Train Journey (ಸಾಂದರ್ಭಿಕ ಚಿತ್ರ)
ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರ ಜೀವನದ ಒಂದು ಸಾಮಾನ್ಯ ರೈಲು ಪ್ರಯಾಣ (Train Journey) ಕೆಲವೇ ನಿಮಿಷಗಳಲ್ಲಿ ಹೇಗೆ ಆತಂಕ, ಭಯ ಮತ್ತು ಅಂತಿಮವಾಗಿ ನಿರಾಳತೆಯ ಕ್ಷಣವಾಗಿ ಬದಲಾಯಿತು ಎಂಬುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆಯು ಅಪರಿಚಿತ ದೇಶದಲ್ಲಿ ಒಬ್ಬ ಮಹಿಳೆ ಎದುರಿಸಿದ ಮಾನಸಿಕ ಸಂಘರ್ಷ ಮತ್ತು ಅನಿರೀಕ್ಷಿತ ಸಂದರ್ಭಗಳ ಕ್ಷಣಾರ್ಧದಲ್ಲೇ ಬದಲಿಸಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿದೆ.
ಪೋಸ್ಟ್ನಲ್ಲೇನಿದೆ?
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡ ಯುವತಿಯೊಬ್ಬಳು ತನ್ನ ಸ್ನೇಹಿತೆ ರೈಲು ನಿಲ್ದಾಣದಲ್ಲಿ ಪರ್ಸ್ ಮರೆತು ಬಂದಿದ್ದಳು. ಈ ವೇಳೆ ಅವಳು ಇದ್ದಕ್ಕಿಂದತೆಯೇ ಒತ್ತಡಕ್ಕೆ ಒಳಗಾಗಿರುವುದರ ಬಗ್ಗೆ ವಿವರಿಸಿದ್ದಾರೆ.
ಇಬ್ಬರು ಸ್ನೇಹಿತರು ಒಟ್ಟಿಗೆ ಕೆಲಸ ಮುಗಿಸಿ ತನ್ನ ಮನೆಗೆ ಮರಳಲು ಆಸ್ಟ್ರೇಲಿಯಾದ ರೈಲನ್ನು ಹತ್ತಿದ್ದರು. ಈ ವೇಳೆ ಅವರ ಕೈಚೀಲ ಕಾಣೆಯಾಗಿದೆ ಎಂಬುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಭಯಭೀತರಾದ ಅವರು ಹೆದರಿ ನಿಲ್ದಾಣದ ಕಡೆಗೆ ವಾಪಾಸ್ಸಾಗಿ ಹೋದರು.
ಈ ವೇಳೆ ಅವರು ಮರೆತು ಹೋದ ಸ್ಥಳದಲ್ಲೇ ಅವರ ಕೈಚೀಲ ಬಿದ್ದಿತ್ತು. ಇದನ್ನು ಯಾರು ಮುಟ್ಟದೇ ಇರುವುದನ್ನು ನೋಡಿ ಆಶ್ಚರ್ಯಚಕಿತರಾದರು. ಒಂದು ಕ್ಷಣದ ಭಯ ಹೇಗೆ ಅವರನ್ನು ಧೈರ್ಯವಾಗಿ ರೂಪಾಂತರಗೊಳ್ಳುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು, ಒಬ್ಬ ಬಳಕೆದಾರರು "ನೀವು ಅದನ್ನು ಮರಳಿ ಪಡೆದುಕೊಂಡಿದ್ದು ಅದೃಷ್ಟ" ಎಂದು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬ ಬಳಕೆದಾರರು ಒಂದು ದಿನ ನಾನು ತುಂಬಾ ಒತ್ತಡದಲ್ಲಿದ್ದಾಗ ನನ್ನ ಬ್ಯಾಗ್ ಅನ್ನು ಶಾಪಿಂಗ್ ಸೆಂಟರ್‌ನಲ್ಲಿ ಮರೆತು ಬಂದಿದ್ದೆ. 20 ನಿಮಿಷಗಳ ನಂತರ ನಾನು ಆ ಸ್ಥಳಕ್ಕೆ ಭೇಟಿ ನೀಡಿದಾಗ ನನ್ನ ಬ್ಯಾಗ್ ಅದೇ ಸ್ಥಳದಲ್ಲಿತ್ತು ಎಂದು ಅರಿವಾಯಿತು ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).