ಸಾಂದರ್ಭಿಕ ಚಿತ್ರ  
ವಿದೇಶ

ಇದೆಂಥಾ ವಿಚಿತ್ರ? ಹೊರ್ಮುಜ್​ ಜಲಸಂಧಿ ದಾಳಿಗೆ ಪಣತೊಟ್ಟ ಅಮೆರಿಕ ಸೈನಿಕನ ಮೇಲೆ ವಾನರ ದಾಳಿ! | Hormuz Mission

ಪ್ರಮುಖ ಮುಖ್ಯಾಂಶಗಳು

  • ಹೊರ್ಮುಜ್​ ಮಿಷನ್ ತಡೆಗಟ್ಟಲು ಮುಂದಾದ ಅಮೆರಿಕ ಸೈನಿಕನ ಮೇಲೆ ಕೋತಿ ದಾಳಿ ​
  • ವಾನರ ದಾಳಿಗೆ ಗಾಯಗೊಂಡ ಸೈನಿಕ ಆಸ್ಪತ್ರೆ ಪಾಲು
Hormuz Mission: ಹೊರ್ಮುಜ್​ ಜಲಸಂಧಿಯನ್ನು ಯಾವುದೇ ಕಾರಣಕ್ಕೂ ಓಪನ್ ಮಾಡೋದಿಲ್ಲ ಎಂದು ಪಟ್ಟು ಹಿಡಿದು ಕೂತಿರುವ ಇರಾನ್​ಗೆ ತಕ್ಕ ಪಾಠ ಕಲಿಸಲು ಮುಂದಾದ ಅಮೆರಿಕ ಸೈನಿಕರ ಮೇಲೆ ದಿಢೀರ್​ ಎಂಬಂತೆ ಕೋತಿಯೊಂದು ದಾಳಿ ಮಾಡಿದ ಘಟನೆ ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ.
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ನಡುವೆ, ಹೊರ್ಮುಜ್ ಜಲಸಂಧಿಯಲ್ಲಿ ಗಣಿಗಳನ್ನು ತೆರವುಗೊಳಿಸಲು ಹೊರಟಿದ್ದ ಅಮೆರಿಕ ನೌಕಾಪಡೆಯ ತಂಡವು ವಾನರ ನಡೆಸಿದ ದಾಳಿಗೆ ಕಕ್ಕಾಬಿಕ್ಕಿಯಾಯಿತು. ಹೊರ್ಮುಜ್​ ಮಿಷನ್​ ಮೇಲೆ ಕಣ್ಣಿಟ್ಟಿದ್ದ ಅಮೆರಿಕ ಮಿಲಿಟರಿ ಸೈನಿಕನ ಮೇಲೆ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಕೋತಿಯೊಂದು ಏಕಾಏಕಿ ದಾಳಿ ನಡೆಸಿತು. ಕೆಲ ಸಮಯ ಮಂಗನ ಕಚ್ಚಾಟಕ್ಕೆ ಒದ್ದಾಡಿದ ಸೈನಿಕ ಗಾಯಗೊಂಡಿದ್ದಾಗಿ ವರದಿಯಾಗಿದೆ.

ಕಾರ್ಯಾಚರಣೆಗೆ ಯಾವುದೇ ತೊಂದರೆಯಿಲ್ಲ

ಅಮೆರಿಕದ 7ನೇ ಫ್ಲೀಟ್ ಪ್ರತಿನಿಧಿಗಳು, ಕೋತಿಯ ದಾಳಿಯಿಂದ ಹೊರ್ಮುಜ್ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಯುಎಸ್ಎಸ್ ಚೀಫ್ ಸೇರಿ ಇನ್ನೆರಡು ಹಡಗುಗಳು ತಮ್ಮ ಸಿಬ್ಬಂದಿಯೊಂದಿಗೆ ಮಧ್ಯಪ್ರಾಚ್ಯಕ್ಕೆ ಈಗಾಗಲೇ ತೆರಳಿವೆ ಎಂದು ತಿಳಿಸಿದ್ದಾರೆ.

ಟ್ರಂಪ್ ಆದೇಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊರ್ಮುಜ್​ ಜಲಸಂಧಿಯಲ್ಲಿ ಗಣಿ ತೆರವು ಕಾರ್ಯವನ್ನು ವೇಗಗೊಳಿಸಲು ತಮ್ಮ ಸೇನೆಗೆ ಆದೇಶಿಸಿದ್ದಾರೆ. ಜಲಸಂಧಿಯಲ್ಲಿ ಗಣಿಗಳನ್ನು ಇಡಲು ಪ್ರಯತ್ನಿಸುವ ಯಾವುದೇ ಸಣ್ಣ ದೋಣಿ ಕಂಡರು ತಕ್ಷಣವೇ ನಿಲ್ಲಿಸಬೇಕು. ಎಲ್ಲದಕ್ಕೂ ಸಿದ್ಧರಾಗಿರಿ ಎಂದು ಕಿವಿಮಾತು ಕೂಡ ಹೇಳಿ ಕಳುಹಿಸಿರುವುದು ಗಮನಾರ್ಹ,(ಏಜೆನ್ಸೀಸ್).