ಘಟನೆಯ ಸ್ಥಳ 
ವಿದೇಶ

ಸುಡಾನ್​ನಲ್ಲಿ ಆಂತರಿಕ ಸಂಘರ್ಷ; ಆಸ್ಪತ್ರೆ ಮೇಲೆ ಸೇನೆ ದಾಳಿ ಆರೋಪ; ಕನಿಷ್ಠ 64 ಮಂದಿ ಸಾವು ಮಾಹಿತಿ | Sudan

ಕೈರೋ: ದೇಶದಲ್ಲಿ ಅಧಿಕಾರ ಪಡೆಯಲು ಮಿಲಿಟರಿ ಮತ್ತು ಅರೆಸೈನಿಕ ಪಡೆಯ ಆಂತರಿಕ ಸಂಘರ್ಷಕ್ಕೆ ಗುರಿಯಾಗಿರುವ ಸುಡಾನ್​ನಲ್ಲಿ(Sudan) ಶುಕ್ರವಾರ ಸೇನೆಯೂ ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದ ಆಸ್ಪತ್ರೆಯ ಮೇಲೆ ಡ್ರೋನ್​ ದಾಳಿ ನಡೆಸಿದ್ದು, ಪರಿಣಾಮ 64 ಮಂದಿ ಮೃತಪಟ್ಟು, 89 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಸುಡಾನ್‌ನ ಪೂರ್ವ ಡಾರ್ಫರ್‌ನ ಅಲ್ ದೈನ್ ಬೋಧನಾ ಆಸ್ಪತ್ರೆಯ ಮೇಲೆ ಶುಕ್ರವಾರ ಡ್ರೋನ್ ದಾಳಿ ನಡೆದಿದ್ದು, ಕನಿಷ್ಠ 13 ಮಕ್ಕಳು ಸೇರಿದಂತೆ ಕನಿಷ್ಠ 64 ಜನರು ಸಾವನ್ನಪ್ಪಿದ್ದಾರೆ. 89 ಜನರು ಗಾಯಗೊಂಡರು ಮತ್ತು ಆಸ್ಪತ್ರೆಯನ್ನು ಧ್ವಂಸಗೊಂಡಿದೆ ಎಂದು ತಿಳಿಸಿದೆ.
ಸುಡಾನ್‌ನಲ್ಲಿ 2023ರ ಏಪ್ರಿಲ್‌ನಿಂದ ಅಧಿಕೃತ ಸೇನೆ ಮತ್ತು ಅರೆಸೇನಾ ಪಡೆಗಳ (RSF) ನಡುವೆ ಸಂಘರ್ಷ ನಡೆಯುತ್ತಿದೆ. ಈ ಇತ್ತೀಚಿನ ದಾಳಿಯು ಸುಡಾನ್ ಸೇನೆಯ ಡ್ರೋನ್ ದಾಳಿಯಿಂದ ಸಂಭವಿಸಿದೆ ಎಂದು ಹಲವು ವರದಿಗಳು ಉಲ್ಲೇಖಿಸಿವೆ. 
ಇನ್ನೂ ಆಸ್ಪತ್ರೆಯ ಮೇಲಿನ ದಾಳಿಗೆ ವಿಶ್ವ ಆರೋಗ್ಯ ಸಂಸ್ಥೆ ಸೇನೆಯನ್ನು ದೂಷಿಸಿದೆ. ಆದರೆ ಸೇನೆ ದಾಳಿಯ ಆರೋಪವನ್ನು ನಿರಾಕರಿಸಿದೆ. ಆದರೆ ಹೆಸರು ಬಹಿರಂಗ ಪಡಿಸದ ಇಬ್ಬರು ಮಿಲಿಟರಿ ಅಧಿಕಾರಿಗಳು ಹತ್ತಿರದ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. 
ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಸುಡಾನ್​ನಲ್ಲಿ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಆಂತರಿಕ ಸಂಘರ್ಷ 40,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಿದೆ (ಏಜೆನ್ಸೀಸ್).