ಮಧ್ಯಪ್ರಾಚ್ಯದಲ್ಲಿ ಆರಂಭವಾದ ಸಂಘರ್ಷ 
ವಿದೇಶ

ಮಧ್ಯಪ್ರಾಚ್ಯದಲ್ಲಿ ಶುರುವಾದ ಮಹಾಯುದ್ಧ: ಬಂದರ್​ ಅಬ್ಬಾಸ್​ ಮೇಲೆ ಅಮೆರಿಕ ಡ್ರೋನ್​ ದಾಳಿ; ಯುಎಸ್​​ ವಾಯುನೆಲೆ ಮೇಲೆ ಇರಾನ್​ ಪ್ರತಿದಾಳಿ! Iran US Conflict

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಆರಂಭವಾದ ಸಂಘರ್ಷ
  • ಇರಾನ್​ನ ಬಂದರ್​ ಅಬ್ಬಾಸ್​ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ
  • ಅಮರಿಕದ ವಾಯುನೆಲೆಗಳ ಮೇಲೆ ಇರಾನ್​ ಪ್ರತಿದಾಳಿ
ತೆಹ್ರಾನ್​: ಇರಾನಿನ ಬಂದರ್​ ಅಬ್ಬಾಸ್​ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ ನಡೆಸಿದ ಹಿನ್ನಲೆ ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ವಾಯುನೆಲೆಗಳ ಮೇಲೆ ಪ್ರತಿದಾಳಿ (Iran US Conflict) ನಡೆಸಿರುವುದಾಗಿ ವರದಿಯಾಗಿದೆ.
ಕಳೆದೆರಡು ತಿಂಗಳುಗಳಿಂದ ನಡೆಯುತ್ತಿರುವ ಈ ಸಂಘರ್ಷ ಕೆಲ ಸಮಯದವರೆಗೆ ಶಾಂತಿ ಮಾತುಕತೆ ಹಾಗೂ ಕದನ ವಿರಾಮ ಘೋಷಣೆಯ ನಂತರ ಈಗ ಮತ್ತೆ ಉಧ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಆದರೆ ಇರಾನ್​ ಅಮೆರಿಕದ ಯಾವ ವಾಯುನೆಲೆ ಮೇಲೆ ದಾಳಿ ನಡೆಸಿದೆ ಎಂದು ಸ್ಪಷ್ಟವಾಗಿಲ್ಲ, ಆದರೆ ವದಂತಿಗಳ ಪ್ರಕಾರ ಯುಎಸ್​ನ ಮಿತ್ರ ದೇಶವಾಗಿರುವ ಕುವೈತ್​ ಮೇಲೆ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಇರಾನ್​ ಮೇಲೆ ಅಮರಿಕದ ಡ್ರೋನ್​ ಅಟ್ಯಾಕ್​!

ಗುರುವಾರ (ಮೇ.28) ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಅಮೆರಿಕ ಹೊರ್ಮುಜ್​ ಜಲಸಂಧಿ ಸಮೀಪದಲ್ಲಿರುವ ಬಂದರ್​ ಅಬ್ಬಾಸ್​ ವಿಮಾನ ನಿಲ್ದಾಣದ ಮೇಲೆ ಅಮರಿಕ ಡ್ರೋನ್​ ದಾಳಿ ನಡೆಸಿದೆ. ಹೊರ್ಮುಜ್​ ಜಲಸಂಧಿಯಲ್ಲಿ ಸಾಗುತ್ತಿದ್ದ ಹಡುಗಗಳ ಮೇಲೆ ಇರಾನ್​ ದಾಳಿ ಮಾಡಿದ ಹಿನ್ನಲೆ ನಾವು ಪ್ರತೀದಾಳಿ ನಡೆಸಿದ್ದೆವೆ ಎನ್ನುವುದು ಅಮೆರಿಕದ ವಾದವಾಗಿದೆ.
ಈ ಬಂದರ್​ ಅಬ್ಬಾಸ್​ ಏಕೆ ಮುಖ್ಯ?
ಈ ಬಂದರ್​ ಅಬ್ಬಾಸ್​ ನಗರ ಇರಾನಿನ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇದೊಂದು ಬಂದರು ಪ್ರದೇಶವಾಗಿದ್ದು, ಒಂದರ್ಥದಲ್ಲಿ ಇದು ಇರಾನಿನ ವಾಣಿಜ್ಯ ನಗರವಾಗಿದೆ.
ಹಾಗೆಯೇ ಈ ಬಂದರ್​ ಅಬ್ಬಾಸ್​ ನಗರ ಹೊರ್ಮುಜ್​ ಜಲಸಂಧಿ ಜೊತೆ ಗಡಿ ಹಂಚಿಕೊಂಡಿರುವ ಕಾರಣ ಈ ನಗರದ ಮೇಲೆ ಅಮೆರಿಕ ಹಿಡಿತ ಸಾಧಿಸಿದರೆ ಈ ಸಂಘರ್ಷದಲ್ಲಿ ಖಂಡಿತ ಮೇಲುಗೈ ಸಾಧಿಸುತ್ತದೆ ಎನ್ನುವುದು ಜಾಗತಿಕ ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ, (ಏಜನ್ಸೀಸ್).