗಳು  
ವಿದೇಶ

ಥ್ಯಾಂಕ್ಯೂ ಇಂಡಿಯಾ... ಇಸ್ರೇಲ್​, ಗಲ್ಫ್​ ರಾಷ್ಟ್ರಗಳ ಮೇಲಿನ ಕ್ಷಿಪಣಿ ದಾಳಿಗೂ ಮುನ್ನ ಇರಾನ್​ ಬರೆದ ಸಾಲುಗಳಿವು

ಪ್ರಮುಖ ಮುಖ್ಯಾಂಶಗಳು

  • ಇಸ್ರೇಲ್​-ಅಮೆರಿಕ ಮತ್ತು ಇರಾನ್​ ನಡುವಿನ ಭೀಕರ ಯುದ್ಧ ಸದ್ಯಕ್ಕೆ ಕೊನೆಗೊಳ್ಳುವ ಮಾತಿಲ್ಲ
  • ಅಮೆರಿಕ ಸೇರಿ ಅದರ ಮಿತ್ರ ರಾಷ್ಟ್ರಗಳ ಮೇಲೆ ಇರಾನ್​ ಬ್ಯಾಕ್ ಟು ಬ್ಯಾಕ್ ಅಟ್ಯಾಕ್
  • ಮಿಸೈಲ್​ಗಳ ಮೇಲೆ ಭಾರತದ ಜನರಿಗೆ ಧನ್ಯವಾದಗಳು ಎಂಬ ಸಂದೇಶ ಬರೆದ ಇರಾನ್​
ಟೆಹ್ರಾನ್​: ಫೆ.28ರಂದು ಶುರುವಾದ ಇಸ್ರೇಲ್​-ಅಮೆರಿಕ ಮತ್ತು ಇರಾನ್​ ನಡುವಿನ ಭೀಕರ ಯುದ್ಧ ಸದ್ಯಕ್ಕೆ ಕೊನೆಗೊಳ್ಳುವ ಯಾವುದೇ ಮಾತಿಲ್ಲ ಎಂಬುದು ದಾಳಿಗೆ ಪ್ರತಿದಾಳಿಯಿಂದ ಇನ್ನಷ್ಟು ಸ್ಪಷ್ಟವಾಗುತ್ತಿದೆ. ಅಮೆರಿಕ ಸೇರಿದಂತೆ ಅದರ ಮಿತ್ರ ರಾಷ್ಟ್ರಗಳ ಮೇಲೆ ಬ್ಯಾಕ್ ಟು ಬ್ಯಾಕ್ ಅಟ್ಯಾಕ್ ಮಾಡುತ್ತಿರುವ ಇರಾನ್​, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹಡಗುಗಳನ್ನು ಚಿಂದಿ ಮಾಡುತ್ತಿದೆ. ಇದನ್ನು ತನ್ನ ಸೇಡಿನ ಪ್ರತಿರೂಪ ಎಂದು ಹೇಳುತ್ತಿದೆ. ಇದಕ್ಕೆ ಮತ್ತೊಂದು ಜ್ವಲಂತ ಸಾಕ್ಷಿ ಇಲ್ಲಿದೆ. 
ಪ್ರಸ್ತುತ, ಅಮೆರಿಕ ಯುದ್ಧವನ್ನು ನಿಲ್ಲಿಸಲು ಇರಾನ್​ಗೆ 15 ಪ್ರಮುಖ ವಿಷಯಗಳನ್ನು ಒಳಗೊಂಡ ಪತ್ರವನ್ನು ಮುಂದಿಟ್ಟಿದೆ. ಆದರೆ, ಇದಕ್ಕೆ ಒಪ್ಪದ ಇರಾನಿನ ಸೇನೆ, ಇದೀಗ ಅಮೆರಿಕದ ಆಪ್ತಮಿತ್ರ ಇಸ್ರೇಲ್ ಮೇಲೆ ತನ್ನ ಕ್ಷಿಪಣಿಗಳ ದಾಳಿಯನ್ನು ಮುಂದುವರಿಸಿದೆ. ಟೆಹ್ರಾನ್​ ತನ್ನ ಮಿಸೈಲ್​ಗಳ ಮೇಲೆ ಒಗ್ಗಟ್ಟನ್ನು ತೋರಿಸಿದ ದೇಶಗಳಿಗೆ ಧನ್ಯವಾದ ಹೇಳುವ ಸಂದೇಶಗಳನ್ನು ಹೊತ್ತು ಗುರಿಯನ್ನು ತಲುಪಿವೆ. ಈ ವಿಷಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಭಾರತದ ಜನರಿಗೆ ಧನ್ಯವಾದಗಳು ಎಂಬ ಸಂದೇಶವನ್ನು ಮಿಸೈಲ್​ಗಳ ಬರೆದು, ಇಸ್ರೇಲ್​ ಮೇಲೆ ಟೆಹ್ರಾನ್​ ಉಡಾಯಿಸಿದೆ. ಅಂತೆಯೇ, ಜರ್ಮನಿ ಮತ್ತು ಸ್ಪೇನ್​ ದೇಶಗಳಿಗೂ ಧನ್ಯವಾದ ಅರ್ಪಿಸುವ ಸಂದೇಶಗಳನ್ನು ಬರೆದು ಟಾರ್ಗೆಟ್​ ಛಿದ್ರ ಮಾಡಿರುವ ದೃಶ್ಯಗಳು ಹರಿದಾಡುತ್ತಿರುವ ದೃಶ್ಯಗಳ ಮೂಲಕ ತಿಳಿದುಬಂದಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶುಕ್ರವಾರ (ಮಾ.27) 83ನೇ ಹಂತದ ದಾಳಿಯನ್ನು ಕೈಗೊಂಡಿದ್ದಾಗಿ ತಿಳಿಸಿದೆ. ದೀರ್ಘ ಮತ್ತು ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು ಇಸ್ರೇಲ್‌ನ ಪ್ರಮುಖ ಸ್ಥಳಗಳು ಮತ್ತು ಅಮೆರಿಕ ಪಡೆಗಳು ಅಟ್ಯಾಕ್​ ಮಾಡಲು ಸೇರುವ ಜಾಗಗಳು ಸೇರಿ ಕೊಲ್ಲಿಯಾದ್ಯಂತದ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದೆ. ಇದನ್ನೆಲ್ಲ ನೋಡಿದರೆ, ಭಾರತ ಮತ್ತು ಇತರೆ ರಾಷ್ಟ್ರಗಳು ಇಂಧನ, ಎಲ್​ಪಿಜಿ ಗ್ಯಾಸ್​ ಬಿಕ್ಕಟ್ಟಿನಿಂದ ಪರದಾಡುವುದು ಸದ್ಯಕ್ಕೆ ತಪ್ಪೋದಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣಿಸುತ್ತಿದೆ,(ಏಜೆನ್ಸೀಸ್).