ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ: ಕೇಕ್‌ಗಾಗಿ ಮುಗಿಬಿದ್ದ ಜನ; ಪರಸ್ಪರ ಕಿತ್ತಾಟ
- ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ
- ಕೇಕ್‌ಗಾಗಿ ಮುಗಿಬಿದ್ದ ಜನ; ಪರಸ್ಪರ ಕಿತ್ತಾಟ
- ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಇಸ್ಲಾಮಾಬಾದ್: ಇಂದು (ಶುಕ್ರವಾರ, ಆ. 14) ಭಾರತದ ನೆರೆ ರಾಷ್ಟ್ರ ಪಾಕಿಸ್ತಾನದ ಜನ್ಮದಿನ. ಹೌದು ಅಖಂಡ ಹಿಂದೂಸ್ತಾನದ ಭಾಗವಾಗಿದ್ದ ಪಾಕಿಸ್ತಾನ ಆಗಸ್ಟ್ 14, 1947 ರಂದು ಪ್ರತ್ಯೇಕ ದೇಶವಾಗಿ ಮಾರ್ಪಟ್ಟಿತು. ಭಾರತದೊಂದಿಗೆ ಜನ್ಮತಾಳಿದೂ ಭಾರತ ಮಾಡಿದ ಸಾಧನೆಯ ಅರ್ಧದಷ್ಟನ್ನು ಆ ದೇಶ ಸಾಧಿಸಲು ಸಾಧ್ಯವಾಗಿಲ್ಲ ಎನ್ನುವುದು ವಿಪರ್ಯಾಸ.
ಇಂದು ಪಾಕಿಸ್ತಾನದ ಸ್ವಾತಂತ್ಯ ದಿನಾಚರಣೆಯಾದ ಕಾರಣ ಆ ದೇಶದ ನಾಗರಿಕರು, ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಆದರೆ ಅಲ್ಲಿಯ ಬಡತನ, ಹಸಿವು, ನಿರುದ್ಯೋಗದ ಮಟ್ಟ ಎಷ್ಟಿದೆ ಎಂದರೆ, ಆ ಕೇಕ್ (Fighting for Cake in Pakistan) ಅನ್ನು ತಿನ್ನಲು ಜನ ಹೊಡೆದಾಟವನ್ನೇ ನಡೆಸಿದ್ದಾರೆ.
ಈಗ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದು, ಪಾಕಿಸ್ತಾನವನ್ನು ಕೊಂಡಾಡುವ ಜನ ಮೊದಲು ಅಲ್ಲಿಯ ಜನರ ವರ್ತನೆಯನ್ನು ಒಮ್ಮೆ ಗಮನಿಸಿ ಎಂದು ಹೇಳುತ್ತಿದ್ದಾರೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಪಾಕಿಸ್ತಾನದ ಭಾವುಟದ ಚಿತ್ರವಿರುವ ದೊಡ್ಡದಾದ ಕೇಕ್ ಅನ್ನು ತಯಾರಿಸಲಾಗಿದೆ. ಧ್ವಜವಂದನೆ ಸಲ್ಲಿಸಿ, ರಾಷ್ಟ್ರಗೀತೆ ಹಾಡಿದ ನಂತರ, ಆ ಕೇಕ್ ಅನ್ನು ಕತ್ತರಿಸಿ ನೆರೆದಿದ್ದ ಜನರಿಗೆ ವಿತರಿಸಲು ಪ್ರಾರಂಭಿಸಲಾಗಿದೆ.
ಆದರೆ ಸಾಲಿನಲ್ಲಿ ನಿಂತು ಕೇಕ್ ಅನ್ನು ಪಡೆಯಲು ಆಸಕ್ತಿ ತೋರದ ಜನ ಕೇಕ್ ಮೇಲೆ ಮುಗಿಬಿದ್ದು, ಕೈಗೆ ಎಷ್ಟು ದೊರೆಯುತ್ತೋ ಅಷ್ಟು ಕೇಕ್ ಅನ್ನು ಲೂಟಿ ಮಾಡಲು ಶುರುವಿಟ್ಟಿದ್ದಾರೆ. ಕೆಲ ಜನರಿಂದ ಪ್ರಾರಂಭವಾದ ಈ ಕೆಲಸವನ್ನು ನೆರೆದಿದ್ದ ಎಲ್ಲರೂ ಮಾಡಲು ಶುರುವಿಟ್ಟ ಕಾರಣ, ಸ್ಥಳದಲ್ಲಿ ಹೊಡೆದಾಟ- ಬಡಿದಾಟ ನಡೆದಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪಾಕ್ ಜನರನನ್ನು ಅಪಹಾಸ್ಯ ಮಾಡಲು ಮುಂದಾಗಿದ್ದಾರೆ.
ಈ ದೇಶ ಭಾರತದ ಜೊತೆ ಸೇರದಿದ್ದದ್ದೆ ಒಳ್ಳೆಯದಾಯಿತು. ಒಂದು ಕೇಕ್ ತಿನ್ನಲು ಇಷ್ಟು ಜಗಳ ಯಾರಾದರೂ ಮಾಡುತ್ತಾರಾ? ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಕೇಕ್ ತಿನ್ನಲು ಹೊಡೆದಾಡುವಾಗಲೇ, ಅಲ್ಲಿ ಜನರು ಯಾವ ಕಷ್ಟದಲ್ಲಿದ್ದಾರೆಂದು ತಿಳಿಯುತ್ತೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಒಂದು ಕೇಕ್ ಅನ್ನೇ ಸರಿಯಾಗಿ ನಿರ್ವಹಣೆ ಮಾಡಲಾಗದು ಇವರಿಗೆ ಕಾಶ್ಮೀರ ಬೇಕಂತೆ ಎಂದು ಮತ್ತೊಬ್ಬರು ಟಾಂಗ್ ಕೊಟ್ಟಿದ್ದಾರೆ,
(ಏಜನ್ಸೀಸ್).