ಭವಿಷ್ಯದಲ್ಲಿ ಮಾನವನ ಉಳಿವಿಗೆ ಅತಿದೊಡ್ಡ ಸವಾಲಾಗಲಿವೆ ಈ ರೋಬಾಟ್​ ಅನ್ನೋದಕ್ಕೆ ಇದೊಂದು ವಿಡಿಯೋ ಸಾಕು! | Humanoid Robots  
ವಿದೇಶ

ಭವಿಷ್ಯದಲ್ಲಿ ಮಾನವನ ಉಳಿವಿಗೆ ಅತಿದೊಡ್ಡ ಸವಾಲಾಗಲಿವೆ ಈ ರೋಬಾಟ್​ ಅನ್ನೋದಕ್ಕೆ ಇದೊಂದು ವಿಡಿಯೋ ಸಾಕು! | Humanoid Robots

Humanoid Robots: ಮಾನವನ ಕಲ್ಪನೆ, ಊಹೆಗೂ ಮೀರಿದ ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರ ಮತ್ತು ಪ್ರಯೋಗಗಳಿಗೆ ಹೆಸರುವಾಸಿಯಾರುವ ಚೀನಾ ಇದೀಗ ಮತ್ತೊಂದು ರೋಮಾಂಚನಕಾರಿ ಘಟನೆಗೆ ಸಾಕ್ಷಿಯಾಗಿದೆ.

ಪವಿತ್ರ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಚೀನಾದ ಶಾಂಡೊಂಗ್ ಪ್ರಾಂತ್ಯದ ಅತ್ಯಂತ ಎತ್ತರದ ಪರ್ವತವಾದ 'ಮೌಂಟ್ ತೈ' ಮೇಲೆ ಮೊಟ್ಟೆ ಮತ್ತು ಕಲ್ಲಂಗಡಿ ಹಣ್ಣಿನ ಕ್ರೇಟ್​ಗಳನ್ನು ತನ್ನ ಬೆನ್ನ ಮೇಲೇರಿಕೊಂಡು, ಬೆಟ್ಟವನ್ನು ಹತ್ತು ಸಾಗುವ ಹ್ಯೂಮನಾಯ್ಡ್​ ರೋಬಾಟ್​ಗಳ ಸಾಹಸಮಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರನ್ನು ಅಕ್ಷರಶಃ ನಿಬ್ಬೆರಗಾಗಿಸಿದೆ.

ಭವಿಷ್ಯದ ರೋಬಾಟ್‌ಗಳು

ಚೀನಾ ಮೀಡಿಯಾ ಗ್ರೂಪ್ (ಸಿಎಂಜಿ) ಆಯೋಜಿಸಿದ್ದ ಈ ಪ್ರಥಮ ಆವೃತ್ತಿಯ ‘ವರ್ಲ್ಡ್ ಮೌಂಟೇನ್ ರೋಬೋಟ್ ಚಾಲೆಂಜ್’ (World Mountain Robot Challenge) ಸ್ಪರ್ಧೆಯಲ್ಲಿ, ಸವಾಲಿನ ಕಲ್ಲಿನ ಮೆಟ್ಟಿಲುಗಳನ್ನು ಸುಮ್ಮನೆ ಹತ್ತುವ ಬದಲಿಗೆ ಕಲ್ಲಂಗಡಿ, ಮೊಟ್ಟೆಗಳಿರುವ ಕ್ರೇಟ್​ಗಳನ್ನು ಹೊತ್ತುಕೊಂಡೇ ಹತ್ತಿದ ಈ ಅತ್ಯಾಧುನಿಕ ರೋಬಾಟ್‌ಗಳು ತಮ್ಮದು ಮನುಷ್ಯನ ಸಾಮರ್ಥ್ಯವನ್ನೂ ಮೀರಿದ್ದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.

