ಸ್ಟ್ಯಾನ್‌ಫೋರ್ಡ್ಳ: ಗೂಗಲ್ ಗ್ಲಾಸ್ ಯೋಜನೆಯ ಸಮಯದಲ್ಲಿ "ನಾನು ಮುಂದಿನ ಸ್ಟೀವ್ ಜಾಬ್ಸ್ ಆಗಿ ಈ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ಯಶಸ್ವಿಗೊಳಿಸಬಲ್ಲೆ" ಎಂದು ತಾನು ಭಾವಿಸಿದ್ದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಂಸ್ಥಾಪಕ ಸೆರ್ಗೆ ಬ್ರಿನ್ ತಮ್ಮ ತಪ್ಪವೊಂದನ್ನು ಇದೀಗ ಬಹಿರಂಗಪಡಿಸಿದ್ದಾರೆ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ಇಂಜಿನಿಯರಿಂಗ್ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
2013ರಲ್ಲಿ ಬಿಡುಗಡೆಯಾದ ಗೂಗಲ್ ಗ್ಲಾಸ್ ಎಆರ್ (ಆಗ್ಮೆಂಟೆಡ್ ರಿಯಾಲಿಟಿ) ಕನ್ನಡಕವಾಗಿತ್ತು. ಇದು ಭವಿಷ್ಯದ ತಂತ್ರಜ್ಞಾನದ ಸಂಕೇತವೆಂದು ಪ್ರಚಾರವಾಗಿತ್ತು. ಆದರೆ ಉತ್ಪನ್ನ ಅಪೂರ್ಣವಾಗಿದ್ದರಿಂದ, ದುಬಾರಿಯಾಗಿದ್ದರಿಂದ ಮತ್ತು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಪಾಲಿಶ್ ಆಗದೇ ಇದ್ದ ಕಾರಣದಿಂದ ಇದು ವೈಫಲ್ಯ ಕಂಡಿತು. ಕೇವಲ ಎರಡು ವರ್ಷಗಳಲ್ಲಿ ಗ್ರಾಹಕ ಆವೃತ್ತಿಯನ್ನು ನಿಲ್ಲಿಸಲಾಗಿತ್ತು.
ವಿದ್ಯಾರ್ಥಿಗಳೊಬ್ಬರು "ಉದ್ಯಮಿಗಳು ಹಿಂದಿನ ತಪ್ಪುಗಳನ್ನು ಮರುಕಳಿಸದಂತೆ ಯಾವ ಮನೋಭಾವವನ್ನು ಹೊಂದಿರಬೇಕು?" ಎಂದು ಕೇಳಿದಾಗ, ಬ್ರಿನ್ ಅವರು ಈ ಘಟನೆಯನ್ನು ಉದಾಹರಣೆಯಾಗಿ ತೋರಿಸಿ, ಉತ್ಪನ್ನವನ್ನು ಮಾರುಕಟ್ಟೆಗೆ ತಳ್ಳುವ ಮೊದಲು ಅದು ಸಂಪೂರ್ಣವಾಗಿ ಸಿದ್ಧವಾಗಿರಬೇಕು, ವೆಚ್ಚ-ಪ್ರಯೋಜನಕ್ಕೆ ತಕ್ಕಂತೆ ಇರಬೇಕು ಮತ್ತು ಗ್ರಾಹಕರ ದೃಷ್ಟಿಯಿಂದ ಪರಿಪೂರ್ಣವಾಗಿರಬೇಕು ಎಂದು ಸಲಹೆ ನೀಡಿದರು.
ಈ ಪಾಠ ವಿದ್ಯಾರ್ಥಿಗಳಿಗೆ ಮತ್ತು ಆಕಾಂಕ್ಷಿ ಉದ್ಯಮಿಗಳಿಗೆ ಬಹಳ ಮುಖ್ಯ. ಯಶಸ್ಸಿನ ಕಥೆಗಳು ಸುಲಭವಾಗಿ ಕಾಣುತ್ತವಾದರೂ, ವೈಫಲ್ಯಗಳಿಂದ ಕಲಿಯುವುದೇ ನಿಜವಾದ ಬೆಳವಣಿಗೆಗೆ ದಾರಿ. ಬ್ರಿನ್ ಅವರಂತೆ ದಿಗ್ಗಜರೂ ತಪ್ಪು ಮಾಡುತ್ತಾರೆ, ಆದರೆ ಅದನ್ನು ಒಪ್ಪಿಕೊಂಡು ಮುಂದುವರಿಯುವುದು ಯಶಸ್ಸಿನ ಗುಟ್ಟು,(ಏಜೆನ್ಸೀಸ್).