Trump repeats claim he ended India-Pakistan conflict 
ವಿದೇಶ

'ನಾನು ಒಟ್ಟು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ!': ಭಾರತ-ಪಾಕ್​ ಕದನ ವಿರಾಮಕ್ಕೆ ಕಾರಣಕರ್ತ ನಾನು ಎಂದು ಹಳೇ ರಾಗ ತೆಗೆದ Donald Trump

ಪ್ರಮುಖ ಮುಖ್ಯಾಂಶಗಳು

  • ಸುಂಕದ ಬೆದರಿಕೆಯ ಮೂಲಕ ಭಾರತ-ಪಾಕ್ ಪರಮಾಣು ಯುದ್ಧ ತಡೆದಿದ್ದೆ ಎಂದ ಟ್ರಂಪ್
  • "ಯುದ್ಧ ನಿಲ್ಲಿಸದಿದ್ದರೆ ಶೇ. 200 ರಷ್ಟು ವ್ಯಾಪಾರ ಸುಂಕ ವಿಧಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದೆ ಎಂದ ಟ್ರಂಪ್
  • ಟ್ರಂಪ್ ಮಧ್ಯಸ್ಥಿಕೆಯಿಂದ 3 ಕೋಟಿ ಜೀವಗಳು ಉಳಿದಿವೆ ಎಂದು ಪಾಕ್ ಪ್ರಧಾನಿ ಶ್ಲಾಘಿಸಿದ್ದರು ಎಂದು ಹೇಳಿಕೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಮ್ಮ ಹಳೇ ರಾಗವನ್ನು ಮತ್ತೆ ತೆಗೆದಿದ್ದಾರೆ. 'ನಾನು ಸುಂಕ ಏರಿಕೆ ಮಾಡುವ ಬೆದರಿಕೆ ಬಳಸಿ ಭಾರತ ಮತ್ತು ಪಾಕಿಸ್ತಾನ(India-Pakistan conflict) ಸೇರಿದಂತೆ ಒಟ್ಟು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎನ್ನುವ ವಾದವನ್ನು ಮುನ್ನೆಲೆಗೆ ತಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಪರ್​ ಲೀಡರ್​ ಆಗುವ ಹಪಾಹಪಿ ಮತ್ತೊಮ್ಮೆ ಬಯಲಾಗಿದೆ. ವೆನೆಜುವೆಲಾ, ನಂತರ ಗ್ರೀನ್‌ಲ್ಯಾಂಡ್ ಮೇಲಿನ ವ್ಯಾಮೋಹ, ಇರಾನ್ ಮೇಲಿನ ವೈಮಾನಿಕ ದಾಳಿ ಹಾಗೂ ಬೆದರಿಕೆಗಳು, ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆಗಿನ ಹಳಸಿದ ಸಂಬಂಧ... ಹೀಗೆ ಟ್ರಂಪ್ ಅವರ ವಿವಾದಾತ್ಮಕ ನಿರ್ಧಾರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನದ ಸುಂಕ ಹೇರಿಕೆ ಬೆದರಿಕೆ ಹಾಕಿದ್ದರಿಂದಲೇ ಅವರು ಕದನವಿರಾಮಕ್ಕೆ ಒಪ್ಪಿಕೊಂಡಿದ್ದು ಎಂದು ಹೇಇಕೊಂದಿದ್ದಾರೆ. ಇಷ್ಟೇ ಅಲ್ಲದೇ 8 ರಾಷ್ಟ್ರಗಳ ಯುದ್ಧ ನಿಲ್ಲಿಸುವಲ್ಲಿ ಮೇಲುಗೈ ನನ್ನದಿದೆ ಎಂದು ಮಾತನಾಡಿರವ ವಿಡಿಯೋಗಳು ವೈರಲ್ ಆಗಿದೆ.

ಟ್ರಂಪ್ ತಗಾದೆ ಏನು?

