ಐರಿಷ್ ಕೋಟ್ಯಾಧಿಶನನ್ನು ಮದುವೆಯಾದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಇಮ್ರಾನ್ ಖಾನ್ ಅವರ ವಿಚ್ಛೇದಿತ ಪತ್ನಿ ಜೆಮಿಮಾ ಗೋಲ್ಡ್‌ಸ್ಮಿತ್ ಈಗ ಐರಿಶ್ ಮೂಲದ ಕೋಟ್ಯಾಧೀಶ ಕ್ಯಾಮರೂನ್ ಓ'ರೈಲಿ ಎಂಬುವವರ ಜೊತೆ ಮದುವೆಯಾಗಿದ್ದಾರೆಂದು ವರದಿಯಾಗಿದೆ. ಇಮ್ರಾನ್ ಖಾನ್ ಜೊತೆಗಿನ ವೈವಾಹಿಕ ಜೀವನ ಕೊನೆಗೊಂಡು ಎರಡು ದಶಕ ಕಳೆದ ನಂತರ ಜೆಮಿಯಾ ಗೋಲ್ಡ್‌ಸ್ಮಿತ್ ಈಗ ಮತ್ತೊಮ್ಮೆ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆಂದು ತಿಳಿದು ಬಂದಿದೆ.
ಜೆಮಿಯಾ ಗೋಲ್ಡ್ಸ್ಮಿತ್ನ ಸಹೋದರನ ಪತ್ನಿ ಜೆಮಿಯಾ ಜೋನ್ಸ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ತನ್ನ ಅತ್ತಿಗೆಯ ಮದುವೆಯಾಗುತ್ತಿರುವ ಕುರಿತು ಫೋಟೊ ಹಂಚಿಕೊಳ್ಳುವ ಮೂಲಕ ಈ ಸುದ್ದಿಗೆ ಪುರಾವೆ ವದಗಿಸಿದ್ದಾರೆ. ಮಾಹಿತಿ ಪ್ರಕಾರ, ಜೆಮಿಯಾ ಗೋಲ್ಡ್ಸ್ಮಿತ್ಗೆ ಈಗ 52 ವರ್ಷವಾದರೆ, ನೂತನ ಪತಿ ಕ್ಯಾಮರೂನ್ ಓ'ರೈಲಿ 62 ವಯಸ್ಸಿನವರೆಂದು ಹೇಳಲಾಗುತ್ತಿದೆ.
ಇಮ್ರಾನ್ ಜೊತೆ ಮದುವೆ, ವಿಚ್ಛೇದನ!
ಪಾಕಿಸ್ತಾನದ ಖ್ಯಾತ ಕ್ರಿಕೆಟ್ ಆಟಗಾರ ಹಾಗೂ ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್ 1995 ರಲ್ಲಿ ಬ್ರಿಟನ್ ಮೂಲದ ಟಿವಿ ಪ್ರೊಡ್ಯೂಸರ್ ಹಾಗೂ ಸ್ಕ್ರೀನ್ವ್ರೈಟರ್ ಆಗಿದ್ದ ಜೆಮಿಯಾ ಗೋಲ್ಡ್ಸ್ಮಿತ್ರನ್ನು ವಿವಾಹವಾಗಿದ್ದರು.
ಆದರೆ, ಅದಾಗಲೇ ಇಮ್ರಾನ್ ಖಾನ್ ಎರಡು ಮದುವೆಯಾಗಿದ್ದರು. ಆದರೂ ಜೆಮಿನಾ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಇಮ್ರಾನ್ ಅವರನ್ನು ವರಿಸಿ, ಸುಲೇಮಾನ್ ಇಸಾ ಮತ್ತು ಖಾಸಿಮ್ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದರು. ಆದರೆ ಪಾಕಿಸ್ತಾನದಲ್ಲಿ ಜೀವನ ನಡೆಸಲು ಕಷ್ಟವಾದ ಕಾರಣ ಒಂಭತ್ತು ವರ್ಷಗಳ ವೈವಾಹಿಕ ಜೀವನಕ್ಕೆ ಪೂರ್ಣವಿರಾಮ ಇಡಲು ಮುಂದಾಗಿ 2004 ರಲ್ಲಿ ಇಮ್ರಾನ್ ಖಾನ್ರಿಂದ ವಿಚ್ಛೇದನ ಪಡೆದು, ಬ್ರಿಟನ್ಗೆ ಮರಳಿದ್ದರು.
ಜೈಲಿನಲ್ಲಿರುವ ಇಮ್ರಾನ್!
ಜೆಮಿಯಾ ಗೋಲ್ಡ್‌ಸ್ಮಿತ್ ಹೊಸ ಬದುಕಿಗೆ ಕಾಲಿಡುತ್ತಿದ್ದರೆ, ಇತ್ತ ಇಮ್ರಾನ್ ಖಾನ್ ಪಾಕಿಸ್ತಾನದ ಅಡಿಯಾಲಾ ಜೈಲಿನಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಾ ಕುಳಿತ್ತಿದ್ದಾರೆ. 2018 ರಿಂದ 2024 ರ ವರೆಗೆ ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಇಮ್ರಾನ್ ಖಾನ್ ನಂತರ ಸೇನಾ ಸಿಬ್ಬಂದಿಗಳ ಮೇಲೆ ಮುನಿಸಿಕೊಂಡ ಪರಿಣಾಮ ಭ್ರಷ್ಟಾಚಾರ ಆರೋಪದ ಹಿನ್ನಲೆ ಜೈಲು ಸೇರಿದರು.
ಮೇ 2023ರಲ್ಲಿ ಮೊದಲಿಗೆ ಬಂಧನಕ್ಕೊಳಗಾಗಿದ್ದ ಇಮ್ರಾನ್ ಖಾನ್ ಮೇಲೆ ತೋಷಖಾನಾ (ಉಡುಗೊರೆಗಳ ಅಕ್ರಮ ಮಾರಾಟ) ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಎಲ್ಲಾ ಪ್ರಕರಣಗಳು ಕೇವಲ ರಾಜಕೀಯ ಪ್ರೇರಿತವಾಗಿವೆ ಎಂದು ಪಿಟಿಐ ಪಕ್ಷ ಮತ್ತು ಇಮ್ರಾನ್ ಖಾನ್ ಬೆಂಬಲಿಗರು ಆರೋಪಿಸುತ್ತಾ ಬಂದಿದ್ದಾರೆ.
ಸದ್ಯ ಇಮ್ರಾನ್ ಆರೋಗ್ಯ ಸ್ಥಿತಿ ಕೂಡ ತೀವ್ರವಾಗಿ ಹದಗೆಟ್ಟಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು. ಇಮ್ರಾನ್ ಖಾನ್ ಒಬ್ಬ ಶ್ರೇಷ್ಟ ಕ್ರಿಕೆಟ್ ಆಟಗಾರ, ರಾಜಕೀಯ ಏನೇ ಇದ್ದರು ಅವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಬೇಕೆಂದು ವಿಶ್ವದ ಕ್ರಿಕೆಟ್ ದಿಗ್ಗಜರು ಪಾಕ್ ಪ್ರಧಾನಿಗೆ ಮನವಿ ಮಾಡಿದ್ದರು, (ಏಜೆನ್ಸೀನ್).