Imran Khan | ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್  
ವಿದೇಶ

ಇಮ್ರಾನ್ ಖಾನ್ ಜೀವಂತವಾಗಿದ್ದಾರೆ; ಸಹೋದರಿ ಉಜ್ಮಾ ಭೇಟಿಯ ಸಮಯದಲ್ಲಿ ಕೋಪಗೊಂಡಿದ್ಯಾಕೆ ಪಾಕ್​ ಮಾಜಿ ಪ್ರಧಾನಿ..! Imran Khan

ಇಸ್ಲಾಮಾಬಾದ್​: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಸಹೋದರಿ ಉಜ್ಮಾ ಖಾನಮ್, ಖಾನ್ ಸುರಕ್ಷತೆ ಮತ್ತು ಆರೋಗ್ಯದ ಸುತ್ತಲಿನ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ. ಅಲ್ಲದೆ, ಇಮ್ರಾನ್ ಖಾನ್ ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಉಜ್ಮಾ, ನಾನು ಅವರನ್ನು ಭೇಟಿಯಾಗಿ ಹಿಂತಿರುಗುತ್ತಿದ್ದೇನೆ. ಇಮ್ರಾನ್​ ಖಾನ್​ಗೆ ಏನೂ ಆಗಿಲ್ಲ. ಅವರು ತಮ್ಮ ಸೆಲ್‌ನಲ್ಲಿ ಸುರಕ್ಷಿತರಾಗಿದ್ದಾರೆ ಮತ್ತು ಅವರ ನೈತಿಕ ಸ್ಥೈರ್ಯ ಎಂದಿಗಿಂತಲೂ ಹೆಚ್ಚಾಗಿದೆ ಎಂದಿದ್ದಾರೆ. ಕಳೆದ ಹಲವಾರು ಗಂಟೆಗಳಿಂದ ತಮ್ಮ ನಾಯಕನ ಒಂದು ನೋಟ ಅಥವಾ ಸುದ್ದಿಗಾಗಿ ಕಾಯುತ್ತಿದ್ದ ಪ್ರಪಂಚದಾದ್ಯಂತವಿರುವ ಪಿಟಿಐ ಬೆಂಬಲಿಗರಿಗೆ ಈ ಸುದ್ದಿ ಹೆಚ್ಚಿನ ಸಮಾಧಾನ ತಂದಿದೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿಗರಲ್ಲಿ ತಮ್ಮ ನಾಯಕನ ಯೋಗಕ್ಷೇಮದ ಬಗ್ಗೆ ವ್ಯಾಪಕ ಆತಂಕದ ನಡುವೆ ಈ ಹೇಳಿಕೆ ಬಂದಿದೆ. ಅಲ್ಲದೆ, ಕಳೆದ ಕೆಲವು ದಿನಗಳಿಂದ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಮತ್ತು ಮಾಹಿತಿಯ ಅಡಚಣೆಯಿಂದಾಗಿ, ಇಮ್ರಾನ್ ಖಾನ್ ಸ್ಥಳದ ಕುರಿತು ಹಲವಾರು ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದ್ದವು.

ಇಮ್ರಾನ್ ಖಾನ್ ಸಾವಿನ ಕೇಳಿ ಬಂದ ಆರೋಪಗಳು

ಇಮ್ರಾನ್ ಖಾನ್ ಸಾವಿನ ಬಗ್ಗೆ ಬಲೂಚಿಸ್ತಾನದ ವಿದೇಶಾಂಗ ಸಚಿವಾಲಯವು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜೊತೆಗೆ ರಾವಲ್ಪಿಂಡಿಯ ಅದ್ಯಾಳ ಜೈಲಿನಲ್ಲಿ ಖಾನ್ ಹತ್ಯೆ ಮಾಡಲು ಸಂಚು ರೂಪಿಸಿದೆ ಎಂದು ಆರೋಪಿಸಿತ್ತು.
ಜೈಲಿನಲ್ಲಿರುವ ಮಾಜಿ ಪ್ರಧಾನಿಯನ್ನು ಭೇಟಿಯಾಗಲು ಅವಕಾಶ ನೀಡದ ಕಾರಣ ಇಮ್ರಾನ್ ಖಾನ್ ಅವರ ಮತ್ತೊಬ್ಬ ಸಹೋದರಿ ಅಲೀಮಾ ಖಾನಾ ಕೂಡ ಅಡಿಯಾಲಾ ಜೈಲು ಸೂಪರಿಂಟೆಂಡೆಂಟ್ ಮತ್ತು ಇತರರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಅಲ್ಲದೆ, ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಮತ್ತು ಇತರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನಾಯಕರ ಸಮ್ಮುಖದಲ್ಲಿ ಅಲೀಮಾ ಅರ್ಜಿಯನ್ನು ಸಲ್ಲಿಸಿದ್ದಾರೆ. 2023 ಆಗಸ್ಟ್​ನಿಂದ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿರುವ ಇಮ್ರಾನ್ ಖಾನ್ ವಾರಕ್ಕೆ ಎರಡು ಬಾರಿ ಸಭೆ ನಡೆಸುವ ವೇಳಾಪಟ್ಟಿಯನ್ನು ಪುನಃಸ್ಥಾಪಿಸಿದ ನ್ಯಾಯಾಲಯದ ಮಾರ್ಚ್ 24 ರ ಆದೇಶವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅದರೆ, ನ್ಯಾಯಾಲಯದ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಅನುಷ್ಠಾನಗೊಳಿಸದಿದ್ದಕ್ಕಾಗಿ, ವಿಶೇಷವಾಗಿ ಖಾನ್ ಅವರೊಂದಿಗಿನ ಸಭೆಗಳಿಗೆ ಅವಕಾಶ ನೀಡಲು ಅಧಿಕಾರಿಗಳು ವಿಫಲವಾದ ಕಾರಣಕ್ಕಾಗಿ ಅಲೀಮಾ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೋರಿದ್ದಾರೆ,(ಏಜೆನ್ಸೀಸ್).