ಬಾಬ್ ಅಲ್​ ಮಂಡೇಬ್​ ಜಲಸಂಧಿ ಮುಚ್ಚುವ ಎಚ್ಚರಿಕೆ 
ವಿದೇಶ

ಎಂಥಾ ಶಕ್ತಿ ಬಂದ್ರೂ... ಟ್ರಂಪ್​ ಹುಚ್ಚಾಟಕ್ಕೆ ಬ್ರೇಕ್​ ಹಾಕಲು ಹೌತಿಗಳ ಬಾಬ್ ಅಲ್ ಮಂಡೇಬ್ ಬ್ರಹ್ಮಾಸ್ತ್ರ!

ಪ್ರಮುಖ ಮುಖ್ಯಾಂಶಗಳು

  • ಮತ್ತೊಮ್ಮೆ ಹೊರ್ಮುಜ್​ ಜಲಸಂಧಿ ಮುಚ್ಚಿದ ಇರಾನ್​
  • ಮಧ್ಯಪ್ರಾಚ್ಯ ಉದ್ವಿಗ್ನತೆ ಮುಂದುವರಿದ ಬೆನ್ನಲ್ಲೇ ಹೌತಿಗಳ ಎಚ್ಚರಿಕೆ
  • ಬಾಬ್ ಅಲ್​ ಮಂಡೇಬ್​ ಜಲಸಂಧಿ ಮುಚ್ಚುವ ಎಚ್ಚರಿಕೆ
  • ವಿಶ್ವ ಶಾಂತಿಗೆ ಭಂಗ ತರುವ ಕ್ರಮಗಳಿಂದ ದೂರವಿರಲು ಟ್ರಂಪ್​ಗೆ ಒತ್ತಾಯ
ಯೆಮೆನ್​: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧವು ಪ್ರಪಂಚದ ಮೇಲೆ ಭಾರೀ ಪರಿಣಾಮ ಬೀರಿದೆ. ಅತ್ತ ಕದನ ವಿರಾಮ ಘೋಷಣೆಯಾದರೂ ಕೂಡ ಎರಡು ದೇಶಗಳ ನಡುವಿನ ಸಮರ ಕೊನೆಗಾಣುತ್ತಿಲ್ಲ. ಇರಾನ್ ಮತ್ತೊಮ್ಮೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಅನೇಕ ದೇಶಗಳಲ್ಲಿ ತೈಲ ಮತ್ತು ಅನಿಲ ಬಿಕ್ಕಟ್ಟನ್ನು ತೀವ್ರಗೊಳಿಸಿದೆ. ಈ ಬೆಳವಣಿಗೆಗಳಿಂದ ಸಿಟ್ಟಾಗಿರುವ ಹೌತಿಗಳು ಈಗ ಅಮೆರಿಕ ಅಧ್ಯಕ್ಷನಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದೆ.
ಸೂಯೆಜ್ ಕಾಲುವೆಗೆ ಹೋಗುವ ದಾರಿಯಲ್ಲಿರುವ ಮತ್ತೊಂದು ಜಲಸಂಧಿಯನ್ನು ಮುಚ್ಚುವುದಾಗಿ ಯೆಮೆನ್‌ನಲ್ಲಿರುವ ಹೌತಿಗಳು ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ವಿಶ್ವ ಶಾಂತಿಗೆ ಭಂಗ ತರುವ ಕ್ರಮಗಳನ್ನು ಮುಂದುವರಿಸಿದರೆ ಬಾಬ್ ಅಲ್ ಮಂದೇಬ್ ಜಲಸಂಧಿಯನ್ನು ಕ್ಲೋಸ್​ ಮಾಡುವುದಾಗಿ ಘೋಷಿಸಲಾಗಿದೆ. ಒಮ್ಮೆ ನಾವು ಜಲಸಂಧಿ ಮುಚ್ಚಿದರೆ, ಜಗತ್ತಿನಲ್ಲಿ ಯಾರೂ ಅದನ್ನು ಮತ್ತೆ ತೆರೆಯಲು ಸಾಧ್ಯವಿಲ್ಲ ಎಂದು ಹೌತಿ ಸಚಿವ ಹುಸೇನ್ ಹೇಳಿದ್ದಾರೆ.
ಈ ಮೂಲಕ ವಿಶ್ವ ಶಾಂತಿಗೆ ಅಡ್ಡಿಯಾಗುವ ಎಲ್ಲಾ ಕ್ರಮಗಳನ್ನು ತಕ್ಷಣ ನಿಲ್ಲಿಸುವಂತೆ ಹೌತಿಗಳು ಟ್ರಂಪ್‌ಗೆ ಎಚ್ಚರಿಸಿದ್ದಾರೆ. ಈ ವಿನಾಶದಿಂದ ಹಿಂದೆ ಸರಿಯುವಂತೆ ಅಮೆರಿಕಾಗೆ ಬೆಂಬಲಿಸುವ ದೇಶಗಳಿಗೂ ಎಚ್ಚರಿಕೆ ಕೊಡಲಾಗಿದೆ. ಮತ್ತೊಂದೆಡೆ, ಇಸ್ರೇಲ್ ಜೊತೆಗಿನ ಏಕಪಕ್ಷೀಯ ಕದನ ವಿರಾಮ ಒಪ್ಪಂದ ಲೆಬನಾನ್‌ಗೆ ಅವಮಾನ ಎಂದು ಹೆಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಹೇಳಿದ್ದಾರೆ,(ಏಜೆನ್ಸೀಸ್).