- ಇಸ್ರೇಲ್‌ನೊಂದಿಗೆ ಹೋರಾಡಲು ಹೆಜ್ಬೊಲ್ಲಾಗೆ ಬೆಂಬಲ ಕೊಡುತ್ತೇವೆ
- ಇರಾನ್ ಸರ್ವೋಚ್ಚ ನಾಯಕನ ಹಿರಿಯ ಸಲಹೆಗಾರ ಅಲಿ ಅಕ್ಬರ್ ವೆಲಾಯತಿ ಹೇಳಿಕೆ ವೈರಲ್
- ಲೆಬನಾನ್‌ನಲ್ಲಿ ಹಿಜ್ಬೊಲ್ಲಾ, ಗಾಜಾದಲ್ಲಿ ಹಮಾಸ್ ಮತ್ತು ಯೆಮೆನ್‌ನಲ್ಲಿ ಹೌತಿ ಬಂಡುಕೋರರೊಂದಿಗೆ ನಾವಿದ್ದೇವೆ
ಇರಾನ್ : ಭಾನುವಾರ (ಡಿ.14) ಇರಾನ್ Iran) ರ್ವೋಚ್ಚ ನಾಯಕನ ಹಿರಿಯ ಸಲಹೆಗಾರ ಅಲಿ ಅಕ್ಬರ್ ವೆಲಾಯತಿ, ತೆಹ್ರಾನ್‌ನ ಪ್ರಾದೇಶಿಕ ಶತ್ರು ಇಸ್ರೇಲ್ನ್ನು ಎದುರಿಸಲು ಲೆಬನಾನ್‌ನಲ್ಲಿರುವ ತನ್ನ ಮಿತ್ರ ಹೆಜ್ಬೊಲ್ಲಾವನ್ನು ಬೆಂಬಲಿಸುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಗಾಜಾ ಯುದ್ಧದ ನಂತರ ಇಸ್ರೇಲ್‌ನೊಂದಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಯುದ್ಧದಲ್ಲಿ ತೊಡಗಿದ್ದ ಹೆಜ್ಬೊಲ್ಲಾವನ್ನು ನಿಶ್ಯಸ್ತ್ರಗೊಳಿಸಲು ಲೆಬನಾನ್ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್‌ನಿಂದ ಒತ್ತಡವನ್ನು ಎದುರಿಸುತ್ತಿರುವಾಗ ಅಲಿ ಅಕ್ಬರ್ ವೆಲಾಯತಿ ಅವರ ಈ ಹೇಳಿಕೆಗಳು ಕೇಳಿ ಬಂದಿವೆ. ಸುಪ್ರೀಂ ನಾಯಕನ ನಾಯಕತ್ವ ಮತ್ತು ಆದೇಶದಡಿಯಲ್ಲಿ, ಇಸ್ಲಾಮಿಕ್ ಗಣರಾಜ್ಯ ಆಫ್ ಇರಾನ್, ಪ್ರತಿರೋಧದ ಮುಂಚೂಣಿಯಲ್ಲಿರುವ ಈ ಅಮೂಲ್ಯ ಮತ್ತು ನಿಸ್ವಾರ್ಥ ಗುಂಪನ್ನು ದೃಢನಿಶ್ಚಯದಿಂದ ಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದರು.
ಇರಾನ್, ಇಸ್ರೇಲ್ ವಿರೋಧಿ ಸಶಸ್ತ್ರ ಗುಂಪುಗಳ ಜಾಲವಾದ ಲೆಬನಾನ್‌ನಲ್ಲಿ ಹಿಜ್ಬೊಲ್ಲಾ, ಗಾಜಾದಲ್ಲಿ ಹಮಾಸ್ ಮತ್ತು ಯೆಮೆನ್‌ನಲ್ಲಿ ಹೌತಿ ಬಂಡುಕೋರರನ್ನು ಬೆಂಬಲಿಸುತ್ತಾ ಬಂದಿದೆ.ಇತ್ತೀಚೆಗಿನ ಇಸ್ರೇಲ್‌ನೊಂದಿಗಿನ ಯುದ್ಧ ಮತ್ತು ಇರಾನ್‌ನೊಂದಿಗೆ ಭೂಮಾರ್ಗದ ಸಂಪರ್ಕವನ್ನು ಒದಗಿಸಿದ್ದ ಸಿರಿಯಾದ ಬಶರ್ ಅಲ್-ಅಸ್ಸಾದ್ ಅವರ ಪದಚ್ಯುತಿಯ ನಂತರ ಹಿಜ್ಬೊಲ್ಲಾ ದುರ್ಬಲಗೊಂಡಿತು. ಲೆಬನಾನ್‌ಗೆ ದಿನನಿತ್ಯದ ಆಹಾರಕ್ಕಿಂತ ಹೆಜ್ಬೊಲ್ಲಾ ಅಸ್ತಿತ್ವವು ಹೆಚ್ಚು ಅವಶ್ಯಕ ಎಂದು ನವೆಂಬರ್ ಅಂತ್ಯದಲ್ಲಿ ವೆಲಾಯತಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಲೆಬನಾನಿನ ವಿದೇಶಾಂಗ ಸಚಿವ ಯೂಸೆಫ್ ರಗ್ಗಿ ನಮಗೆ ನೀರು ಮತ್ತು ಬ್ರೆಡ್‌ಗಿಂತ ಮುಖ್ಯವಾದುದು ನಮ್ಮ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ. ನಮ್ಮ ಆಂತರಿಕ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಕೇವಲ ನಮ್ಮದು ಎಂದು ಹೇಳಿದ್ದರು.(ಏಜೆನ್ಸೀಸ್).