Bali hotel theft Indian family 
ವಿದೇಶ

ಬಾಲಿಯಲ್ಲಿ ಸ್ಪೂನ್, ಟವೆಲ್​​ ಕದ್ದ ಇಂಡಿಯನ್​ ಟೂರಿಸ್ಟ್​; 'ಇಂಥ ಚೀಪ್​ ಕೆಲಸ ಮಾಡೋಕೆ ಅಲ್ಲೋಗಿದ್ರಾ?' ಎಂದು ಜಾಡಿಸಿದ ನೆಟ್ಟಿಗರು..Bali

ಪ್ರಮುಖ ಮುಖ್ಯಾಂಶಗಳು

  • ಬಾಲಿಯಲ್ಲಿ ಹೋಟೆಲ್​ನ ವಸ್ತು ಕದ್ದು ಭಾರತದ ಮಾನ ಮರ್ಯಾದೆ ತೆಗೆದ ಪ್ರವಾಸಿಗರು
  • ಚೆಕ್​ಔಟ್ ಆಗುವ ಮುನ್ನ ಟವೆಲ್, ಸ್ಪೂನ್​ ಸೇರಿದಂತೆ ಹಲವು ವಸ್ತು ಕಳ್ಳತನ
  • ಇಂತ ಕೀಳು ಮಟ್ಟದ ಕೆಲಸ ಮಾಡೋಕೆ ಅಲ್ಲಿಗೆ ತೆರಳಿದ್ರ ಎಂದು ಕಿಡಿಕಾರಿದ ನೆಟ್ಟಿಗರು
Bali hotel theft Indian family: ವಿದೇಶ ಅಥವಾ ದೇಶದ ಯಾವುದೇ ಪ್ರವಾಸಿ (Travel)ತಾಣಕ್ಕೆ ತೆರಳಿದರೆ ಅಲ್ಲಿನ ನೆನಪಿಗಾಗಿ ಯಾವುದಾದರೂ ವಸ್ತು ಮತ್ತು ಫೋಟೋ ಶೂಟ್​ ಮಾಡಿಕೊಂಡು ಬರಲಾಗುತ್ತದೆ. ಕುಟುಂಬಸ್ಥರಿಗೆ ನೆನಪಿನ ಕಾಣಿಕೆ ತರಲಾಗುತ್ತದೆ, ಆದರೆ, ಇಲ್ಲೊದು ಭಾರತೀಯ ಕುಟುಂಬವು ಅಲ್ಲಿರುವ ಟವಲ್​, ಬಾಕ್ಸ್​, ಸ್ಪೂನ್​ಗಳನ್ನೇ ಕದ್ದು ತರಲು ಹೊರಟಿದ್ದ ವಿಡಿಯೋ ಸದ್ಯ ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಹೌದು, ಭಾರತದಿಂದ ಬಾಲಿಗೆ(Bali) ತೆರಳಿದ್ದ ಪ್ರವಾಸಿಗರು ಅಲ್ಲಿನ ರೆಸ್ಟೋರೆಂಟ್​ನಲ್ಲಿ ಕಳ್ಳತನಕ್ಕೆ ಕೈ ಹಾಕಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ. ಏಪ್ರಿಲ್​ 19ರಂದು ಕೊಠಡಿಯಲ್ಲಿ ಕಾಣೆಯಾದ ವಸ್ತು ಬಗ್ಗೆ ಗಮನಕ್ಕೆ ಬಂದಾಗ ಚೆಕ್​ ಔಟ್​ ಆಗುತ್ತಿದ್ದ ಭಾರತೀಯರ ಬ್ಯಾಗ್​ ಪರಿಶೀಲನೆ ನಡೆಸಿದ ಹಿನ್ನೆಲೆ, ಕಳ್ಳರ ಬಣ್ಣ ಬಯಲಾಗಿದೆ.