ರೋಬಾಟ್‌ಗಳ ಈ ಕಸರತ್ತು ಸುಮಾರು 3,000ಕ್ಕೂ ಹೆಚ್ಚು ಮೆಟ್ಟಿಲುಗಳು, 3.9 ಕಿಲೋಮೀಟರ್ ಉದ್ದದ ಹಾದಿ ಹಾಗೂ 600 ಮೀಟರ್‌ಗಳಿಗೂ ಹೆಚ್ಚಿನ ಕಡಿದಾದ ಸವಾಲಿನ ದಾರಿಯಾಗಿತ್ತು ಎನ್ನಲಾಗಿದೆ. ಚೀನಾದ ಒಟ್ಟು 90 ಪ್ರಮುಖ ತಂಡಗಳ ರೋಬಾಟ್‌ಗಳು ಮತ್ತು ಅವುಗಳ ಇಂಜಿನಿಯರ್‌ಗಳು ಭಾಗವಹಿಸಿದ್ದರು ಎಂದು ವರದಿಗಳು ಉಲ್ಲೇಖಿಸಿವೆ. ಸ್ಪರ್ಧೆಯ ಭಾಗವಾಗಿ ರೋಬಾಟ್‌ಗಳು ಕೇವಲ ಮೆಟ್ಟಿಲು ಹತ್ತುವುದು ಮಾತ್ರವಲ್ಲದೆ, ಕಲ್ಲಂಗಡಿ ಹಣ್ಣುಗಳು, ತಾಜಾ ಕೋಳಿ ಮೊಟ್ಟೆಗಳು ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ಹೊಂದಿರುವ ಕ್ರೇಟ್​ಗಳನ್ನು ಯಶಸ್ವಿಯಾಗಿ ಹೊತ್ತು ಪರ್ವತದ ತುದಿಯನ್ನು ಸಾಗಿವೆ.

ಬಿದ್ದರೂ ಎದ್ದು ನಿಲ್ಲುವ ತಂತ್ರಜ್ಞಾನ

ಕೆಲವು ರೋಬೋಟ್‌ಗಳು ಅತ್ಯಂತ ಶಿಸ್ತಿನಿಂದ ಮೆಟ್ಟಿಲುಗಳನ್ನು ಹತ್ತಿದರೆ, ಮಾನವರೂಪಿಯಾದ ಈ ರೋಬಾಟ್ ಒಂದು ಕಲ್ಲಿನ ಹಾದಿಯಲ್ಲಿ ಕಂಟ್ರೋಲ್​ ತಪ್ಪಿ ಬಿದ್ದಾಗ ಇಂಜಿನಿಯರ್‌ಗಳು ತಕ್ಷಣವೇ ದುರಸ್ತಿ ಮಾಡಿದರು. ಮತ್ತೊಂದು ರೋಬಾಟ್ ಮೆಟ್ಟಿಲುಗಳಿಂದ ಜಾರಿ ಬಿದ್ದು, ನೇರವಾಗಿ ಕಸದ ಬುಟ್ಟಿಗೆ ಬಿದ್ದ ಘಟನೆಯೂ ನಡೆದಿವೆ.

ಸಾಮಾನ್ಯ ಪ್ರವಾಸಿಗರು ಈ ಪರ್ವತದ ಹಾದಿಯನ್ನು ಕ್ರಮಿಸಲು ಕನಿಷ್ಠ 2 ಗಂಟೆಗಳ ಸಮಯ ತೆಗೆದುಕೊಳ್ಳುತ್ತಾರೆ. ಆದರೆ, ಈ ರೋಬಾಟ್‌ಗಳು ಅಚ್ಚರಿಯ ವೇಗದಲ್ಲಿ ಈ ಸಾಧನೆ ಮಾಡಿವೆ. ನಾಲ್ಕು ಕಾಲಿನ ರೋಬಾಟ್ ವಿಭಾಗ ರೋಬಾಟಿಕ್ಸ್ ರಂಗದ ದೈತ್ಯ ಸಂಸ್ಥೆ ಯೂನಿಟ್ರೀನ ಅಂಗಸಂಸ್ಥೆಯಾದ 'ಬೀಜಿಂಗ್ ಲಿಂಗ್ಯಿ ಟೆಕ್ನಾಲಜಿ' (Beijing Lingyi Technology) ನಿರ್ಮಿಸಿದ ಶ್ವಾನ ರೂಪದ ನಾಲ್ಕು ಕಾಲಿನ ರೋಬೋಟ್, ಕೇವಲ 43 ನಿಮಿಷ 41 ಸೆಕೆಂಡುಗಳಲ್ಲಿ ಇಡೀ ಹಾದಿಯನ್ನು ಕ್ರಮಿಸಿ ಪ್ರಥಮ ಸ್ಥಾನ ಗಿಟ್ಟಿಸಿದೆ,(ಏಜೆನ್ಸೀಸ್).