ಭಾರತದ ಖಾಯಂ ಪ್ರತಿನಿಧಿ ಅಂಬಾಸಿಡರ್ ಪಿ. ಹರೀಶ್ ಪರ್ವತನೇನಿ
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್‌ನ (UNSC) "Leadership for Peace" ಎಂಬ ಓಪನ್ ಡಿಬೇಟ್‌ನಲ್ಲಿ ಮಂಗಳವಾರ ಭಾರತದ ಖಾಯಂ ಪ್ರತಿನಿಧಿ ಅಂಬಾಸಿಡರ್ ಪಿ. ಹರೀಶ್ ಪರ್ವತನೇನಿ ಅವರು ಪಾಕಿಸ್ತಾನಕ್ಕೆ ತೀವ್ರ ಛೀಮಾರಿ ಹಾಕಿದ್ದಾರೆ.
ಪಾಕಿಸ್ತಾನದ ಪ್ರತಿನಿಧಿ ಜಮ್ಮು-ಕಾಶ್ಮೀರ ಮತ್ತು ಸಿಂಧೂ ನದಿ ನೀರು ವಿಷಯಗಳನ್ನು ಎತ್ತಿದ ನಂತರ, ಭಾರತದ ಅಂಬಾಸಿಡರ್ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
“ಪಾಕಿಸ್ತಾನಕ್ಕೆ ಜನರ ಇಚ್ಛೆಯನ್ನು ಗೌರವಿಸುವುದು ವಿಶಿಷ್ಟ ರೀತಿಯಲ್ಲಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಹಾಕುವುದು, ಅವರ ಪಕ್ಷ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (PTI) ಅನ್ನು ನಿಷೇಧ ಮಾಡಿ, ಸೇನೆಯು 27ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ 'ಸಾಂವಿಧಾನಿಕ ದೊಂಬಿ' ಎಬ್ಬಿಸಿದೆ, ಈ ಮೂಲಕ ಚೀಫ್ ಆಫ್ ಡಿಫೆನ್ಸ್ ಫೋರ್ಸಸ್ ಜನರಲ್ ಅಸಿಮ್ ಮುನೀರ್ ಅವರಿಗೆ ಜೀವಮಾನದ ವಿನಾಯಿತಿ (lifetime immunity) ನೀಡುವುದು.” ಆಗಿದೆ ಎಂದು ಪಿ. ಹರೀಶ್ ಪರ್ವತನೇನಿ ಗುಡುಗಿದ್ದಾರೆ.
ಈ ಘಟನೆ ಪಾಕಿಸ್ತಾನದ ಆಂತರಿಕ ಸಮಸ್ಯೆಗಳನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಎತ್ತಿ ತೋರಿಸುವ ಮೂಲಕ ಭಾರತದ ರಾಜತಾಂತ್ರಿಕ ತಿರುಗೇಟು ನೀಡಿದೆ.
ಇದು ಪಾಕಿಸ್ತಾನದ ಆಂತರಿಕ ರಾಜಕೀಯ ಸ್ಥಿತಿ, ಪ್ರಜಾಪ್ರಭುತ್ವದ ಕುಸಿತ ಮತ್ತು ಸೇನೆಯ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಟೀಕಿಸಿದೆ. ಭ್ರಷ್ಟಾಚಾರ ಮತ್ತು ಇತರ ಪ್ರಕರಣಗಳಲ್ಲಿ ಶಿಕ್ಷೆಗಳಡಿಯಲ್ಲಿ ಇಮ್ರಾನ್ ಖಾನ್ 2023ರಿಂದ ಜೈಲಲ್ಲಿದ್ದಾರೆ.27ನೇ ತಿದ್ದುಪಡಿ (2025ರಲ್ಲಿ ಅಂಗೀಕೃತ) ಅಸಿಮ್ ಮುನೀರ್ ಅವರಿಗೆ ಜೀವಮಾನದ ಕಾನೂನು ವಿನಾಯಿತಿ ನೀಡಿದೆ ಎಂದಿದ್ದಾರೆ. ಅಲ್ಲದೆ, ಭಾರತದ ಅಂಬಾಸಿಡರ್ ಪಿ. ಹರೀಶ್ ಪರ್ವತನೇನಿ ಅವರು ಪಾಕಿಸ್ತಾನವನ್ನು "ಉಗ್ರಗಾಮಿತ್ವದ ಜಾಗತಿಕ ಕೇಂದ್ರ" ಎಂದು ಕರೆದು, ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದನ್ನು ಟೀಕಿಸಿದರು,(ಏಜೆನ್ಸೀಸ್).