ಎಕ್ಸ್​ನಲ್ಲಿ ವಿಡಿಯೋ ವೈರಲ್

ಈ ಬಗ್ಗೆ ತರುಣ್​ ಗೌತಮ್​ ಎಂಬುವವರು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಇದರಲ್ಲಿ ಬಾಲಿಯ ಹೋಟೆಲ್​ ಸಿಬ್ಬಂದಿ ಪ್ರವಾಸಿಗರ ಟ್ರಾಲಿ ಬ್ಯಾಗ್​ಗಳನ್ನು ಪರಿಶೀಲಿಸಿ, ಅದರಲ್ಲಿದ್ದ ದುಬಾರಿ ಟವೆಲ್, ಹೇರ್​ ಡ್ರೈಯರ್​, ಟಿವಿ ರಿಮೋಟ್​ ಬಾಕ್ಸ್​ನ್ನು ಪಕ್ಕಕ್ಕೆ ಇಟ್ಟಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತೀಯರ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಇಂಥ ಚೀಪ್​ ಕೆಲಸ ಬೇಕಾ?
ವಿಡಿಯೋ ಹಂಚಿಕೊಂಡಿರುವ ಗೌತಮ್ ಹೇಳಿದ್ದು ಹೀಗೆ, ಭಾರತೀಯ ಪ್ರವಾಸಿಗರು ಎಂದು ಬುದ್ಧಿ ಕಲಿಯೋದೆ ಇಲ್ಲ. ಇಂಡೋನೇಷ್ಯಾದ ಬಾಲಿಯಲ್ಲಿನ ಉಬುದ್​​ ಎಂಬಲ್ಲಿ ಭಾರತೀಯ ಪ್ರವಾಸಿಗರು ತಂಗಿದ್ದರು. ಇಲ್ಲಿನ ರೆಸ್ಟೋರೆಂಟ್​ನಿಂದ ವಸ್ತುಗಳನ್ನು ಕದಿದ್ದಾರೆ. ಇದು ಸಿಬ್ಬಂದಿ ಗಮನಕ್ಕೆ ಬಂದು ಅವರು ಕದ್ದಿದ್ದ ವಸ್ತು ವಾಪಸ್ ಪಡೆದುಕೊಂಡಿದ್ದಾರೆ. ನೀವು ವಿದೇಶಕ್ಕೆ ಹೋಗಿ ಇಂತಹ ಚೀಪ್​ ಕೆಲಸವನ್ನು ಯಾಕೆ ಮಾಡ್ತೀರಿ. ಇಂತಹ ವಿಚಾರ ಒಬ್ಬ ಭಾರತೀಯನಾಗಿ ನೋಡಲು ಮುಜುಗರವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಏನಿದು ಘಟನೆ?

ವಿಡಿಯೋದಲ್ಲಿರುವ ನಾಲ್ವರು ಭಾರತೀಯರು, ಕಳೆದ ಏಪ್ರಿಲ್​ 12ರಂದು ಬಾಲಿಯ ಉಬುದ್​​ ಎಂಬಲ್ಲಿ ಉಳಿದುಕೊಂಡಿದ್ದರು. ಏಪ್ರೀಲ್​ 19ರಂದು ಚೆಕ್​ ಔಟ್​ ಮಾಡುವ ವೇಳೆ. ರೂಮಿನಲ್ಲಿರುವ ವಸ್ತು ಕಾಣೆಯಾಗಿದೆ ಎಂದು ಹೋಟೆಲ್ ಸಿಬ್ಬಂದಿ ಗಮನಕ್ಕೆ ಬಂದಿದೆ.
ಅನುಮಾನಗೊಂಡ ಸಿಬ್ಬಂದಿ ಸಪ್ರವಾಸಿಗರ ಟ್ರಾಲಿ ಬ್ಯಾಗ್​ ಪತಿಶೀಲನೆ ನಡೆಸಿದರು. ಮೊದಲು ಕಳ್ಳರು ಬ್ಯಾಗ್​ಗಳನ್ನು ತೋರಿಸಲು ಹಿಂದೇಟು ಹಾಕಿದರು. ಆದರೂ ಪಟ್ಟು ಬಿಡದ ಸಿಬ್ಬಂದಿ, ಬ್ಯಾಗ್​ ತೆಗೆದು ನೋಡಿದಾಗ ಹೋಟೆಲ್‌ನ ಸೌಂದರ್ಯವರ್ಧಕಗಳು ಮಾತ್ರವಲ್ಲದೆ, ಹೇರ್ ಡ್ರೈಯರ್, ಬೆಲೆಬಾಳುವ ಟವೆಲ್‌ಗಳು, ಊಟದ ಪಾತ್ರೆಗಳು ಹಾಗೂ ಟಿವಿ ರಿಮೋಟ್ ಬಾಕ್ಸ್ ಕದ್ದೊಯ್ಯುತ್ತಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ಏನಂದ್ರು?

ಕಳ್ಳತನದ ವಸ್ತು ವಾಪಸ್​ ಹೋಟೆಲ್ ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಇಬ್ಬರು ಒಂದು ಮಾತುಕತೆಗೆ ಬಂದು ಕೇಸ್​​ ಇತ್ಯರ್ಥಗೊಳಿಸಿಕೊಂಡಿದ್ದಾರೆ. ಹೀಗಾಗಿ ಹೆಚ್ಚೇನು ದೂರು ಕೊಟ್ಟಿಲ್ಲ ಎಂದು ಗಿಯಾನ್ ಯಾರ್ ಪೊಲೀಸ್ ವಕ್ತಾರ ಇಪ್ಟು ಐ ಗುಸ್ತಿ ನ್ಗುರಾ ಸುವಾರ್ದಿತಾ ಹೇಳಿದ್ದಾರೆ, (ಏಜೆನ್ಸೀಸ್​).