Donald Trump 
ವಿದೇಶ

8 ಯುದ್ಧ ನಾನೇ ನಿಲ್ಲಿಸಿದ್ದೇನೆ, ಪುಟಿನ್​ದೊಂದೇ ಬಾಕಿ ಇದೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಸೌದಿ ಅರೇಬಿಯಾ: "ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪುನರುಚ್ಚಾರ ಮಾಡಿದ್ದಾರೆ.
ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗಿನ ಪ್ರಮುಖ ಪ್ರಾದೇಶಿಕ ಮತ್ತು ಆರ್ಥಿಕ ವಿಷಯಗಳ ಕುರಿತು ಚರ್ಚಿಸಿದ ಸಂದರ್ಭದಲ್ಲಿ ಬುಧವಾರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
"ನಾನು ವಾಸ್ತವವಾಗಿ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ, ಪುಟಿನ್ ಜೊತೆಗೆ ನನಗೆ ಇನ್ನೊಂದು ಯುದ್ಧವಿದೆ. ಪುಟಿನ್ ಬಗ್ಗೆ ನನಗೆ ಸ್ವಲ್ಪ ಆಶ್ಚರ್ಯವಾಗಿದೆ. ನಾನು ಭಾವಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದೆ." ಎಂದಿದ್ದಾರೆ.
ನಾವು ಭಾರತ ಮತ್ತು ಪಾಕಿಸ್ತಾನವನ್ನು ನಿಲ್ಲಿಸಿದ್ದೇವೆ. ನಾನು ಪಟ್ಟಿಯನ್ನು ಪರಿಶೀಲಿಸಬಲ್ಲೆ. ನನಗಿಂತ ನಿಮಗೆ ಪಟ್ಟಿ ಚೆನ್ನಾಗಿ ತಿಳಿದಿದೆ(ಯುದ್ಧ ನಿಲ್ಲಿಸಿದ ಬಗ್ಗೆ ) ಎಂದರು.
ಏತನ್ಮಧ್ಯೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು ಎಂಬ ಹೇಳಿಕೆಯನ್ನು ಭಾರತ ತಿರಸ್ಕರಿಸಿತ್ತು. ವಿದೇಶಾಂಗ ಸಚಿವಾಲಯವು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವಿಲ್ಲದೆ ಕದನ ವಿರಾಮವನ್ನು ಅನುಸರಿಸಿತು ಎಂದು ಹೇಳಿದೆ.
ಆದಾಗ್ಯೂ, ಭಾರತದೊಂದಿಗಿನ ಸಂಘರ್ಷವನ್ನು ತಪ್ಪಿಸಲು ಅಧ್ಯಕ್ಷ ಟ್ರಂಪ್ ಸಹಾಯ ಮಾಡಿದ್ದಾರೆ ಎಂಬ ಹೇಳಿಕೆಯನ್ನು ಪಾಕಿಸ್ತಾನ ಸದ್ದಿಲ್ಲದೆ ಸ್ವೀಕರಿಸಿದ. ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಹಾಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಎಂದು ವರದಿಯಾಗಿದ (ಏಜೆನ್ಸೀಸ್​).