ನಾನು ಸುಂಕಗಳ ಬೆದರಿಕೆ ಬಳಸಿಯೇ ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಒಟ್ಟು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ನಾನು ನಿಲ್ಲಿಸಿದ ಎಂಟು ಯುದ್ಧಗಳಲ್ಲಿ ಐದು ಯುದ್ಧಗಳು ಕೇವಲ ಸುಂಕಗಳ ಹೆದರಿಕೆಯಿಂದಲೇ ನಿಂತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಹೇಳಿಕೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನಕ್ಕೆ ಕೊಟ್ಟ ಎಚ್ಚರಿಕೆ ಹೀಗಿತ್ತಂತೆ, ನೀವೇನಾದರೂ ಹೋರಾಟವನ್ನು ಮುಂದುವರಿಸಿದರೆ, ನಿಮ್ಮ ದೇಶದ ಮೇಲೆ ಶೇ.200 ರಷ್ಟು ವ್ಯಾಪಾರ ಸುಂಕವನ್ನು ಏರಿಕೆ ಮಾಡಲಾಗುತ್ತದೆ. ಪರಮಾಣು ಸಜ್ಜಿತ ಹಾಗೂ ಬಲಿಷ್ಠ ರಾಷ್ಟ್ರಗಳಾಗಿರುವ ಆ ಎರಡು ನೆರೆಹೊರೆಯವರು ಮಹಾ ವಿನಾಶಕಾರಿ ಯುದ್ಧದ ಅಂಚಿನಲ್ಲಿದ್ದರು. ಆಗಲೇ 11 ವಿಮಾನಗಳು ಹೊಡೆದು ಉರುಳಿಸಲ್ಪಟ್ಟಿದ್ದವು. ಹೀಗಾಗಿ ಅನಿವಾರ್ಯದಿಂದಾಗಿ ಯುದ್ಧಕ್ಕೆ ಬ್ರೇಕ್ ಕೊಡಲಾಯ್ತು ಎಂದಿದ್ದಾರೆ.
ನನ್ನ ಈ ಕಾರ್ಯವನ್ನು ಸ್ವತಃ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಕೊಂಡಾಡಿದ್ದರು. ಈ ಯುದ್ಧವನ್ನು ನಿಲ್ಲಿಸುವ ಮೂಲಕ ಅಧ್ಯಕ್ಷ ಟ್ರಂಪ್ ಅವರು ಕನಿಷ್ಠ 30 ಮಿಲಿಯನ್ ಅಂದರೆ ಮೂವತ್ತು ಕೋಟಿ ಜನರ ಜೀವವನ್ನು ಉಳಿಸಿದಂತೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದರು ಎಂದು ಸಂದರ್ಶನ ನಡೆದ ಸಂದರ್ಭದಲ್ಲಿ ಹೇಳಿದರು.

ಭಾರತ -ಪಾಕ್​ ನಡುವಿನ ಸಂಘರ್ಷ

2025 ರ ಏಪ್ರಿಲ್ 22 ರಂದು ಪಹಲ್ಗಾಮ್​​ನಲ್ಲಿದ್ದ ಪ್ರವಾಸಿಗರ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಪುರುಷರನ್ನೇ ಗುರಿಯಾಗಿಸಿಕೊಂಡು ನಡೆಸಿದ ದಾಳಿ ಇದಾಗಿತ್ತು ಎಂದು ತೋರುತ್ತಿತ್ತು. ಧರ್ಮವನ್ನು ಕೇಳಿ, ಕಲ್ಮಾ ಪಠಿಸಲು ಹೇಳಿ ಕನಿಷ್ಠ 26 ಅಮಾಯಕರನ್ನು ಕೊಂದಿದ್ದರು. ಈ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ಮೇ 7, 2025 ರಂದು 'ಆಪರೇಷನ್ ಸಿಂಧೂರ್' ಅನ್ನು ಪ್ರಾರಂಭಿಸಿತ್ತು, (ಏಜೆನ್ಸೀಸ್).