ಇರಾನ್‌ನಲ್ಲಿ ಪ್ರತಿಭಟನೆ, ವಿದೇಶಾಂಗ ಸಚಿವಾಲಯದ ಸುತ್ತೋಲೆ
ನವದೆಹಲಿ: ಇರಾನ್‌ನಲ್ಲಿ ಸಿಲುಕಿರುವ ಜಮ್ಮು- ಕಾಶ್ಮೀರ ಸೇರಿದಂತೆ ಭಾರತ(India)ದ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ಕಾರ, ಬೆಂಬಲ ಕಾರ್ಯವಿಧಾನವನ್ನು ಸಕ್ರಿಯಗೊಳಿಸಿ, ಕುಟುಂಬಗಳಿಗೆ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ.
ವಿದೇಶಾಂಗ ಸಚಿವಾಲಯವು ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯಾಗಿ ನವದೆಹಲಿಯ ಹೆಚ್ಚುವರಿ ಆಯುಕ್ತರನ್ನು ನೇಮಿಸಿದೆ.
ಇದು ದಾಖಲಾತಿ, ಸಲಹೆ ಮತ್ತು ಬೆಂಬಲಕ್ಕೆ ಸಹಾಯ ಮಾಡಲಿದೆ. ಇರಾನ್‌ನಿಂದ ಬಂದ ವರದಿಗಳ ಪ್ರಕಾರ ಅಲ್ಲಿ ಸುಮಾರು 3,400 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಆದ್ದರಿಂದ ಅಲ್ಲಿರುವ ಭಾರತೀಯರ ಸುರಕ್ಷತೆ, ಸೇವೆ ಮತ್ತು ಸಂವಹನದ ಬಗ್ಗೆ ಕಳವಳಗಳನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ನೋಡಲ್ ಅಧಿಕಾರಿ ನೇಮಕ, ಸಹಾಯವಾಣಿ ಬಿಡುಗಡೆ
ನವದೆಹಲಿಯ ಹೆಚ್ಚುವರಿ ಆಯುಕ್ತರು ಪ್ರಸ್ತುತ ಇರಾನ್‌ನಲ್ಲಿರುವ ಜೆ&ಕೆ ನಿವಾಸಿಗಳಿಗೆ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಸರ್ಕಾರ ತಿಳಿಸಿದೆ. ದಾಖಲೆಗಳ ಅಗತ್ಯಗಳನ್ನು ಸುಗಮಗೊಳಿಸಲು, ಸಲಹೆಗಳನ್ನು ನೀಡಲು ಮತ್ತು ಅಗತ್ಯವಿರುವವರಿಗೆ ಸಹಾಯವನ್ನು ಒದಗಿಸಲು ಅಧಿಕಾರಿ ಎಂಇಎ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸಲಿದ್ದಾರೆ.
ಕುಟುಂಬಗಳು ಮತ್ತು ಸಂಬಂಧಪಟ್ಟ ಸಂಬಂಧಿಕರು ಮಾಹಿತಿ ಮತ್ತು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಲು ಸಹಾಯವಾಣಿಯನ್ನು ನೀಡಲಾಗಿದೆ. ನೀಡಲಾದ ಸಹಾಯವಾಣಿ ಸಂಖ್ಯೆ 1800-8900-166 ಮತ್ತು 0094-2501955. ಅಗತ್ಯವಿರುವ ಯಾವುದೇ ಸಹಾಯಕ್ಕಾಗಿ ಸಕಾಲಿಕ ಮಾಹಿತಿ ನೀಡಲು ಮತ್ತು ರಚನಾತ್ಮಕ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಈ ಸಂಖ್ಯೆಗೆ ಕರೆ ಮಾಡಲು ಅಧಿಕಾರಿಗಳು ತಿಳಿಸಿದ್ದಾರೆ.
ನೋಡಲ್ ಅಧಿಕಾರ ಏಕೆ ಮುಖ್ಯ ?
ಇರಾನ್‌ನಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಘೋಷಣೆ ಬಂದಿದ್ದು, ಅಲ್ಲಿ ಇವರೆಗೆ 3,400 ಜನರ ಸಾವಿನ ವರದಿಯಾಗಿದೆ. ಅಲ್ಲಿನ ಪರಿಸ್ಥಿತಿಯು ದಿನ ಕಳೆದಂತೆ ಬದಲಾಗುತ್ತಿದ್ದು, ಮೂಲಭೂತ ಸೇವೆ ಮತ್ತು ಸಂವಹನದ ಮೇಲೆ ಪರಿಣಾಮ ಬೀರಿದ್ದು, ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳು ದಾಖಲಾತಿ, ಪ್ರಯಾಣ ಯೋಜನೆ ಮತ್ತು ಸ್ಥಳೀಯ ಬೆಂಬಲ ವ್ಯವಸ್ಥೆಗಳನ್ನು ತಲುಪುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗಿದೆ.
ಇರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸಾಮಾನ್ಯವಾಗಿ ಇಂತಹ ತುರ್ತು ಸಂದರ್ಭಗಳಲ್ಲಿ ಸುರಕ್ಷತಾ ಸಲಹೆಗಳನ್ನು ನೀಡುತ್ತದೆ.ನಾಗರಿಕರು ಜಾಗರೂಕರಾಗಿರಲು, ಅನಗತ್ಯ ಓಡಾಟವನ್ನು ತಪ್ಪಿಸಲು ಮತ್ತು ಅಧಿಕೃತ ಮಾರ್ಗಗಳೊಂದಿಗೆ ಸಂಪರ್ಕದಲ್ಲಿರಲು ಮಾರ್ಗದರ್ಶನ ನೀಡುತ್ತದೆ.
ನೇಮಕವಾದ ನೋಡಲ್ ಅಧಿಕಾರಿಯ ಕುಟುಂಬ ವರ್ಗ ಮತ್ತು ಅಲ್ಲಿ ಸಿಲುಕಿರುವ ಜನರ ನಡುವೆ ಸಂಪರ್ಕ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಾರೆ. ವಿಶೇಷವಾಗಿ ಇಂತಹ ಬಿಕ್ಕಟ್ಟಿನ ಸಮಯದಲ್ಲಿ ವದಂತಿ ಮತ್ತು ಸುಳ್ಳು ಮಾಹಿತಿಗಳು ವೇಗವಾಗಿ ಹರಡುವುದರಿಂದ ಈ ನೋಡಲ್ ಅಧಿಕಾರಿ ನೇಮಕ ಅವಶ್ಯಕವಾಗಿರುತ್ತದೆ.
ಪರಿಸ್ಥಿತಿ ಇನ್ನೂ ದುಸ್ಥರವಾದರೇ ಅಲ್ಲಿರುವ ಭಾರತೀಯರನ್ನು ಒಂದು ಸ್ಥಳದಲ್ಲಿ ಸಂಘಟಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರುವ ಜವಾಬ್ದಾರಿ ಸಹ ಇವರದ್ದೇ ಆಗಿರುತ್ತದೆ,(ಏಜನ್ಸೀಸ್).