Imran Khan 
ವಿದೇಶ

ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್​ ದಂಪತಿಗೆ ಶಿಕ್ಷೆ; ದೇಶಾದ್ಯಂತ ಪ್ರತಿಭಟನೆಗೆ ಕರೆ |Imran Khan

ಪ್ರಮುಖ ಮುಖ್ಯಾಂಶಗಳು

  • ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್​ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
  • . ತಮ್ಮ ವಿರುದ್ಧದ ತೀರ್ಪನ್ನು ಪ್ರಶ್ನಿಸಿ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸುವುದಾಗಿ ಇಮ್ರಾನ್​ ಖಾನ್​ ಹೇಳಿಕೆ
  • ಪಾಕಿಸ್ತಾನದ ನ್ಯಾಯಾಂಗದ ಮೇಲೆ ಜನರಿಗೆ ನಂಬಿಕೆ ಇಲ್ಲವಾಗಿದೆ : ಅಸಾದ್ ಕೈಸರ್, ಪಿಟಿಐ ಹಿರಿಯ ನಾಯಕ
ಪಾಕಿಸ್ತಾನ : ಭ್ರಷ್ಟಾಚಾರ ಪ್ರಕರಣದಲ್ಲಿ ತಮಗೆ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಿರ್ಣಯವನನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗೆ ಸಿದ್ಧರಾಗುವಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ತಮ್ಮ ವಿರುದ್ಧದ ತೀರ್ಪನ್ನು ಪ್ರಶ್ನಿಸಿ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸುವುದಾಗಿ ಇಮ್ರಾನ್​ ಖಾನ್​ ಘೋಷಿಸಿದ್ದಾರೆ. ಪ್ರಸ್ತುತ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಪ್ರವೇಶವಿಲ್ಲದ ಕಾರಣ, ತಮ್ಮ ಕಾನೂನು ತಂಡದ ಮೂಲಕ ಈ ಸಂದೇಶವನ್ನು ರವಾನಿಸಿದ್ದಾರೆ. ಕಳೆದ ಮೂರು ವರ್ಷಗಳ ಆಧಾರರಹಿತ ಆರೋಪಗಳು ಮತ್ತು ಶಿಕ್ಷೆಗಳಿಗೆ ನಾನು ಒಳಗಾಗುತ್ತಾ ಬಂದಿದ್ದೇನೆ ಹೀಗಾಗಿ ತೋಷಖಾನಾ-II ಪ್ರಕರಣ ನನಗೆ ಹೊಸದೇನಲ್ಲ. ಈ ನಿರ್ಧಾರವನ್ನು ನ್ಯಾಯಾಧೀಶರು ಯಾವುದೇ ಪುರಾವೆಗಳಿಲ್ಲದೆ ಮತ್ತು ಕಾನೂನು ನಿಯಮಾವಳಿಗಳನ್ನು ಪೂರೈಸದೆ ತರಾತುರಿಯಲ್ಲಿ ತೀರ್ಪನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧಿಕೃತ ಹೇಳಿಕೆಯಲ್ಲಿ ಈ ತೀರ್ಪು ಅಸಂವಿಧಾನಿಕ, ಕಾನೂನುಬಾಹಿರ, ದುರುದ್ದೇಶಪೂರಿತ ಮತ್ತು ರಾಜಕೀಯ ಸೇಡಿನ ಕೆಟ್ಟ ರೂಪ ಎಂದು ಬಣ್ಣಿಸಿದೆ. ಪಿಟಿಐ ಹಿರಿಯ ನಾಯಕ ಅಸಾದ್ ಕೈಸರ್ ಜೊತೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಿಟಿಐ ಪ್ರಧಾನ ಕಾರ್ಯದರ್ಶಿ ಸಲ್ಮಾನ್ ಅಕ್ರಮ್ ರಾಜಾ, ಇಮ್ರಾನ್ ಖಾನ್ ಅವರು ನ್ಯಾಯಾಲಯದಲ್ಲಿ ತಮ್ಮ ಪ್ರಮುಖ ವಕೀಲ ಬ್ಯಾರಿಸ್ಟರ್ ಸಲ್ಮಾನ್ ಸಫ್ದರ್ ಅವರನ್ನು ಭೇಟಿಯಾಗಿ ರಾಷ್ಟ್ರಕ್ಕಾಗಿ ಸಂದೇಶವನ್ನು ಹಂಚಿಕೊಂಡಿದ್ದಾರೆ. ನಾನು ದೃಢವಾಗಿ ಮತ್ತು ದೃಢನಿಶ್ಚಯದಿಂದ ನಿಂತಿದ್ದೇನೆ ಮತ್ತು ಏನೇ ಬಂದರೂ ಯಾರಿಗೂ ಕ್ಷಮೆಯಾಚಿಸುವುದಿಲ್ಲ ಎಂದು ಖಾನ್ ಹೇಳಿದ್ದನ್ನು ಅವರು ಉಲ್ಲೇಖಿಸಿದರು.
ನ್ಯಾಯಾಂಗವು ತುಂಬಾ ದುರ್ಬಲವಾಗಿದೆ, ಸಾರ್ವಜನಿಕರಿಗೆ ಅದರ ತೀರ್ಪುಗಳಲ್ಲಿ ಇನ್ನು ಮುಂದೆ ಯಾವುದೇ ವಿಶ್ವಾಸವಿಲ್ಲ. ಇತ್ತೀಚೆಗೆ, ಮೇ 9 ರಂದು, ಅನೇಕ ಜನರಿಗೆ ಶಿಕ್ಷೆ ವಿಧಿಸಲಾಯಿತು. ಅವರಲ್ಲಿ ಹಲವರು ಸ್ಥಳದಲ್ಲಿಯೇ ಇರಲಿಲ್ಲ, ಆದರೂ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ತೋಷಖಾನಾ 2 ಪ್ರಕರಣದಲ್ಲಿ, ನ್ಯಾಯಾಲಯವು ಇಮ್ರಾನ್ ಖಾನ್ ಮತ್ತು ಅವರ ಪತ್ನಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸತ್ಯವೆಂದರೆ, ನ್ಯಾಯಾಲಯಗಳು ಏನು ಬೇಕಾದರೂ ಹೇಳಬಹುದು, ಮತ್ತು ನಮ್ಮ ಆಡಳಿತಗಾರರು ಏನು ಬೇಕಾದರೂ ಹೇಳಬಹುದು, ಆದರೆ ಸಾರ್ವಜನಿಕರಿಗೆ ಈ ನ್ಯಾಯಾಲಯಗಳ ಮೇಲೆ ಅಥವಾ ಈ ಶಿಕ್ಷೆಗಳ ಮೇಲೆ ವಿಶ್ವಾಸವಿಲ್ಲ ಎಂದು ಲಾಹೋರ್ ನಿವಾಸಿ ಹಮೀದ್ ರಿಯಾಜ್ ಡೋಗರ್ ಹೇಳಿದರು. ಈ ತೀರ್ಪು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಮತ್ತಷ್ಟು ದುರ್ಬಲಗೊಳಿಸಿದೆ. "ಇದು ಪಾಕಿಸ್ತಾನದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸಿದ ಒಂದು ಕೈಗನ್ನಡಿ ಎಂದು ನಾವು ನಂಬುತ್ತೇವೆ ಎನ್ನುವುದು ಲಾಹೋರ್ ಮತ್ತು ಪೇಶಾವರದ ನಿವಾಸಿಗಳ ಅನಿಸಿಕೆಯಾಗಿದೆ.(ಏಜನ್ಸೀಸ್).